Bollywood News : ಮಮತಾ ಬ್ಯಾನರ್ಜಿಯನ್ನು ಭೇಟಿಯಾದ ಸಲ್ಮಾನ್ ಖಾನ್ ! ದೀದಿ ಜೊತೆ ಬಾಲಿವುಡ್ ಸ್ಟಾರ್ ಏನಿದು ಗಿಮಿಕ್?‌

Mamata Banerjee Met Salman Khan: ಸಲ್ಮಾನ್ ಖಾನ್ ಹೆಚ್ಚಾಗಿ ಡೇಟಿಂಗ್, ಮದುವೆ, ಸಿನಿಮಾ ವಿಚಾರವಾಗಿ  ಸುದ್ದಿಯಾಗುವ ಬಾಲಿವುಡ್ ಸ್ಟಾರ್ ಇದೀಗ ರಾಜಕೀಯವಾಗಿ ಗುರುತಿಸಿಕೊಂಡಿದ್ದಾರೆ.ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್ ಖಾನ್  ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ನನ್ನು ಭೇಟಿ ಮಾಡಿದ್ದಾರೆ. 

Written by - Zee Kannada News Desk | Last Updated : May 14, 2023, 01:20 PM IST
  • ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯನ್ನು ಭೇಟಿಯಾದ ಬಾಲಿವುಡ್‌ ಸ್ಟಾರ್‌
  • ಮಮತಾ ಬ್ಯಾನರ್ಜಿ ಜೊತೆಯಾದ ಸಲ್ಮಾನ್ ಖಾನ್
  • ಬಾಲಿವುಡ್‌ ನಟನಿಗೆ ಶಾಲು ಹೊದಿಸಿ ಸ್ವಾಗತಿ ಕೋರಿದ ದೀದಿ
Bollywood News : ಮಮತಾ ಬ್ಯಾನರ್ಜಿಯನ್ನು ಭೇಟಿಯಾದ ಸಲ್ಮಾನ್ ಖಾನ್ ! ದೀದಿ ಜೊತೆ  ಬಾಲಿವುಡ್ ಸ್ಟಾರ್ ಏನಿದು ಗಿಮಿಕ್?‌  title=

ಪಶ್ಚಿಮ ಬಂಗಾಳ: ಸಲ್ಮಾನ್ ಖಾನ್ ಹೆಚ್ಚಾಗಿ ಡೇಟಿಂಗ್, ಮದುವೆ, ಸಿನಿಮಾ ವಿಚಾರವಾಗಿ  ಸುದ್ದಿಯಾಗುವ ಬಾಲಿವುಡ್ ಸ್ಟಾರ್ ಇದೀಗ ರಾಜಕೀಯವಾಗಿ ಗುರುತಿಸಿಕೊಂಡಿದ್ದಾರೆ. ಹಾಗೆಯೇ ರಾಜಕೀಯ ನಡೆಯಲ್ಲಿ ಯಾರಿಗೂಬಗ್ಗದ ದೀದಿ ಎಂದು ಕರೆಯವ ಮಮತಾ ಬ್ಯಾನರ್ಜಿ  ಮುಂದಿನ ಲೋಕ ಸಭೆ ಚುನಾವಣೆಗೆ ಸಜ್ಜಾಗಿದ್ದಾರೆ.

ಇದನ್ನೂ ಓದಿ: Actress Jennifer: ನಿರ್ಮಾಪಕನ ವಿರುದ್ದ ಲೈಂಗಿಕ ಕಿರುಕುಳ ಆರೋಪ - ಕಿರುತೆರೆ ನಟಿ ಜೆನ್ನಿಫರ್ 

ಅದರ ಬೆನ್ನಲೇ ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್ ಖಾನ್ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ನನ್ನು ಭೇಟಿ ಮಾಡಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಬಾಲಿವುಡ್‌ ನಟನ್ನು ಮೀಟ್‌ ಮಾಡಿರುವುದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.

ಕೋಲ್ಕತ್ತಾದಲ್ಲಿರುವ ಮಮತಾ ಬ್ಯಾನರ್ಜಿ ನಿವಾಸಕ್ಕೆ  ಸಲ್ಮಾನ್ ಖಾನ್ ಭೇಟಿ ನೀಡಿದ್ದಾರೆ. ಬಾಲಿವುಡ್‌ ನಟನಿಗೆ ಪಶ್ಚಿಮ ಬಂಗಳದ ಸಂಪ್ರಾದಾಯದಂತೆಯೇ  ಶಾಲು ಹೊದಿಸಿ ಸ್ವಾಗತಿಸಿದ್ದಾರೆ. ಬಳಿಕ ತಮ್ಮ ನಿವಾಸದಲ್ಲಿ 30 ನಿಮಿಷಗಳ ಕಾಲ ಒಂದಿಷ್ಟು ವಿಷಯಗಳ ಬಗ್ಗೆ ಚರ್ಚೆ ಮಾಡಲಾಗಿದೆ. 

ಇದನ್ನೂ ಓದಿ: Sonam Bajwa: ಮೈ ಮೇಲೆ ಬಟ್ಟೆ ಇದೆ, ಒಳ ಉಡುಪು ಇಲ್ಲ ಎಂದ ನೆಟ್ಟಿಗರು .. ಇಲ್ಲಿವೆ ನೋಡಿ ಈ ನಟಿಯ ಹಾಟ್‌ ಫೋಟೋಸ್..

ಸದ್ಯ ಇವರ ಭೇಟಿ ಸಿನಿ ಪ್ರಿಯಯರ ಜೊತೆಗೂ ರಾಜಕಾರಣಿಗಳಿಗೂ ಕೂತುಹಲ ಮೂಡಿಸಿದೆ.  ಬಾಲಿವುಡ್‌ ನಟ ದೀದಯನ್ನು ಭೇಟಿಯಾಗಿರುವ ಫೋಟೊ ಬಾರಿ ವೈರಲ್‌ ಆಗಿದ್ದು ಬಾರಿ ಅಚ್ಚರಿಗೂ ಕಾರಣವಾಗಿದೆ. ಭೇಟಿಯ ಬಳಿಕ ಮಮತಾ ಬ್ಯಾನರ್ಜಿ ಸಲ್ಮಾನ್ ಬಗ್ಗೆ ತಮ್ಮ ಟ್ವೀಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

ಸದ್ಯದಲ್ಲೇ  ಮುಂದಿನ ಲೋಕಸಭೆ ಚುನಾವಣೆ ಇರುವುದರಿಂದ ಮತಗಳನ್ನು ಸೆಳೆಯುವ ಉದ್ದೇಶದಿಂದ ಸಿನಿಮಾ ನಟರ ಜೊತೆ ಸಂಪರ್ಕದಲ್ಲಿದ್ದಾರೆಂದು ಹೆಚ್ಚಿನವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಅದರ ಅಸಲಿಯತ್ತು ಏನೆಂಬುವುದನ್ನು ಮುಂದಿನ ಲೋಕಸಭೆ ಚುನಾವಣೆ ಹಾಗೂ, ಅಲ್ಲಿನ ವಿಧಾನ ಸಭೆ ಚುನಾವಣೆ ವರೆಗೂ ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News