ಯಶ್‌ 'ಟಾಕ್ಸಿಕ್' ಸಿನಿಮಾದಿಂದ ಹಿಂದೆ ಸರಿದ ಕರೀನಾ ಕಪೂರ್..! ಇದಕ್ಕೆ ಆ ವಿಚಾರವೇ ಕಾರಣ..?

Kareena Kapoor : 'ಟಾಕ್ಸಿಕ್'ನಲ್ಲಿ ಬಾಲಿವುಡ್‌ ನಟಿ ಕರೀನಾ ಕಪೂರ್ ಖಾನ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಚಿತ್ರದಲ್ಲಿ ಕರೀನಾ, ಯಶ್ ಸಹೋದರಿಯ ಪಾತ್ರವನ್ನು ನಿರ್ವಹಿಸಬೇಕಿತ್ತು. ಆದರೆ ಇದೀಗ ನಟಿ ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ  

Written by - Krishna N K | Last Updated : May 3, 2024, 11:12 PM IST
    • ಯಶ್ ನಟನೆಯ ಮುಂಬರುವ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್'
    • 'ಟಾಕ್ಸಿಕ್'ನಲ್ಲಿ ಬಾಲಿವುಡ್‌ ನಟಿ ಕರೀನಾ ಕಪೂರ್ ಖಾನ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು.
    • ಆದರೆ ಇದೀಗ ಕರೀನಾ ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಯಶ್‌ 'ಟಾಕ್ಸಿಕ್' ಸಿನಿಮಾದಿಂದ ಹಿಂದೆ ಸರಿದ ಕರೀನಾ ಕಪೂರ್..! ಇದಕ್ಕೆ ಆ ವಿಚಾರವೇ ಕಾರಣ..? title=

Toxic movie updates ನಟ ಯಶ್ ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ ʼಟಾಕ್ಸಿಕ್‌ʼ ಟೈಟಲ್‌ನಿಂದಲೇ ಇಂಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ರಾಕಿ ಜೊತೆ ಕರೀನಾ ಕಪೂರ್ ನಟಿಸಲಿದ್ದಾರೆ ಎನ್ನುವ ಸುದ್ದಿ ಬಹಳ ದಿನಗಳಿಂದ ಕೇಳಿ ಬರುತ್ತಿತ್ತು. ಇದೀಗ ಈ ಕುರಿತು ಹೊಸ ಅಪ್‌ಡೇಟ್‌ ಒಂದು ಸಿಕ್ಕಿದೆ. 

ಯಶ್ ನಟನೆಯ ಮುಂಬರುವ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್'ನಲ್ಲಿ ಬಾಲಿವುಡ್‌ ನಟಿ ಕರೀನಾ ಕಪೂರ್ ಖಾನ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಚಿತ್ರದಲ್ಲಿ ಕರೀನಾ, ಯಶ್ ಸಹೋದರಿಯ ಪಾತ್ರವನ್ನು ನಿರ್ವಹಿಸಬೇಕಿತ್ತು. ಆದರೆ ಇದೀಗ ನಟಿ ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಸಿನಿಮಾ ಆಗುತ್ತಿದೆ ಅಣ್ಣಾಮಲೈ ಜೀವನ ಚರಿತ್ರೆ..! ಹೀರೋ ಯಾರು ಗೊತ್ತೆ..? 

ಮೂಲಗಳ ಪ್ರಕಾರ, 'ಟಾಕ್ಸಿಕ್‌ಗಾಗಿ ಕರೀನಾ ಕಪೂರ್ ಅವರ ಕಾಲ್‌ ಶೀಟ್‌ ಯಶ್ ಅವರ ಕಾಲ್‌ ಶೀಟ್‌ ಡೇಟ್‌ಗೆ ಹೊಂದಿಕೆಯಾಗುತ್ತಿಲ್ಲವಂತೆ. ಹಲವು ಬಾರಿ ರೀ ಶೆಡ್ಯೂಲ್ ಮಾಡಿದರೂ ಡೇಟ್ಸ್ ಸಿಗುತ್ತಿಲ್ಲವಂತೆ ಎಂದು ತಿಳಿದು ಬಂದಿದೆ. ಇನ್ನು ಟಾಕ್ಸಿಕ್‌ ಸಿನಿಮಾದಲ್ಲಿ ಯಶ್‌ ಸಹೋದರಿಯ ಪಾತ್ರವು ಕಥೆಗೆ ಬಹಳ ಮುಖ್ಯವಾಗಿದ್ದು, ಇದಕ್ಕಾಗಿ ಟಾಪ್ ಸ್ಟಾರ್ ಅವಶ್ಯಕ. ಪ್ಯಾನ್ ಇಂಡಿಯಾ ನಟಿಯಾದ್ರೆ ಒಳ್ಳೆಯದು ಅಂತ ನಿರ್ಮಾಪಕರು ನಿರ್ಧರಿಸಿದ್ದರು. ಆದ್ರೆ ಇದೀಗ ಬಿಟೌನ್‌ ಬೇಬಿ ಈ ಸಿನಿಮಾದಿಂದ ದೂರ ಸರಿದಿದ್ದಾರೆ.

ಕರೀನಾ ಈ ಚಿತ್ರದಿಂದ ಹೊರನಡೆದರೆ, ಕಿಯಾರಾ ಅಡ್ವಾಣಿ ಈ ಚಿತ್ರದ ಭಾಗವಾಗಲಿದ್ದಾರೆ ಎಂಬ ವದಂತಿಗಳೂ ಕೇಳಿಬರುತ್ತಿವೆ. ಮೂಲಗಳ ಪ್ರಕಾರ, ಚಿತ್ರದಲ್ಲಿ ಕಿಯಾರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸಧ್ಯ ಪಾತ್ರವರ್ಗದಲ್ಲಿ ಪುನರ್ರಚನೆಯ ಮಾಡಲು ನಿರ್ದೇಶಕರು ಮುಂದಾಗಿದ್ದು, ಲೆಟೆಸ್ಟ್‌ ಅಪ್‌ಡೇಟ್‌ಗಾಗಿ ಕಾಯಬೇಕಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News