Aryan Khan Case: ಆರ್ಯನ್ ಖಾನ್ ಪ್ರಕರಣದಲ್ಲಿ ಸಮೀರ್ ವಾಂಖೇಡೆಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಬಾಂಬೆ ಹೈಕೋರ್ಟ್

Aryan Khan Case: ಆರ್ಯನ್ ಖಾನ್ ಹಾಗೂ ಕ್ರೂಸ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಬಾಂಬೆ ಹೈ ಕೋರ್ಟ್ ಸಮೀರ್ ವಾಂಖೇಡೆಗೆ ಭಾರಿ ನೆಮ್ಮದಿಯ ಸುದ್ದಿಯನ್ನು ನೀಡಿದೆ. ಪ್ರಕರಣದಲ್ಲಿ ಮೇ 22ರವರೆಗೆ ಸಮೀರ್ ವಾಂಖೆಡೆಗೆ ಬಂಧನದಿಂದ ಮುಕ್ತಿ ನೀಡಿ, ತನಿಖೆಗೆ ಸಹಕರಿಸುವಂತೆ ಹೈಕೋರ್ಟ್ ಕೋರಿದೆ.   

Written by - Nitin Tabib | Last Updated : May 19, 2023, 07:01 PM IST
  • ನ್ಯಾಯಾಂಗ ಮತ್ತು ಸಿಬಿಐ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಸಮೀರ್ ವಾಂಖೆಡೆ ಹೈಕೋರ್ಟ್‌ನಲ್ಲಿ ಹೇಳಿದ್ದಾರೆ.
  • ಸಿಬಿಐನಲ್ಲಿ ನನಗೆ ಯಾವುದೇ ದೂರು ಇಲ್ಲ ಆದರೆ ಎನ್‌ಸಿಬಿ ಅಧಿಕಾರಿಗಳು ನಮ್ಮನ್ನು ಗುರಿಯಾಗಿಸಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.
  • ಹೈಕೋರ್ಟ್‌ಗೆ ಸಲ್ಲಿಸಿದ ತಮ್ಮ ಅರ್ಜಿಯಲ್ಲಿ, ವಾಂಖೆಡೆ ತಮ್ಮ ಮತ್ತು ಆರ್ಯನ್ ಖಾನ್ ಅವರ ತಂದೆ ಮತ್ತು ನಟ ಶಾರುಖ್ ಖಾನ್ ನಡುವಿನ ಸಂಭಾಷಣೆಯನ್ನು ಉಲ್ಲೇಖಿಸಿದ್ದಾರೆ.
Aryan Khan Case: ಆರ್ಯನ್ ಖಾನ್ ಪ್ರಕರಣದಲ್ಲಿ ಸಮೀರ್ ವಾಂಖೇಡೆಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಬಾಂಬೆ ಹೈಕೋರ್ಟ್ title=

Aryan Khan Case: ಆರ್ಯನ್ ಖಾನ್ ಕ್ರೂಸ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಮುಂಬೈನ ಮಾಜಿ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆಗೆ ಶುಕ್ರವಾರ ಬಾಂಬೆ ಹೈಕೋರ್ಟ್‌ನಿಂದ ಭಾರಿ ನೆಮ್ಮದಿಯ ಸುದ್ದಿ ಸಿಕ್ಕಿದೆ. ಮೇ 22 ರವರೆಗೆ ವಾಂಖೆಡೆಗೆ ಬಂಧನದಿಂದ ಮುಕ್ತಿ ನೀಡಿದ ಹೈಕೋರ್ಟ್, ತನಿಖೆಗೆ ಸಹಕರಿಸುವಂತೆ ಕೋರಿದೆ. ಇದರೊಂದಿಗೆ ಶನಿವಾರ  ವಾಂಖೆಡೆ ಪ್ರಕರಣದಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಲು ಸಿಬಿಐ ಕಚೇರಿಗೆ ತೆರಳಲಿದ್ದಾರೆ.

