ದೀಪಿಕಾ ಪಡುಕೋಣೆ ತನ್ನ ಮದುವೇಗೆ ಈ ನಟಿನಾ ಕರಿಯಲ್ವಂತೆ...!

     

Last Updated : Jan 29, 2018, 10:17 AM IST
ದೀಪಿಕಾ ಪಡುಕೋಣೆ ತನ್ನ ಮದುವೇಗೆ ಈ ನಟಿನಾ ಕರಿಯಲ್ವಂತೆ...! title=

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ 'ವೋಗ್ ಬಿಎಫ್ಎಫ್' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮಕ್ಕೆ ಅವರು ತನ್ನ ಸಹೋದರಿ, ಅತ್ಯುತ್ತಮ ಸ್ನೇಹಿತೆ ಅನಿಷಾ ಪಡುಕೋಣೆ ಜೊತೆ ಆಗಮಿಸಿದ್ದರು. ಭಾನುವಾರ ಪ್ರಸಾರವಾದ ಈ ಕಾರ್ಯಕ್ರಮದಲ್ಲಿ ಅನೇಕ ವಿಷಯಗಳ ಬಗ್ಗೆ ಮಾತನಾಡಿದ ದೀಪಿಕಾ ಪಡುಕೋಣೆ, ಅದೇ ಸಂದರ್ಭದಲ್ಲಿ ಕೇಳಲಾದ, 'ಕತ್ರಿನಾ ಕೈಫ್ ಅವರನ್ನು ನಿಮ್ಮ ಮದುವೆಗೆ ಆಹ್ವಾನಿಸುವಿರಾ' ಎಂಬ ಪ್ರಶ್ನೆಗೆ ಇಲ್ಲ ಎಂದು ಉತ್ತರಿಸಿದ್ದಾರೆ!

ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ನಡುವಿನ ಭಿನಾಭಿಪ್ರಾಯಕ್ಕೆ ರಣಬೀರ್ ಕಪೂರ್ ಕಾರಣ ಎಂಬುದು ಗಮನಾರ್ಹ. ರಣಬೀರ್, ಕತ್ರಿನಾ ಜೊತೆ ಡೇಟಿಂಗ್ ಮಾಡುವ ಮೊದಲು ದೀಪಿಕಾ ಜೊತೆ ಡೇಟಿಂಗ್ ಮಾಡುತ್ತಿದ್ದರು. 2011ರಲ್ಲಿ ನಮ್ಮ ಸಹವರ್ತಿ ವೆಬ್ಸೈಟ್ನಲ್ಲಿ ಪ್ರಸಾರವಾದ ಸುದ್ದಿ ಪ್ರಕಾರ, ರಣಬೀರ್ ಸಂದರ್ಶನದಲ್ಲಿ ಕತ್ರಿನಾಗಾಗಿ ತಾವು ದೀಪಿಕಾಗೆ ಮೋಸ ಮಾಡಿದ್ದಾರೆಂದು ಒಪ್ಪಿಕೊಂಡಿದ್ದರು. ಆದಾಗ್ಯೂ, ಈಗ ದೀಪಿಕಾ ಮತ್ತು ರಣಬೀರ್ ನಡುವೆ, ಎಲ್ಲವೂ ಉತ್ತಮವಾಗಿದೆ. ಆದರೆ ದೀಪಿಕಾ ಕತ್ರಿನಾ ನಡುವಿನ ಭಿನ್ನಾಭಿಪ್ರಾಯ ಮಾತ್ರ ಸರಿಹೋಗಿಲ್ಲ.

 

 

Trending News