ಬಾಲಿವುಡ್‌ಗೆ ಬರೀ ಗೈಯಲ್ಲಿ ಬಂದ ಈಕೆ ಇಂದು ಕೋಟ್ಯಾಧೀಶೆ!! ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್‌ ಎಷ್ಟು ಕೋಟಿಯ ಒಡತಿ ಗೊತ್ತೇ!

Kangana Ranaut Lok Sabha Constituency: ಕಂಗನಾ ರಣಾವತ್‌ ತನ್ನ ಜೀವನದಲ್ಲಿ ಏನಾದರೂ ವಿಭಿನ್ನವಾಗಿರುವುದನ್ನು ಸಾಧಿಸಬೇಕೆಂದು ಬಯಸಿದ್ದರು. ಈ ಕನಸು ನನಸು ಮಾಡಲೆಂದೇ 16 ನೇ ವಯಸ್ಸಿನಲ್ಲಿ ಮನೆಯಿಂದ ಓಡಿಬಂದರು.

Written by - Chetana Devarmani | Last Updated : Mar 28, 2024, 09:41 AM IST
  • ಬಾಲಿವುಡ್‌ ನಟಿ ಕಂಗನಾ ರಣಾವತ್
  • ನಟಿ ಕಂಗನಾ ರಣಾವತ್ ಈಗ ರಾಜಕೀಯಕ್ಕೆ ಎಂಟ್ರಿ
  • ಕಂಗನಾ ರಣಾವತ್‌ ಒಟ್ಟು ಆಸ್ತಿ ಎಷ್ಟು?
ಬಾಲಿವುಡ್‌ಗೆ ಬರೀ ಗೈಯಲ್ಲಿ ಬಂದ ಈಕೆ ಇಂದು ಕೋಟ್ಯಾಧೀಶೆ!! ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್‌ ಎಷ್ಟು ಕೋಟಿಯ ಒಡತಿ ಗೊತ್ತೇ!  title=
Kangana Ranaut Net Worth

Kangana Ranaut Net Worth: ಬಾಲಿವುಡ್‌ನಲ್ಲಿ ತನ್ನ ಪಾತ್ರದ ಜೊತೆ ಬೋಲ್ಡ್‌ ಹೇಳಿಕೆಗಳಿಂದಲೂ ಪ್ರಭಾವ ಬೀರಿರುವ ನಟಿ ಕಂಗನಾ ರಣಾವತ್ ಈಗ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಕಂಗನಾ ಬಿಜೆಪಿ ಟಿಕೆಟ್ ಪಡೆದಿದ್ದಾರೆ. ಆಗಾಗ್ಗೆ ತಮ್ಮ ರಾಜಕೀಯ ಅಭಿಪ್ರಾಯಗಳನ್ನು ನಿರ್ಭೀತಿಯಿಂದ ಕಂಗನಾ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿಯೇ ಅವರು ರಾಜಕೀಯ ಪ್ರವೇಶಿಸುವ ಸುಳಿವು ನೀಡಿದ್ದರು.

ತಮ್ಮ ಅದ್ಬುತ ನಟನೆಯಿಂದ ಪ್ರೇಕ್ಷಕರ ಮನದಲ್ಲಿ ಛಾಪು ಮೂಡಿಸಿರುವ ಕಂಗನಾ ಬಾಲಿವುಡ್  ಕ್ವೀನ್ ಎಂದೇ ಖ್ಯಾತಿ ಪಡೆದವರು. 2006 ರಲ್ಲಿ ಅನುರಾಗ್ ಬಸು ಅವರ ಗ್ಯಾಂಗ್‌ಸ್ಟರ್ ಚಿತ್ರದ ಮೂಲಕ ಕಂಗನಾ ಬಾಲಿವುಡ್ ಪ್ರವೇಶಿಸಿದರು. ಕಂಗನಾ ತಮ್ಮ ವೃತ್ತಿಜೀವನದಲ್ಲಿ ಫ್ಯಾಶನ್, ರಾಜ್ 2, ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ, ಕ್ವೀನ್, ತನು ವೆಡ್ಸ್ ಮನು, ಮಣಿಕರ್ಣಿಕಾ ಸೇರಿದಂತೆ ಮುಂತಾದ ಅನೇಕ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಬಾಲಿವುಡ್ ನಟಿ ಕಂಗನಾ ರಣಾವತ್ ಬರಿ ಗೈಯಲ್ಲಿ ಸಿನಿರಂಗಕ್ಕೆ ಬಂದವರು. ಗಾಡ್‌ ಫಾದರ್‌ ಇಲ್ಲದೇ ಸಿನಿರಂಗಕ್ಕೆ ಬಂದು ನೆಲೆ ನಿಂತವರು. 

