ನಿಷ್ಕಳಂಕವಾದ ಫ್ರೆಂಡ್‌ಷಿಪ್‌ ಅದು: ಸಂತು - ಪಂತು ಸ್ನೇಹ ಹಾಡಿ ಹೊಗಳಿದ ಕಿಚ್ಚ ಸುದೀಪ್

Bigg Boss Kannada Season 10: ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಇಬ್ಬರೂ ತಮ್ಮ ಜರ್ನಿಯನ್ನು ನೆನೆದು ಭಾವುಕರಾಗಿ ಕಣ್ಣೀರಿಟ್ಟಿದ್ದರು.

Written by - Chetana Devarmani | Last Updated : Jan 14, 2024, 10:55 AM IST
  • ದೂರವಾಯ್ತೇ ಸಂತು-ಪಂತು ಜೋಡಿ?
  • ಯಾರು ಅಂದರ್ - ಯಾರು ಬಾಹರ್?
  • ಭಾವುಕರಾಗಿ ಕಣ್ಣೀರಿಟ್ಟ ಆಪ್ತಮಿತ್ರರು
ನಿಷ್ಕಳಂಕವಾದ ಫ್ರೆಂಡ್‌ಷಿಪ್‌ ಅದು: ಸಂತು - ಪಂತು ಸ್ನೇಹ ಹಾಡಿ ಹೊಗಳಿದ ಕಿಚ್ಚ ಸುದೀಪ್  title=

Bigg Boss Kannada Season 10: ಶುಕ್ರವಾರ ರಾತ್ರಿ ಬಿಗ್‌ಬಾಸ್‌ ಬಿನ್‌ಬ್ಯಾಗ್‌ ಮೇಲೆ ಕೂತಿದ್ದ ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಇಬ್ಬರೂ ತಮ್ಮ ಜರ್ನಿಯನ್ನು ನೆನೆದು ಭಾವುಕರಾಗಿ ಕಣ್ಣೀರಿಟ್ಟಿದ್ದರು. ಇಬ್ಬರಲ್ಲಿ ಯಾರಾದರೂ ಹೊರಗೆ ಹೋದರೆ ಎಂದು ಅಂದುಕೊಂಡು ಪರಸ್ಪರ ಸಂತೈಸಿಕೊಂಡಿದ್ದರು. ಅವರ ಮಾತು ನಿಜವಾಗುವ ಗಳಿಗೆ ಸಮೀಪ ಬಂದಂತಿದೆ. ಈ ಬಗ್ಗೆ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸುಳಿವು ದೊರಕಿದೆ.

‘ಸೂಪರ್ ಸಂಡೆ ವಿತ್ ಸುದೀಪ್‌’ ಎಪಿಸೋಡ್‌ನಲ್ಲಿ ಸುದೀಪ್ ಸೇಫ್‌ ಆದ ಎಲ್ಲರನ್ನೂ ಹೇಳುತ್ತ ಕೊನೆಯಲ್ಲಿ, ವರ್ತೂರು ಸಂತೋಷ್ ಹಾಗು ತುಕಾಲಿ ಸಂತೋಷ್ ಅವರೇ ನಿಮ್ಮಿಬ್ಬರಲ್ಲಿ ಒಬ್ಬರನ್ನು ಈವತ್ತು ಹೊರಗಡೆ ಕಳಿಸಬೇಕಾಗಿದೆ ಎಂದು ಹೇಳಿದ್ದಾರೆ. ಅವರ ಮಾತು ಕೇಳಿ ಇಬ್ಬರ ಕಣ್ಣಲ್ಲಿ ನೀರು ತುಂಬಿಕೊಂಡಿದೆ. ಅಳುತ್ತಲೇ, ತುಕಾಲಿ ಸಂತೋಷ್, ‘ನಾನು ಹೊರಡಬೇಕಿದ್ದರೆ, ಚೆನ್ನಾಗಿ ಆಡಿ ಗೆದ್ಕೊಂಡು ಬಾ ಎಂದು ಹೇಳೋಕೆ ಇಷ್ಟಪಡ್ತೀನಿ’ ಎಂದು ಹೇಳಿದ್ರೆ, ವರ್ತೂರು ಸಂತೋಷ್ ಅವರು, ‘ಅವರು ಗೆಲ್ಲುವುದನ್ನು ನಾನು ನೋಡಬೇಕು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಗ್‌ ಬಾಸ್‌ ಸಂಗೀತಾ ಫಿನಾಲೆ ಟಿಕೆಟ್‌ ಪಡೆದದ್ದು ಪ್ರಿ ಡಿಸೈಡೆಡ್? ಅತಿ ಹೆಚ್ಚು ಅಂಕ ಗಳಿಸಿಯೂ ಫೈನಲ್‌ ತಲುಪದ ಪ್ರತಾಪ್! 

