Kareena Kapoor: ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಬಾಲಿವುಡ್‌ ಬೇಬೋ? ವೈರಲ್‌ ಸುದ್ದಿಗೆ ಸ್ಪಷ್ಟನೆ ನೀಡಿದ ನಟಿ!!

Bollywood Actress Kareena Kapoor Entry To Politics: ಲೋಕಸಭೆ ಚುನಾವಣೆ 2024 ದಿನಾಂಕಗಳು ಹತ್ತಿರವಾಗುತ್ತಿದ್ದಂತೆ.. ಹಲವು ಬಿ-ಟೌನ್ ಸೆಲೆಬ್ರಿಟಿಗಳು ವಿವಿಧ ಪಕ್ಷಗಳನ್ನು ಸೇರುವ ವರದಿಗಳು ಹರಿದು ಬರುತ್ತಿವೆ.. 

Written by - Savita M B | Last Updated : Mar 29, 2024, 08:57 AM IST
  • ಲೋಕಸಭೆ ಚುನಾವಣೆ ದಿನಾಂಕಗಳು ಹತ್ತಿರವಾಗುತ್ತಿವೆ
  • ಹಲವು ಬಿ-ಟೌನ್ ಸೆಲೆಬ್ರಿಟಿಗಳು ವಿವಿಧ ಪಕ್ಷಗಳನ್ನು ಸೇರುವ ವರದಿಗಳು ಬರುತ್ತಿವೆ..
  • ಇದೀಗ ಕರೀನಾ ಕಪೂರ್ ಖಾನ್ ರಾಜಕೀಯ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ
Kareena Kapoor: ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಬಾಲಿವುಡ್‌ ಬೇಬೋ? ವೈರಲ್‌ ಸುದ್ದಿಗೆ ಸ್ಪಷ್ಟನೆ ನೀಡಿದ ನಟಿ!! title=

Bollywood Actress Kareena Kapoor: ಲೋಕಸಭೆ ಚುನಾವಣೆ 2024 ದಿನಾಂಕಗಳು ಹತ್ತಿರವಾಗುತ್ತಿವೆ. ಹಲವು ಬಿ-ಟೌನ್ ಸೆಲೆಬ್ರಿಟಿಗಳು ವಿವಿಧ ಪಕ್ಷಗಳನ್ನು ಸೇರುವ ವರದಿಗಳು ಬರುತ್ತಿವೆ.. ಇದೀಗ ಕರೀನಾ ಕಪೂರ್ ಖಾನ್ ಮತ್ತು ಕರಿಷ್ಮಾ ಕಪೂರ್ ಕೂಡ ಶಿವಸೇನೆ ಸೇರಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಆದರೆ ಈ ವರದಿಗಳು ಸುಳ್ಳು ಎಂದು ನಟಿಯ ಆಪ್ತ ಮೂಲವೊಂದು ತಿಳಿಸಿದೆ.. 

ವಾಸ್ತವವಾಗಿ, ಕರೀನಾ ಕಪೂರ್ ಈಗ ರಾಜಕೀಯದಲ್ಲಿ ತನ್ನ ಕೈಯನ್ನು ಪ್ರಯತ್ನಿಸಲು ಹೊರಟಿದ್ದಾರೆ ಎಂಬ ಈ ಸುದ್ದಿ ಕೆಲವು ಸಮಯದಿಂದ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ನಟಿ ತನ್ನ ಸಹೋದರಿ ಹಾಗೂ ಹಿರಿಯ ನಟಿ ಕರಿಷ್ಮಾ ಕಪೂರ್ ಜೊತೆಗೆ ಶಿವಸೇನೆ ಸೇರಲಿದ್ದಾರೆ ಎನ್ನಲಾಗಿತ್ತು... ಆದರೆ ಇದೀಗ ಈ ಬಗ್ಗೆ ಮಾತನಾಡಿರುವ ನಟಿಯರ ತಂಡ ಈ ಸುದ್ದಿಯನ್ನು ಸುಳ್ಳು ಎಂದು ಹೇಳಿದೆ. ಈ ವರದಿಗಳು ಸಂಪೂರ್ಣವಾಗಿ ತಪ್ಪು ಆ ದಿನಗಳಲ್ಲಿ ನಟಿ ತನ್ನ ಕುಟುಂಬದೊಂದಿಗೆ ಆಫ್ರಿಕಾದಲ್ಲಿ ಟ್ರಿಪ್‌ನಲ್ಲಿರುತ್ತಾರೆ ಆಕೆ ರಾಜಕೀಯ ಸೇರುವುದಿಲ್ಲ ಎಂದು ಸ್ಷಷ್ಟನೆ ನೀಡಿದೆ.. 

ಇದನ್ನೂ ಓದಿ-ʼಬಡೆ ಮಿಯಾನ್ ಚೋಟೆ ಮಿಯಾನ್ ಟ್ರೇಲರ್ ಔಟ್‌..! ಇದು ಅಕ್ಕಿ-ಟೈಗರ್‌ ಪವರ್ ಪ್ಯಾಕ್ಡ್ ಶೋ

ಇನ್ನು ಕರಿನಾ ಸಿನಿಮಾಗಳ ಬಗ್ಗೆ ಮಾತನಾಡುವುದಾದರೇ.. ನಟಿ ಪ್ರಸ್ತುತ ತನ್ನ ಮುಂಬರುವ ಚಿತ್ರ 'ಕ್ರ್ಯೂ' ಬಗ್ಗೆ ಚರ್ಚೆಯಲ್ಲಿದ್ದಾರೆ. ಈ ಚಿತ್ರ ಇಂದು (ಮಾರ್ಚ್ 29 ರಂದು) ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಇವರೊಂದಿಗೆ ಖ್ಯಾತ ನಟಿಯರಾದ ಟಬು ಮತ್ತು ಕೃತಿ ಸನೋನ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇವರಲ್ಲದೆ ಕಪಿಲ್ ಶರ್ಮಾ ಕೂಡ ಈ ಚಿತ್ರದಲ್ಲಿ ತಮ್ಮ ನಟನೆಯಿಂದ ಛಾಪು ಮೂಡಿಸಲಿದ್ದಾರೆ. ಇದಲ್ಲದೆ, ಪಂಜಾಬಿ ಗಾಯಕ ಮತ್ತು ಸೂಪರ್‌ಸ್ಟಾರ್ ದಿಲ್ಜಿತ್ ದೋಸಾಂಜ್ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕರೀನಾ, ಟಬು ಮತ್ತು ಕೃತಿ ಮೂವರು ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ.. 

ಇದನ್ನೂ ಓದಿ-Aditi Rao Hydari : ನಟಿ ಅದಿತಿ ರಾವ್‌ ಯಾರು ಗೊತ್ತೆ..? ನಿಮ್ಮನ್ನ ಬೆಚ್ಚಿ ಬೀಳಿಸುತ್ತೆ ನಟಿಯ ಇತಿಹಾಸ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News