16 ನೇ ವಯಸ್ಸಿನಲ್ಲಿ ಮನೆಯಿಂದ ಓಡಿಬಂದ ಕಂಗನಾ ರಣಾವತ್‌ : 

ಕಂಗನಾ ರಣಾವತ್‌ 23 ಮಾರ್ಚ್ 1987 ರಂದು ಹಿಮಾಚಲದ ಮಂಡಿ ಜಿಲ್ಲೆಯಲ್ಲಿ ಜನಿಸಿದರು. ಅವರ ತಾಯಿ ಶಾಲಾ ಶಿಕ್ಷಕಿ ಮತ್ತು ತಂದೆ ಉದ್ಯಮಿ. ಅವರ ಕುಟುಂಬ ಈಗಾಗಲೇ ರಾಜಕೀಯದೊಂದಿಗೆ ಸಂಬಂಧ ಹೊಂದಿದೆ. ಅವರ ಮುತ್ತಜ್ಜ ಸರ್ಜೂ ಸಿಂಗ್ ರಣಾವತ್ ಶಾಸಕರಾಗಿದ್ದರು. ಇದಾದ ನಂತರ ಯಾರೂ ರಾಜಕೀಯದಲ್ಲಿ ಸಕ್ರಿಯವಾಗಿರಲಿಲ್ಲ. ಕಂಗನಾ ಚಂಡೀಗಢದಲ್ಲಿ ಓದಿದ್ದಾರೆ. ಕಂಗನಾ ಡಾಕ್ಟರ್ ಆಗಬೇಕೆಂದು ಕುಟುಂಬದವರು ಬಯಸಿದ್ದರು, ಆದರೆ ಕಂಗನಾ AIPMT (ಈಗ NEET) ಪರೀಕ್ಷೆಯನ್ನು ಬರೆಯಲಿಲ್ಲ. 

ಇದನ್ನೂ ಓದಿ: Actress Prema: ಡಿವೋರ್ಸ್..‌ ಡಿಪ್ರೆಷನ್‌.. ನಂತರ ಕ್ಯಾನ್ಸರ್? ಎರಡನೇ ಮದುವೆ ಆಗ್ತಾರಾ ನಟಿ ಪ್ರೇಮಾ !! 

ಕಂಗನಾ ರಣಾವತ್‌ ತನ್ನ ಜೀವನದಲ್ಲಿ ಏನಾದರೂ ವಿಭಿನ್ನವಾಗಿರುವುದನ್ನು ಸಾಧಿಸಬೇಕೆಂದು ಬಯಸಿದ್ದರು. ಈ ಕನಸು ನನಸು ಮಾಡಲೆಂದೇ 16 ನೇ ವಯಸ್ಸಿನಲ್ಲಿ ಮನೆಯಿಂದ ಓಡಿಬಂದರು. ಆರಂಭದಲ್ಲಿ ಕಂಗನಾ ಸಾಕಷ್ಟು ಕಷ್ಟಪಡಬೇಕಾಯಿತು, ಆದರೆ ಅವರ ಪ್ರತಿಭೆಯಿಂದ ಉತ್ತಮ ಯಶಸ್ಸನ್ನು ಸಾಧಿಸಿದರು. ಗಾಡ್ಫಾದರ್ ಇಲ್ಲದೆ ಬಂದ ಕಂಗನಾ ಇಂದು ಬಾಲಿವುಡ್‌ ಕ್ವೀನ್‌ ಆಗಿದ್ದಾರೆ.  

