ಬಿಗ್ ಬಾಸ್​ ಮನೆಯಲ್ಲಿ ನಕ್ಕು ನಗಿಸಲು ಬರ್ತಿದ್ದಾರಾ ಕಾಂತಾರ ನಟ!?

Kantara Actor in Bigg Boss : ಬಿಗ್ ಬಾಸ್​ ಮನೆಯಲ್ಲಿ ಎಲ್ಲ ರಂಗದ ಜನರನ್ನು ಕರೆಸಲಾಗುತ್ತದೆ. ತಮಾಷೆ, ತರ್ಲೆ ಮಾಡಲು ಹಾಸ್ಯ ನಟರನ್ನು ಸಹ ಬಿಗ್‌ ಬಾಸ್‌ ಮನೆಯಲ್ಲಿ ಕರೆಸಲಾಗುತ್ತದೆ.    

Written by - Chetana Devarmani | Last Updated : Oct 5, 2023, 09:13 AM IST
  • ಕನ್ನಡ ಕಿರುತೆರೆಯ ಬಹುನಿರೀಕ್ಷಿತ ರಿಯಾಲಿಟಿ ಶೋ ಬಿಗ್‌ ಬಾಸ್‌
  • ಬಿಗ್‌ ಬಾಸ್‌ ಸೀಸನ್‌ 10 ಪ್ರಾರಂಭಕ್ಕೆ ದಿನಗಣನೆ ಶುರು
  • ಬಿಗ್‌ ಬಾಸ್‌ ಮನೆಗೆ ಈ ಬಾರಿ ಯಾರೆಲ್ಲ ಎಂಟ್ರಿ ಕೊಡ್ತಾರೆ?
ಬಿಗ್ ಬಾಸ್​ ಮನೆಯಲ್ಲಿ ನಕ್ಕು ನಗಿಸಲು ಬರ್ತಿದ್ದಾರಾ ಕಾಂತಾರ ನಟ!? title=

Bigg Boss Kannada Season 10 : ಕಿರುತೆರೆಯ ಬಹುನಿರೀಕ್ಷಿತ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ ಸೀಸನ್‌ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇತ್ತೀಚೆಗೆ ಕಲರ್ಸ್‌ ಕನ್ನಡ ಮತ್ತು ಕಿಚ್ಚ ಸುದೀಪ್‌ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಬಿಗ್‌ ಬಾಸ್‌ ಸೀಸನ್‌ 10 ರ ಬಗ್ಗೆ ಮಾಹಿತಿ ಹಂಚಿಕೊಂಡರು. ಅಕ್ಟೋಬರ್​ 8 ರಿಂದ ಕನ್ನಡ ಬಿಗ್‌ಬಾಸ್‌ ಸೀಸನ್ 10 ಶುರುವಾಗಲಿದೆ. 

ಇನ್ನೇನು ಕೆಲವೇ ದಿನಗಳಲ್ಲಿ ಬಿಗ್‌ ಬಾಸ್‌ ಶುರುವಾಗಲಿದ್ದು, ಸಂಭಾವ್ಯ ಸ್ಪರ್ಧಿಗಳ ಪಟ್ಟಿ ವೈರಲ್‌ ಆಗಿದೆ. ಬಿಗ್‌ ಬಾಸ್‌ ಮನೆಗೆ ಈ ಬಾರಿ ಯಾರೆಲ್ಲ ಎಂಟ್ರಿ ಕೊಡ್ತಾರೆ ಎನ್ನುವ ಕುತೂಹಲ ಜನರಲ್ಲಿ ಹೆಚ್ಚಾಗಿ ಕಾಡ್ತಿದೆ. ಬಿಗ್ ಬಾಸ್​ ಮನೆಯಲ್ಲಿ ಎಲ್ಲ ರಂಗದ ಜನರನ್ನು ಕರೆಸಲಾಗುತ್ತದೆ. ತಮಾಷೆ, ತರ್ಲೆ ಮಾಡಲು ಹಾಸ್ಯ ನಟರನ್ನು ಸಹ ಬಿಗ್‌ ಬಾಸ್‌ ಮನೆಯಲ್ಲಿ ಕರೆಸಲಾಗುತ್ತದೆ.  

ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಅಷ್ಟೇ ಬ್ಯೂಟಿಫುಲ್‌ ಅವರ ತಾಯಿ.. ಫೋಟೋ ನೋಡಿ ದೃಷ್ಟಿ ತೆಗೀರಿ ಅಂದ್ರು ನೆಟ್ಟಿಜನ್‌ 

ಬಿಗ್ ಬಾಸ್​ ಕನ್ನಡ ಸೀಸನ್‌ 10 ರಲ್ಲಿ ಈ ಬಾರಿ ಕಾಂತಾರ ಸಿನಿಮಾದ ನಟರೊಬ್ಬರು ಬರಲಿದ್ದಾರೆ ಎನ್ನಲಾಗ್ತಿದೆ. ರಾಂಪಾ ಪಾತ್ರದ ಮೂಲಕ ಫೇಮಸ್ ಆಗಿರುವ ನಟ ಪ್ರಕಾಶ್ ತುಮಿನಾಡು ಈ ಸಲ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ವಾಹಿನಿಯಾಗಲಿ, ನಟ ಪ್ರಕಾಶ್‌ ಆಗಲಿ ದೃಢಪಡಿಸಿಲ್ಲ. 

ಲಕ್ಷಾಂತರ ಪ್ರೇಕ್ಷಕರನನ್ನು ಹೊಂದಿರುವ ಬಿಗ್‌ ಬಾಸ್‌ ಶೋ ನಲ್ಲಿ ಜನರನ್ನು ನಕ್ಕು ನಗಿಸಲು ನಟ ಪ್ರಕಾಶ್ ತುಮಿನಾಡು ​ದೊಡ್ಮನೆಗೆ ಎಂಟ್ರಿ ಕೊಡಬಹುದು ಎನ್ನುವ ಸುದ್ದಿ ಹರಿದಾಡುತ್ತಿದೆ. ಅನೇಕ ಸಿನಿಮಾಗಳಲ್ಲಿನ ಪಾತ್ರದ ಮೂಲಕ ಜನರ ಮನಗೆದ್ದಿದ್ದ ಪ್ರಕಾಶ್‌ ತಮಿನಾಡು, ಕಾಂತಾರ ಸಿನಿಮಾದಲ್ಲಿ ರಾಂಪಾ ಪಾತ್ರದ ಮೂಲಕ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾದರು. ನಟ ಪ್ರಕಾಶ್​ ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಟ್ಟರೆ ಈ ಬಾರಿಯ ಸೀಸನ್‌ ನಗೆ ಹಬ್ಬವಾಗೋದು ಪಕ್ಕಾ ಎನ್ನುತ್ತಿದ್ದಾರೆ ನೆಟ್ಟಿಜನ್‌. 

ಇದನ್ನೂ ಓದಿ : ಸುದೀಪ್ ಬಿಗ್‌ ಬಾಸ್‌ ಸೀಸನ್ 10 ಬಳಿಕ ನಿರೂಪಣೆಗೆ ಗುಡ್ ಬೈ ಹೇಳ್ತಾರಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News