BBK 10: ಟಾಸ್ಕ್ ಗೆಲ್ಲಲು ಬಿಗ್‌ಬಾಸ್ ಮನೆಯಲ್ಲಿ ಕಾದಾಟ: ಆಟವಲ್ಲ ಕಾದಾಟವೆಂದ ನೆಟ್ಟಿಗರು!

Bigg Boss Kannada: ಬಿಗ್‌ಬಾಸ್‌ ಮನೆಯಲ್ಲಿ ಇಂದು ಸ್ಪರ್ಧಿಗಳಿಗೆ ಹೊಸ ಟಾಸ್ಕ್ ಅನ್ನು ನೀಡಲಾಗಿದ್ದು, ಅದು ಆಟ ಕಾದಾಟವಾಗಿ ಪರಿವರ್ತನೆ ಆಗಿ, ಇದನ್ನು ನೋಡಿದ ನೆಟ್ಟಿಗರು, ವೈಯಕ್ತಿಕವಾಗಿ ಒಬ್ಬರಿಗೊಬ್ಬರು ಟಾರ್ಗೆಟ್ ಮಾಡಿಕೊಂಡು ಮಾತನಾಡುತ್ತಾ ಇದ್ದಾರೆ. ಇದರ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.  

Written by - Zee Kannada News Desk | Last Updated : Nov 28, 2023, 01:51 PM IST
  • ಬಿಗ್‌ಬಾಸ್ ಮನೆಯಲ್ಲಿ ಎಲ್ಲರೂ ಕೂಡ ಬಹಳ ಅಚ್ಚುಕಟ್ಟಾಗಿ ಆಟವನ್ನು ಆಡಬೇಕು ಎಂದುಕೊಂಡಿದ್ದು, ಟೈಂ ಸಿಕ್ಕಿದಾಗಲೆಲ್ಲ ನಮ್ಮ ಶಕ್ತಿ ಎಂತದು ಎಂಬುದನ್ನು ಪ್ರದರ್ಶನಕ್ಕೆ ಇಡುತ್ತಾ ಇದ್ದಾರೆ.
  • ಇಂದು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಹೊಸ ಟಾಸ್ಕ್ ಅನ್ನು ನೀಡಲಾಗಿದ್ದು, ಅದರಲ್ಲಿ ಮಣ್ಣಿನ ಮಕ್ಕಳು ಹಾಗೂ ವಿಕ್ರಾಂತ್ ಎಂದು ಎರಡು ತಂಡಗಳನ್ನು ಮಾಡಲಾಗಿದೆ.
  • ಬಿಗ್‌ಬಾಸ್ ಯಾವುದೇ ಟಾಸ್ಕ್ ನೀಡಿದರು ಸಹ ಅದು ಜಗಳದಿಂದಲೇ ಪ್ರಾರಂಭವಾಗಿ ಜಗಳದಲ್ಲೇ ಅಂತ್ಯವಾಗುತ್ತಿದೆ.
BBK 10: ಟಾಸ್ಕ್ ಗೆಲ್ಲಲು ಬಿಗ್‌ಬಾಸ್ ಮನೆಯಲ್ಲಿ ಕಾದಾಟ: ಆಟವಲ್ಲ ಕಾದಾಟವೆಂದ ನೆಟ್ಟಿಗರು! title=

Vinay Vs Tukali Santosh: ಬಿಗ್‌ಬಾಸ್ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಂಡು ಸಾಗುತ್ತಾ ಇದ್ದು, ಈಗಾಗಲೇ ಬಿಗ್ ಬಾಸ್ 8 ವಾರಗಳನ್ನು ಪೂರೈಸಿದ್ದು ಮನೆಯಲ್ಲಿರುವ ಸ್ಪರ್ಧಿಗಳಿಗೆ ನಾವು ನೂರು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದು ವಿಜೇತರಾಗಬೇಕು ಎಂಬ ಹುಮ್ಮಸ್ಸು ಬಂದಂತಿದೆ. ಇದಕ್ಕಾಗಿ ಎಲ್ಲರೂ ಕೂಡ ಬಹಳ ಅಚ್ಚುಕಟ್ಟಾಗಿ ಆಟವನ್ನು ಆಡಬೇಕು ಎಂದುಕೊಂಡಿದ್ದು, ಟೈಂ ಸಿಕ್ಕಿದಾಗಲೆಲ್ಲ ನಮ್ಮ ಶಕ್ತಿ ಎಂತದು ಎಂಬುದನ್ನು ಪ್ರದರ್ಶನಕ್ಕೆ ಇಡುತ್ತಾ ಇದ್ದಾರೆ. ಇದೀಗ ದೊಡ್ಮನೆಗೆ ಹೊಸ ಸ್ಪರ್ಧಿಗಳು ಬಂದಿದ್ದು ಮನೆ ದೊಡ್ಡದಾಗಿದ್ದು, ಹೊಸದಾಗಿ ಬಂದವರು ಕೂಡ ಈಗ ಮನೆಯಲ್ಲಿ ಎಲ್ಲರ ಹಾವಭಾವಗಳನ್ನು ನೋಡುತ್ತಾ ಇದ್ದಾರೆ. 