ಕಂಗನಾ ಎಷ್ಟು ಶ್ರೀಮಂತೆ?

ಕಂಗನಾ ರಣಾವತ್ ಅವರ ನಿವ್ವಳ ಮೌಲ್ಯ ಸುಮಾರು 95 ಕೋಟಿ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ. ಕಂಗನಾ ರಣಾವತ್ ಒಂದು ಸಿನಿಮಾ ಮಾಡಲು 15 ರಿಂದ 25 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಈ ಕಾರಣದಿಂದಾಗಿ ಬಾಲಿವುಡ್‌ನ ದುಬಾರಿ ನಟಿಯರ ಪಟ್ಟಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ತಲೈವಿ ಚಿತ್ರಕ್ಕೆ 24 ಕೋಟಿ ಚಾರ್ಜ್ ಮಾಡಿದ್ದರು ಎನ್ನಲಾಗಿದೆ.

ಕಂಗನಾ ರಣಾವತ್ ಅನೇಕ ಬ್ರಾಂಡ್‌ಗಳ ಅಂಬಾಸಿಡರ್‌ ಆಗಿದ್ದಾರೆ. ಒಂದು ಜಾಹೀರಾತಿಗೆ 3 - 3.5 ಕೋಟಿ ರೂಪಾಯಿ ಚಾರ್ಜ್‌ ಮಾಡುತ್ತಾರೆ. ಕಂಗನಾ ನಿರ್ದೇಶಕಿ, ನಿರ್ಮಾಪಕಿಯೂ ಆಗಿದ್ದು ಅಲ್ಲಿಂದಲೂ ಆದಾಯ ಗಳಿಸುತ್ತಾರೆ. 

ಕಂಗನಾ ಐಷಾರಾಮಿ ಬಂಗಲೆ

ಹಿಮಾಚಲದ ಮನಾಲಿಯಲ್ಲಿ ಕಂಗನಾ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಇದರ ಬೆಲೆ ಸುಮಾರು 25 ಕೋಟಿ ಎಂದು ಹೇಳಲಾಗುತ್ತಿದೆ. ಇದಲ್ಲದೇ ಮುಂಬೈನಲ್ಲಿ ಐದು ಬೆಡ್ ರೂಂಗಳ ಅಪಾರ್ಟ್ ಮೆಂಟ್ ಇದ್ದು, ಇದರ ಬೆಲೆ 15 ರಿಂದ 20 ಕೋಟಿ ರೂಪಾಯಿ. ಪಾಲಿ ಬೆಟ್ಟದಲ್ಲಿ ದೊಡ್ಡ ಕಚೇರಿಯಿದ್ದು, ಇದರ ಮೌಲ್ಯ ಸುಮಾರು 40 ಕೋಟಿ ಎಂದು ಅಂದಾಜಿಸಲಾಗಿದೆ.

ಕಂಗನಾ ಕಾರ್‌ ಕಲೆಕ್ಷನ್‌  

ಕಂಗನಾ ರಣಾವತ್ ಐಷಾರಾಮಿ ಕಾರುಗಳನ್ನು ಇಷ್ಟಪಡುತ್ತಾರೆ. BMW 7-ಸರಣಿ, Mercedes Benz GLE SUV, Audi Q3 ಮತ್ತು Mercedes Maybach S-ಕ್ಲಾಸ್‌ನಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ: ದಿಶಾ ಪಟಾನಿ ಅಕ್ಕ ಇವರೇ ನೋಡಿ.. ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್, ತಂಗಿಯನ್ನೂ ಮೀರಿಸುವ ಚೆಲುವೆ!! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News