ಯಾವಾಗಲೂ ತುಕಾಲಿ ಅವರನ್ನು ವಿರೋಧಿಸುವ ನಮ್ರತಾ ಕೂಡ, ‘ಜಾಸ್ತಿ ನನಗೆ ಅನಿಸುತ್ತಿತ್ತು. ಇವರಿಬ್ಬರೂ ದೂರ ಆಗಬೇಕು ಎಂದು. ಆದರೆ ಈವತ್ತು…’ ಎಂದು ಹೇಳಿ ಹಾಗಾಗಬಾರದು ಎಂದು ತಲೆಯಾಡಿಸಿದ್ದಾರೆ.

ಅವರ ಬಗ್ಗೆ ಕಿಚ್ಚ ಸುದೀಪ್ ಅವರೇ ಮನಃಪೂರ್ವಕವಾಗಿ ಹೊಗಳಿದ್ದಾರೆ. ‘ಯಾರಲ್ಲಿಯೂ ನೋಡದ ಒಂದು ಭಾಂದವ್ಯವನ್ನು ನಿಮ್ಮಿಬ್ಬರಲ್ಲಿ, ಈ ಸೀಸನ್‌ನಲ್ಲಿ ನಾನು ನೋಡಿದ್ದೀನಿ. ನಿಷ್ಕಳಂಕವಾದ ಫ್ರೆಂಡ್‌ಷಿಪ್‌ ಅದು’ ಎಂದಿದ್ದಾರೆ. 
ಹಾಗಾದರೆ ಸಂತು-ಪಂತು ಈ ಇಬ್ಬರಲ್ಲಿ ಯಾರಿಗೆ ಈ ವಾರ ಮನೆಯಿಂದ ಗೇಟ್‌ಪಾಸ್ ಸಿಗುತ್ತದೆ? ಯಾರು ಬಿಗ್‌ಬಾಸ್‌ ಮನೆಯಲ್ಲಿ ಉಳಿದುಕೊಳ್ಳುತ್ತಾರೆ? ಆಪ್ತಸ್ನೇಹಿತ ಇಲ್ಲದೆ ಮನೆಯೊಳಗೆ ಹೇಗಿರುತ್ತಾರೆ? 

ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಂದಿನ ‘ಸೂಪರ್ ಸಂಡೆ ವಿತ್ ಸುದೀಪ್’ ಎಪಿಸೋಡ್‌ನಲ್ಲಿ ಸಿಗಲಿದೆ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು ಮತ್ತು ಎಪಿಸೋಡ್‌ಗಳನ್ನು JioCinemaದಲ್ಲಿ ಉಚಿತವಾಗಿ ನೋಡಿ. ಶನಿವಾರ-ಭಾನುವಾರದ ವಾರಾಂತ್ಯದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9ಕ್ಕೆ ವೀಕ್ಷಿಸಿ.

ಇದನ್ನೂ ಓದಿ: Bigg Boss Kannada 10 ಮನೆಯಲ್ಲಿ ನಮ್ರತಾ - ಕಾರ್ತಿಕ್‌ ಕದ್ದುಮುಚ್ಚಿ.... ವೈರಲ್‌ ಆದ ಫೋಟೋಸ್‌! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News