ಸದ್ಯ ಬಿಗ್‌ಬಾಸ್ ಮನೆಯಲ್ಲಿ ಹೊಸ ಹೊಸ ಟಾಸ್ಕ್‌ಗಳನ್ನು ನೀಡಲಾಗುತ್ತಿದ್ದು, ಎರಡು ತಂಡಗಳನ್ನು ಮಾಡಿಕೊಂಡು ಆಡುತ್ತಾ ಗೆಲ್ಲಬೇಕಾಗಿದೆ. ತಮ್ಮ ತಂಡವನ್ನು ಗೆಲ್ಲಿಸಬೇಕು ಎಂದು ಕೊಂಡು ಜಗಳಗಳನ್ನು ಸಹ ಮಾಡಿಕೊಳ್ಳುತ್ತಾ ಇರುವಾಗ ಅದು ಆಟವೋ ಅಥವಾ ಕಾದಾಟವೋ ಒಂದು ಕೂಡ ತಿಳಿಯುತ್ತಿಲ್ಲ. ಎಲ್ಲವನ್ನು ವೈಯಕ್ತಿಕವಾಗಿ ತೆಗೆದುಕೊಂಡು ಟಾರ್ಗೆಟ್ ಮಾಡುವಂತಿದೆ ಬಿಗ್‌ಬಾಸ್ ಸ್ಪರ್ಧಿಗಳ ನಡತೆ. ಬಿಗ್‌ಬಾಸ್ ಯಾವುದೇ ಟಾಸ್ಕ್ ನೀಡಿದರು ಸಹ ಅದು ಜಗಳದಿಂದಲೇ ಪ್ರಾರಂಭವಾಗಿ ಜಗಳದಲ್ಲೇ ಅಂತ್ಯವಾಗುತ್ತಿದ್ದು, ಇದುವರೆಗೂ ಸಹ ಸೀಸನ್ 10ರಲ್ಲಿ ಯಾರು ಕೂಡ ಟಾಸ್ಕ್ ಅನ್ನು ಜಗಳ ಮಾಡದೆ ಆಡಿದವರೇ ಇಲ್ಲ. ಇಂದು ಕೂಡ ಬಿಗ್ ಬಾಸ್ ಹೊಸ ಟಾಸ್ಕ್ ನೀಡಿದ್ದು ವಿನಯ್ ಹಾಗೂ ತುಕಾಲಿ ಸಂತೋಷ್ ಜಗಳವಾಡಿಕೊಂಡಿದ್ದಾರೆ. 

ಇದನೂ ಓದಿ: BBK 10: ಹೊಸ ತಿರುವು.. ವೈಲ್ಡ್‌ಕಾರ್ಡ್ ಎಂಟ್ರಿಯಿಂದ ಶುರುವಾಗುತ್ತಾ ಅಸಲಿ ಆಟ..?