ನ್ಯಾಯಾಂಗ ಮತ್ತು ಸಿಬಿಐ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಸಮೀರ್ ವಾಂಖೆಡೆ ಹೈಕೋರ್ಟ್‌ನಲ್ಲಿ ಹೇಳಿದ್ದಾರೆ. ಸಿಬಿಐನಲ್ಲಿ ನನಗೆ ಯಾವುದೇ ದೂರು ಇಲ್ಲ ಆದರೆ ಎನ್‌ಸಿಬಿ ಅಧಿಕಾರಿಗಳು ನಮ್ಮನ್ನು ಗುರಿಯಾಗಿಸಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಹೈಕೋರ್ಟ್‌ಗೆ ಸಲ್ಲಿಸಿದ ತಮ್ಮ ಅರ್ಜಿಯಲ್ಲಿ, ವಾಂಖೆಡೆ ತಮ್ಮ ಮತ್ತು ಆರ್ಯನ್ ಖಾನ್ ಅವರ ತಂದೆ ಮತ್ತು ನಟ ಶಾರುಖ್ ಖಾನ್ ನಡುವಿನ ಸಂಭಾಷಣೆಯನ್ನು ಉಲ್ಲೇಖಿಸಿದ್ದಾರೆ. ಇದರಲ್ಲಿ ಆರ್ಯನ್ ಜೊತೆಗೆ ಯಾವುದೇ ತಪ್ಪು ಸಂಗತಿಗಳು ನಡೆದಿಲ್ಲ ಎಂದು ಅವರು ಹೇಳಿದ್ದಾರೆ. ಈ ಚಾಟ್ ಬಗ್ಗೆ ಜ್ಞಾನೇಶ್ವರ್ ಸಿಂಗ್ ಅವರಿಗೆ ಮಾಹಿತಿ ನೀಡಿರುವುದಾಗಿ ವಾಂಖೇಡೆ ನ್ಯಾಯಾಲಯಕ್ಕೆ ಹೇಳಿದ್ದಾರೆ. 

ಶಾರುಖ್ ಮತ್ತು ಸಮೀರ್ ವಾಂಖೆಡೆ ನಡುವಿನ ಮಾತುಕತೆ ಹೇಗಿತ್ತು
ಸಮೀರ್ ವಾಂಖೆಡೆ ಪ್ರಕಾರ, ಶಾರುಖ್ ಖಾನ್ ಅವರಿಗೆ ಚಾಟ್‌ನಲ್ಲಿ ಮೆಸೇಜ್ ಕಳುಹಿಸಿದ್ದರು ಎನ್ನಲಾಗಿದೆ. ಸಮೀರ್ ಗೆ ಕಳುಹಿಸಿರುವ ಸಂದೇಶದಲ್ಲಿ, ಕಿಂಗ್ ಖಾನ್, “ನನ್ನ ಬಗ್ಗೆ ನೀವು ನನಗೆ ನೀಡಿದ ಎಲ್ಲಾ ವಿಚಾರಗಳು ಮತ್ತು ವೈಯಕ್ತಿಕ ಮಾಹಿತಿಗಳಿಗಾಗಿ ನಾನು ನಿಮಗೆ ಸಾಕಷ್ಟು ಧನ್ಯವಾದ ಹೇಳಲಾರೆ. ಆದರೆ ಆತ ನೀವು ಮತ್ತು ನಾನು ಹೆಮ್ಮೆಪಡುವಂತಹ ವ್ಯಕ್ತಿಯಾಗುತ್ತಾನೆ ಎಂಬುದನ್ನು ನಾನು ಸುನೀಶ್ಚಿತಗೊಳಿಸುವೆ. ಈ ಘಟನೆ ಆತನ ಜೀವನದಲ್ಲಿ ಒಂದು ಉತ್ತಮ ತಿರುವು ಎಂದು ಸಾಬೀತಾಗಲಿದೆ ಎಂಬ ಭರವಸೆ ನಾನು ನೀಡುತ್ತೇನೆ, ಒಳ್ಳೆಯ ರೀತಿಯಲ್ಲಿ...."  ಇದಕ್ಕೂ ಮುಂದುವರೆದು ತಮ್ಮ ಚಾಟ್ ನಲ್ಲಿ ಬರೆದುಕೊಂಡ, ಶಾರುಖ್ ಖಾನ್ ಧನ್ಯವಾದ, ನೀವು ಓರ್ವ ಒಳ್ಳೆಯ ವ್ಯಕ್ತಿ ಎಂದು ಬರೆದಿದ್ದಾರೆ. ದಯವಿಟ್ಟು ಇಂದು ಆತನ ಮೇಲೆ ಕರುಣೆ ತೋರಿ ಎಂದು ನಾನು ವಿನಂತಿಸುತ್ತೇನೆ. ಇದಕ್ಕೆ ಉತ್ತರಿಸಿದ ವಾಂಖೆಡೆ - ಖಂಡಿತವಾಗಿ ಚಿಂತಿಸಬೇಡಿ ಎಂದಿದ್ದಾರೆ. 

