ಮಾಹಿರ್ ಖಾನ್ ಗೆ ಗುಡ್ ಬೈ ಹೇಳಿದ್ರಾ ರಣಬೀರ್ ಕಪೂರ್?

     

Last Updated : Nov 30, 2017, 03:35 PM IST
ಮಾಹಿರ್ ಖಾನ್ ಗೆ ಗುಡ್ ಬೈ ಹೇಳಿದ್ರಾ ರಣಬೀರ್ ಕಪೂರ್? title=

 

ಮುಂಬೈ: ಇತ್ತೀಚಿಗೆ ನ್ಯೂಯಾರ್ಕ ಸಿಟಿಯಲ್ಲಿ  ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಪಾಕಿಸ್ತಾನದ ನಟಿ ಮಾಹಿರ್ ಖಾನ್ ನ್ಯೂಯಾರ್ಕನ ರಸ್ತೆಯೊಂದರಲ್ಲಿ ಇಬ್ಬರು ಸಿಗರೇಟ್ ಸೇದುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ  ಬಹಳ ಸುದ್ದಿ ಮಾಡಿದ್ದವು.ಇದಕ್ಕೆ ಕೆಲವರು ಇಬ್ಬರು ಡೇಟಿಂಗ್ ನಡೆಸುತಿದ್ದಾರೆ ಎನ್ನುವ ಕತೆಯನ್ನು ಸಹ ಕಟ್ಟಿದ್ದರು. ಈ ಹಿಂದೆ ಕತ್ರಿನಾ ಕೈಫ್ ಜೊತೆಯೂ ಕೂಡ ಡೇಟಿಂಗ್ ನಡೆಸಿ ಸುದ್ದಿಯಾಗಿದ್ದ ಈ ರಾಕ್ ಸ್ಟಾರ್ ನಟನಿಗೆ ಯಾವುದು ಶಾಶ್ವತ ಸಂಬಂಧವಾಗಿ ಉಳಿದಿಲ್ಲ,

ಆದರೆ ಈಗ ಬಂದಿರುವ ಹೊಸ ಸುದ್ದಿ ಏನೆಂದರೆ ತಾಯಿ ನೀತು ಕಪೂರ್ ಕಳೆದ ಎರಡು ವರ್ಷದಿಂದ ಮಗನಿಗೆ ತಕ್ಕ ಹುಡುಗಿಯನ್ನು ಹುಡುಕುತ್ತಿರುವುದರಲ್ಲಿ ಬ್ಯೂಜಿಯಾಗಿದ್ದಾರಂತೆ, ಅದರಲ್ಲೂ NRI ಹುಡುಗಿಯನ್ನೇ ನೋಡುತ್ತಿದ್ದಾರೆ ಎನ್ನುವುದು ಹೊಸ ವಿಷಯ.ಹಾಗಾದರೆ ರಣಬೀರ್ ಕಪೂರ್ ಲವ್ ಮ್ಯಾರೇಜ್ ಆಗ್ತಾರೋ ಅಥವಾ ಅರೇಂಜ್ಡ್ ಮ್ಯಾರೇಜ್ ಆಗ್ತಾರೋ ಎನ್ನುವ ವಿಷಯಕ್ಕೆ ಕಾಲವೇ ಉತ್ತರಿಸಬೇಕಂತಿವೆ ಬಾಲಿವುಡ್ ಮೂಲಗಳು.  

Trending News