ಇಂದು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಹೊಸ ಟಾಸ್ಕ್ ಅನ್ನು ನೀಡಲಾಗಿದ್ದು, ಅದರಲ್ಲಿ ಮಣ್ಣಿನ ಮಕ್ಕಳು ಹಾಗೂ ವಿಕ್ರಾಂತ್ ಎಂದು ಎರಡು ತಂಡಗಳನ್ನು ಮಾಡಲಾಗಿದೆ. ಎರಡು ಪೈಪ್‌ಗಳನ್ನು ಇಟ್ಟಿದ್ದು ಅದರ ಕೆಳಗೆ ಒಂದು ದೊಡ್ಡ ಡಬ್ ಇಡಲಾಗಿದೆ. ಯಾರು ಮೊದಲು ಪೈಪ್ ಮೂಲಕ ಡಬ್ಬಿಗೆ ನೀರನ್ನು ತುಂಬಿಸುತ್ತಾರೆ ಎಂಬುದು ಆಟದ ನಿಯಮವಾಗಿದ್ದು, ಎದುರಾಳಿ ತಂಡದವರು ನೀರು ತುಂಬಿಸುವಾಗ ನೀರನ್ನು ತುಂಬಿಸಿದಂತೆ ತಡೆಯಬೇಕು ಇದು ಟಾಸ್ಕ್‌ನ ನಿಯಮವಾಗಿದೆ. ಇನ್ನು ತುಕಾಲಿ ಸಂತು ವರ್ತೂರು ಸಂತೋಷ್ ಹತ್ತಿರ, "ನಾವು ಮನೆಯಲ್ಲಿ ಇನ್ನಷ್ಟು ದಿನ ಇರುತ್ತೇವೋ ಗೊತ್ತಿಲ್ಲ. ಆದರೆ ನಾವು ನಮ್ಮತನವನ್ನು ಬಿಟ್ಟುಕೊಟ್ಟು ಮಾತ್ರ ಆಟವನ್ನು ಆಡಬಾರದು. ಏನೇ ಆದರೂ ಸರಿಯೇ? ನಾವು ಈ ಮನೆಯಲ್ಲಿ ಯಾರು ಎಂಬುದನ್ನು ತೋರಿಸಬೇಕಾಗಿದೆ" ಎಂದು ಹೇಳಿದ್ದಾರೆ. 

ಆಟದ ವೇಳೆ ಅದೇ ನಿಯಮವನ್ನ ಆಟದಲ್ಲೂ ತೋರಿಸಲು ಮುಂದಾಗಿದ್ದು, ವಿನಯ್ ಟೀಂ ಟ್ರಿಗರ್ ಮಾಡಿದಾಗ ತುಕಾಲಿ ಸಂತೋಷ್ ತಿರುಗಿ ಬಿದ್ದಿದ್ದಾರೆ. ನಾವೇನು ಕಮ್ಮಿ ಇಲ್ಲ ನಾವು ಸಹ ತಿರುಗಿ ಬೀಳುತ್ತೇವೆ ಎಂಬುದನ್ನು ವಿನಯ್ ಟೀಮ್‌ಗೆ ತೋರಿಸಿ ಕೊಡಲು ಹೋಗಿ, ಅದು ಆಟ ಕಾದಾಟವಾಗಿ ಪರಿವರ್ತನೆ ಆಗಿದೆ. ತುಕಾಲಿ  ನೀರು ತುಂಬಲು‌ ಹೋದಾಗ ಸ್ನೇಹಿತ್ ಅಡ್ಡ ಬಂದು  ತಳ್ಳಿದಾಗ, ಈ ವೇಳೆ ತುಕಾಲಿ ಇದು ಮೋಸ ಜೋರಾಗಿ ತಳಬಾರದಿತ್ತು ಎಂದಿದ್ದಾರೆ. ಇನ್ನು ಇದೇ ವೇಳೆ ತುಕಾಲಿ ಸಂತು ನೀನು ಬೇಕು ಎಂದು ನನ್ನನ್ನು ತಳ್ಳಿದಿಯಾ ಎಂದು ವಿನಯ್ ಬಳಿ ಹೇಳಿದಾಗ, ವಿನಯ್  ಕೋಪ ಮಾಡಿಕೊಂಡು ತುಕಾಲಿ ಸಂತೋಷ್‌ಗೆ ಹೋಗೋಲೋ ಎಂದು ಹೇಳಿದ್ದಾರೆ. ತುಕಾಲಿ ಸಂತೋಷ್ ಕಾರ್ತಿಕ್‌ಗೆ ನಿಮ್ಮ ರೀತಿ ಆಟವಾಡುವುದು ಬೇಡ ಗುರು ಎಂದು ಹೇಳಿದಾಗ ವಿನಯ್ ಸುಮ್ಮನೆ ಇದ್ದಿದ್ದರೂ ಆಗುತ್ತಿತ್ತು, ಆದರೆ ತುಕಾಲಿ ಸಂತು ಮಾತು ಮುಂದುವರಿಸಿದಾಗ ಹೋಗೋಲೋ ಎಂದು ಮಾತನಾಡಿದ್ದಾರೆ. ವಿನಯ್ ಮಾತು ಕೇಳಿದ ನೆಟ್ಟಿಗರು ಇದು ಆಟವಲ್ಲ ಕಾದಾಟ, ವೈಯಕ್ತಿಕವಾಗಿ ಒಬ್ಬರಿಗೊಬ್ಬರು ಟಾರ್ಗೆಟ್ ಮಾಡಿಕೊಂಡು ಮಾತನಾಡುತ್ತಾ ಇದ್ದಾರೆ ಎಂದಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News