Salman Khan: ಕೋಟ್ಯಾಂತರ ರುಪಾಯಿ ಆಸ್ತಿಯಿದ್ದರೂ ಸಲ್ಲು ಇರೋದು 1 BHK ಮನೆಯಲ್ಲಿ: ಇದರ ಬೆಲೆ ಗೊತ್ತಾದ್ರೆ ಶಾಕ್‌ ಆಗ್ತಿರಾ!

Salman Khan Flat: ಬಾಲಿವುಡ್‌ ಬಾದ್‌ಶಾ ನಟ ಸಲ್ಮಾನ್ ಖಾನ್ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದರೂ, ಮುಂಬೈನ ಅಪಾರ್ಟ್‌ಮೆಂಟ್‌ ಒಂದರಲ್ಲಿ 1 BHK ಮನೆಯಲ್ಲಿ ವಾಸಿಸುತ್ತಿದ್ದಾರೆ. ಇದರ ಬೆಲೆ ಕೇಳಿದರಂತೂ ನಿಜಕ್ಕೂ ಶಾಕ್‌ ಆಗುತ್ತಿರಾ. ಹಾಗಿದ್ರೇ ಈ ನಟನಿಗೆ ಪ್ಲಾಟ್‌ ಬೆಲೆಯೆಷ್ಟು? ಈ ನಟನ ಮನೆ ಎಲ್ಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

Written by - Zee Kannada News Desk | Last Updated : Apr 16, 2024, 10:17 AM IST
  • ಸಲ್ಮಾನ್ ಖಾನ್ ಕೋಟಿ ಕೋಟಿ ಆಸ್ತಿಯಿರುವ ಒಡೆಯನಾದರು, ಸರಳವಾಗಿ ಜೀವನ ನಡೆಸಲು ಇಷ್ಟಪಡುತ್ತಾರೆ.
  • ಬಿ-ಟೌನ್‌ ಬಾಡಿಗಾರ್ಡ್‌ ಸಲ್ಮಾನ್ ಆಗಾಗ್ಗ ತಮ್ಮ ಮನೆಯ ಫೋಟೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ.
  • ನಟ ಸಲ್ಮಾನ್ ಖಾನ್‌ ಕುಟುಂಬ‘ಗ್ಯಾಲಕ್ಸಿ’ ಅಪಾರ್ಟ್‌ಮೆಂಟ್‌ನ ಮೊದಲನೆಯ ಮಹಡಿಯಲ್ಲಿ ನೆಲೆಸಿದ್ದಾರೆ. ಇನ್ನೂ ಈ ನಟ ಗ್ರೌಂಡ್ ಫ್ಲೋರ್‌ನಲ್ಲಿ ವಾಸಿಸುತ್ತಿದ್ದಾರೆ.
Salman Khan: ಕೋಟ್ಯಾಂತರ ರುಪಾಯಿ ಆಸ್ತಿಯಿದ್ದರೂ ಸಲ್ಲು ಇರೋದು 1 BHK ಮನೆಯಲ್ಲಿ: ಇದರ ಬೆಲೆ ಗೊತ್ತಾದ್ರೆ ಶಾಕ್‌ ಆಗ್ತಿರಾ! title=

Salmaan Khan Flat Price: ಬಾಲಿವುಡ್‌ ಖ್ಯಾತ ನಟ ಸಲ್ಮಾನ್ ಖಾನ್ ಮೂರು ದಶಕಗಳಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವರು, ಇಂದು ಅತಿ ಹೆಚು ಸಂಭಾವನೆ  ಪಡೆಯುವ ನಟರ ಪಟ್ಟಿಯಲ್ಲಿ ಒಬ್ಬರಾಗಿ ಸೇರಿದ್ದಾರೆ. ಈ ನಟ ಕೋಟಿ ಕೋಟಿ ಆಸ್ತಿಯಿರುವ ಒಡೆಯನಾದರು, ಸರಳವಾಗಿ ಜೀವನ ನಡೆಸಲು ಇಷ್ಟಪಡುತ್ತಾರೆ. ಈ ನಟ ವಾಸಿಸುತ್ತಿರುವ ಮನೆ ಕೇವಲ 1 ಬಿಎಚ್‌ಕೆ ಫ್ಲಾಟ್ ಆಗಿದೆ. 

ಸಲ್ಮಾನ್ ಖಾನ್‌ 58ರ ವಯಸ್ಸಿನಲ್ಲೂ  ತನ್ನ ಪೋಷಕರೊಂದಿಗೆ ಅದೇ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದಾರೆ. ವರದಿಗಳ ಪ್ರಕಾರ ಈ ನಟನಿರುವ ಕಟ್ಟಡದ 1 ಬಿಹೆಚ್‌ಕೆ ಪ್ಲಾಟ್‌  ಇದರ ಬೆಲೆ 100 ಕೋಟಿ ರೂ ಇದೆ ಎನ್ನಲಾಗ್ತಿದೆ. ಇದರ ಬೆಲೆಯನ್ನು ಕೇಳಿದ ನೆಟ್ಟಿಗರು 1BHK ಮನೆಗೆ 100 ಕೋಟಿನಾಯೆಂದು ಬಾಯಿ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಮನೆಯ ಹೊರಗೆ ಗುಂಡಿನ ದಾಳಿ ನಡೆಸಿದ್ದ ಇಬ್ಬರು ಶೂಟರ್‌ಗಳು ಅರೆಸ್ಟ್‌

ಬಿ-ಟೌನ್‌ ಬಾಡಿಗಾರ್ಡ್‌ ಸಲ್ಮಾನ್ ಆಗಾಗ್ಗ ತಮ್ಮ ಮನೆಯ ಫೋಟೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಈ ನಟನ ವಾಸಿಸುತ್ತಿರುವ ಮನೆ ಸಮುದ್ರಕ್ಕೆ ಎದುರಿನಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಇದೆ. ಸಲ್ಮಾನ್‌ ಖಾನ್‌ ಮನೆಯನ್ನು ಹೊರಗಿನಿಂದ ನೋಡಲು ಫ್ಯಾನ್ಸ್‌ಗಳು ಮುಗಿ ಬೀಳುತ್ತಿರುತ್ತಾರೆ.

ನಟ ಸಲ್ಮಾನ್ ಖಾನ್‌ ಕುಟುಂಬ‘ಗ್ಯಾಲಕ್ಸಿ’ ಅಪಾರ್ಟ್‌ಮೆಂಟ್‌ನ ಮೊದಲನೆಯ  ಮಹಡಿಯಲ್ಲಿ ನೆಲೆಸಿದ್ದಾರೆ. ಇನ್ನೂ ಈ ನಟ ಗ್ರೌಂಡ್ ಫ್ಲೋರ್‌ನಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ನಟ ಈದ್ ಹಬ್ಬದಂದು ಶೂಟಿಂಗ್ ನಡೆದಿದ್ದ ಬಾಲ್ಕನಿಗೆ ಬಂದು ಅಭಿಮಾನಿಗಳಿಗೆ ಶುಭ ಕೋರಿದ್ದರು. ಈ ನಟನಿರುವ ಕಟ್ಟಡ ಮುಂಬೈನ ಬಾಂದ್ರಾದಲ್ಲಿ ಇದೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News