ಚಾಟ್ ನಲ್ಲಿ ಮುಂದುವರೆದು ಬರೆದುಕೊಂಡಿರುವ ಶಾರುಕ್ ಖಾನ್ " ಗಾಡ್ ಬ್ಲೇಸ್ ಯು, ನಾನು ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಿ ತಬ್ಬಿಕೊಳ್ಳಲು ಬಯಸುತ್ತೇನೆ. ದಯವಿಟ್ಟು ಅದು ನಿಮಗೆ ಸಾಧ್ಯವಾದಾಗ ನನಗೆ ತಿಳಿಸಿ. ನಾನು ಯಾವಾಗಲೂ ನಿಮ್ಮನ್ನು ಗೌರವಿಸುತ್ತೇನೆ ಎಂಬುದು ಸತ್ಯ ಮತ್ತು ಇದೀಗ ಅದು ಮತ್ತಷ್ಟು ಹೆಚ್ಚಾಗಿದೆ ಅದು ದೊಡ್ಡ ಗೌರವ"  ಎಂದು ಬರೆದಿದ್ದಾರೆ  ಇದಕ್ಕೆ ಉತ್ತರಿಸಿದ ವಾಂಖೆಡೆ, "ಖಂಡಿತ ಡಿಯರ್, ಇದೆಲ್ಲವೂ ಮೊದಲು ಮುಗಿದುಹೋಗಲಿ ಭೇಟಿಯಾಗೋಣ." ಎಂದಿದ್ದಾರೆ.

ಇದನ್ನೂ ಓದಿ-Aryan Khan Case: ಸಮೀರ್ ವಾಂಖೇಡೆ ಹಾಗೂ ಶಾರುಕ್ ಖಾನ್ ನಡುವಿನ ಬೆಚ್ಚಿಬೀಳಿಸುವ ಚಾಟ್ ಬಹಿರಂಗ

ವಾಂಖೆಡೆ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮಾಜಿ ಅಧಿಕಾರಿ ಸಮೀರ್ ವಾಂಖೆಡೆ ಲಂಚ ಪಡೆದ ಆರೋಪವನ್ನು ಎದುರಿಸುತ್ತಿದ್ದಾರೆ. ಅವರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.

ಇದನ್ನೂ ಓದಿ-Gyanvapi Case: ಜ್ಞಾನವಾಪಿ ಪ್ರಕರಣದಲ್ಲಿ ಸುಪ್ರೀಂ ಮಹತ್ವದ ತೀರ್ಪು, ಕಾರ್ಬನ್ ಡೇಟಿಂಗ್ ಗೆ ಸಂಬಂಧಿಸಿದಂತೆ ಮಹತ್ವದ ಆದೇಶ

ವಾಂಖೆಡೆ ಮೇಲಿನ ಆರೋಪಗಳೇನು?
2021 ರ ಅಕ್ಟೋಬರ್ 3 ರಂದು ಗೋವಾಗೆ ಹೋಗುತ್ತಿದ್ದ ಕಾರ್ಡೆಲಿಯಾ ಕ್ರೂಸ್ ನಿಂದ ಮಾದಕವಸ್ತು ವಶಪಡಿಸಿಕೊಂಡ ಪ್ರಕರಣದಲ್ಲಿ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಆರೋಪಿಯನ್ನಾಗಿ ಮಾಡದಿದ್ದಕ್ಕಾಗಿ ಮಾಜಿ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರು 25 ಕೋಟಿ ರೂಪಾಯಿ ಲಂಚವನ್ನು ಸ್ವೀಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಆರೋಪಗಳಿಂದಾಗಿ ಸಿಬಿಐ ಇತ್ತೀಚೆಗೆ ವಾಂಖೆಡೆ ಮತ್ತು ಇತರ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಆದರೆ, ಸಿಬಿಐಗೆ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ವಾಂಖೆಡೆ ಹೈಕೋರ್ಟ್ ರಜಾಕಾಲದ ಪೀಠಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ವಾಂಖೆಡೆ ಅವರ ಈ ಅರ್ಜಿಯ ಕುರಿತು ಪೀಠದ ತೀರ್ಪು ಇನ್ನಷ್ಟೇ ಬರಬೇಕಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News