BBK 10: ಬಿಗ್‌ ಬಾಸ್‌ ಮನೆಯಲ್ಲಿ ರಂಗು ಚೆಲ್ಲುವ ನಾಮಿನೇಷನ್, ಪರದಾಟದಲ್ಲಿ ಕಂಟೆಸ್ಟೆಂಟ್ಸ್!

Bigg Boss 10 nomination: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಮೊದಲ ವಾರದ ಎಲಿಮಿನೇಷನ್‌ಗಾಗಿ ನಾಮಿನೇಷನ್‌ ಪ್ರಕ್ರಿಯೆ ಆರಂಭಗೊಂಡಿದೆ. ಬಿಗ್‌ ಬಾಸ್‌ ಆರಂಭವಾಗಿ ಮೂರೇ ದಿನಕ್ಕೆ ಮನೆ ಹೊತ್ತಿ ಉರಿಯುತ್ತಿದೆ.   

Written by - Chetana Devarmani | Last Updated : Oct 10, 2023, 10:08 AM IST
  • ಬಿಗ್‌ ಬಾಸ್‌ ಕನ್ನಡ ಸೀಸನ್‌ 10
  • ನಾಮಿನೇಷನ್‌ ಪ್ರಕ್ರಿಯೆ ಆರಂಭ
  • ಬೆಂಕಿಗೆ ತುಪ್ಪ ಸುರಿದಂತಾದ ಸ್ಥಿತಿ
BBK 10: ಬಿಗ್‌ ಬಾಸ್‌ ಮನೆಯಲ್ಲಿ ರಂಗು ಚೆಲ್ಲುವ ನಾಮಿನೇಷನ್, ಪರದಾಟದಲ್ಲಿ ಕಂಟೆಸ್ಟೆಂಟ್ಸ್! title=
Bigg Boss 10 nomination

Bigg Boss Kannada Season 10 : ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಮೊದಲ ವಾರದ ಎಲಿಮಿನೇಷನ್‌ಗಾಗಿ ನಾಮಿನೇಷನ್‌ ಪ್ರಕ್ರಿಯೆ ಆರಂಭಗೊಂಡಿದೆ. ಬಿಗ್‌ ಬಾಸ್‌ ಆರಂಭವಾಗಿ ಮೂರೇ ದಿನಕ್ಕೆ ಮನೆ ಹೊತ್ತಿ ಉರಿಯುತ್ತಿದೆ. ಈಗಾಗಲೇ ನೀ ತಪ್ಪು.. ನಾ ಸರಿ ಎಂಬ ಕಿಚ್ಚು ಹೊತ್ತಿಕೊಂಡಿದೆ. ಈ ಮಧ್ಯೆ ಬಂದ ನಾಮಿನೇಷನ್‌ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಮೂರನೇ ದಿನವೇ ವೈಮನಸ್ಸು ಶುರುವಾಗಿದೆ. 

ಇದನ್ನೂ ಓದಿ: ಬಿಗ್‌ ಬಾಸ್‌ ಮನೆಯಿಂದ ಒಂದೇ ದಿನಕ್ಕೆ ಹೊರಬಂದ ಪ್ರದೀಪ್‌ ಈಶ್ವರ್‌..! 

ಕನ್ಫೆಷನ್‌ ರೂಮ್‌ಗೆ ಹೋಗಿ ನಾಮಿನೇಟ್‌ ಮಾಡುವ ಬದಲು ಮೊದಲ ವಾರದಲ್ಲಿ ಮನೆಯಿಂದ ಹೊರಗೆ ಕಳಿಸಲು ಇಚ್ಛಿಸುವವರ ಹೆಸರನ್ನು ಎಲ್ಲರೆದುರೇ ಹೇಳಬೇಕಿದೆ. ನಾಮಿನೇಟ್‌ ಆದವರು ಕುರ್ಚಿ ಮೇಲೆ ಕುಳಿತುಕೊಂಡಾಗ ಬಣ್ಣ ಎರಚಲಾಗುತ್ತದೆ. ಇಂದು ಈ ನಾಮಿನೇಟ್‌ ಪ್ರಕ್ರಿಯೆ ನಡೆಲಿದೆ. ಇದರ ಸಣ್ಣ ಝಲಕ್‌ನ್ನು ಕಲರ್ಸ್‌ ಕನ್ನಡ ವಾಹಿನಿ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ.

 

 

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಮನೆಯ ಬಣ್ಣ, ಆಕಾರದ ಜೊತೆ ಆಟದ ವಿಧಾನವೂ ಹೊಸತಾಗಿದೆ. ಅಲ್ಲದೇ ಬಿಗ್‌ ಬಾಸ್‌ ಆರಂಭವಾದ ಎರಡನೇ ದಿನವೇ ಮನೆಗೆ ಅತಿಥಿಯ ಆಗಮನವೂ ನಡೆಯಿತು. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಸೀಸನ್‌ 10 ರ ಮೊದಲ ಅತಿಥಿಯಾಗಿ ಮನೆಗೆ ಎಂಟ್ರಿ ಕೊಟ್ಟರು. 

ಇದನ್ನೂ ಓದಿ: Bigg Boss 10: ಬಿಗ್‌ ಬಾಸ್‌ನಲ್ಲಿ ಈ ಬಾರಿ ಜೈಲಿನಷ್ಟೇ ಶಿಕ್ಷೆ ಕೂಡ ಸ್ಪೆಷಲ್‌ ಆಗಿರಲಿದೆ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News