ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡಗೆ 'ಕಿಕಿ' ಕಂಟಕ

ಪೊಲೀಸರ ಎಚ್ಚರಿಕೆ ನಡುವೆಯೂ ಅಪಾಯಕಾರಿ ಕಿಕಿ ಡ್ಯಾನ್ಸ್ ಮಾಡಿದ ನಿವೇದಿತಾ ವಿರುದ್ಧ ದೂರು.

Last Updated : Aug 1, 2018, 02:50 PM IST
ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡಗೆ 'ಕಿಕಿ' ಕಂಟಕ title=

ಬೆಂಗಳೂರು: ಪೊಲೀಸರ ಎಚ್ಚರಿಕೆ ನಡುವೆಯೂ ಅಪಾಯಕಾರಿ 'ಕಿಕಿ' ಡ್ಯಾನ್ಸ್ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ವಿರುದ್ಧ ದೂರು ದಾಖಲಾಗಿದೆ. 

ಚಲಿಸುತ್ತಿರುವ ಕಾರಿನಿಂದ ಇಳಿದು, ಅದರ ವೇಗಕ್ಕೆ ತಕ್ಕಂತೆ ಇಂಗ್ಲಿಷ್​ ಹಾಡಿಗೆ ಡಾನ್ಸ್​ ಮಾಡಿ, ಮತ್ತೆ ಕಾರಿನಲ್ಲಿ ಕುಳಿತುಕೊಳ್ಳುವುದು 'ಕಿಕಿ' ಡಾನ್ಸ್ ಸವಾಲಾಗಿದೆ. ಇದೊಂದು ಅಪಾಯಕಾರಿ ಸವಾಲೆಂದು ತಿಳಿದಿದ್ದರೂ ಬಿಗ್ ಬಾಸ್ ನ ಬೇಬಿ ಡಾಲ್ ಈ ಸವಾಲನ್ನು ಸ್ವೀಕರಿಸಿ ಇಂಗ್ಲಿಷ್ ಹಾಡಿಗೆ ಹೆಜ್ಜೆ ಹಾಕಿದ್ದಕ್ಕೆ ನಿವೇದಿತಾ ಗೌಡ ವಿರುದ್ಧ ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಅಲ್ಲದೆ, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಹಿತೇಂದ್ರ, ಕೀಕಿ ಅಪಾಯಕಾರಿ ನೃತ್ಯವನ್ನು ಯಾರಾದರೂ ಮಾಡಿದಲ್ಲಿ ಅವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. 

ಪೊಲೀಸರು ಎಚ್ಚರಿಕೆ ನೀಡಿದ್ದರು ನಿವೇದಿತಾ ಗೌಡ ಅದನ್ನು ಉಲ್ಲಂಘಿಸಿ ಅಪಾಯಕಾರಿ ಕಿಕಿ ಡ್ಯಾನ್ಸ್ ಮಾಡುವ ಮೂಲಕ ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿರುವ ಕನ್ನಡ ಚಳುವಳಿಯ ನಾಗೇಶ್‌, ನಿವೇದಿತಾ ಗೌಡ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಹಲಸೂರು ಗೇಟ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಿಂದಾಗಿ ನಿವೇದಿತಾ ಗೌಡಗೆ 'ಕಿಕಿ' ಕಂಟಕ ಎದುರಾಗಿದೆ. 

Trending News