Diganth: ಉತ್ತರಕಾಂಡದಲ್ಲಿ ಗುಟ್ಕಾ ಮಲ್ಲಿಗೆಯಾದ ದೂದ್‌ ಪೇಡ ದಿಗಂತ್:‌ ಹೊಸ ರಗಡ್‌ ಲುಕ್‌ನಲ್ಲಿ ನಟ!

Diganth New Look: ಚಂದನವನ್‌ ನಟ ದೂದ್ ಪೇಡ ದಿಗಂತ್ ಉತ್ತರಕಾಂಡ ಸಿನಿಮಾದಲ್ಲಿನ ಪಾತ್ರದ ನಯಾ ಲುಕ್‌ ರಿವೀಲ್‌ ಆಗಿದೆ. ಹಾಗೆಯೇ ಈ ಕ್ಯಾರೆಕ್ಟರ್‌ ಪೋಸ್ಟರ್‌ನಲ್ಲಿ ದಿಗಂತ್‌ ಮಾಡುತ್ತಿರುವ ಪಾತ್ರದ ಹೆಸರು ಕೂಡ ತಿಳಿಸಲಾಗಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Apr 18, 2024, 12:12 PM IST
  • ಇಷ್ಟು ದಿನ ಚಾಕೊಲೇಟ್ ಹೀರೋ ತರಹ ಇದ್ದ ದಿಗಂತ್‌ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
  • ಇದರಲ್ಲಿ ಸ್ವತಃ ದಿಗಂತ್ ಕೂಡ ತಮ್ಮನ್ನ ತಾವು ಗುರುತು ಹಿಡಿರೋದಿಲ್ಲ ಎಂದು ಅನಿಸುತ್ತದೆ.
  • ಉತ್ತರಕಾಂಡ ಸಿನಿಮಾ ಶೂಟಿಂಗ್‌ ಇದೇ ಏಪ್ರಿಲ್-15 ರಿಂದಲೇ ವಿಜಯಪುರದಲ್ಲಿ ಪ್ರಾರಂಭವಾಗಿದೆ.
Diganth: ಉತ್ತರಕಾಂಡದಲ್ಲಿ ಗುಟ್ಕಾ ಮಲ್ಲಿಗೆಯಾದ ದೂದ್‌ ಪೇಡ ದಿಗಂತ್:‌ ಹೊಸ ರಗಡ್‌ ಲುಕ್‌ನಲ್ಲಿ ನಟ! title=

Diganth New Look In Uttarakanda: ಸ್ಯಾಂಡಲ್‌ವುಡ್‌ನ ದೂದ್ ಪೇಡ ದಿಗಂತ್ ಉತ್ತರಕಾಂಡ ಸಿನಿಮಾದಲ್ಲಿ ಅಭಿನಯಿಸುತ್ತಿದ್ದರು, ಈ ನಟನ ಹೊಸ ಲುಕ್‌ ರಿವೀಲ್‌ ಆಗಿದೆ. ಇಲ್ಲಿಯ ತನಕ ನಟ ದಿಗಂತ್‌ ಸಾಫ್ಟ್‌ ಕ್ಯಾರೆಕ್ಟರ್‌ಗಳಲ್ಲಿ ಮಾತ್ರ ನಟಿಸುತ್ತಿದ್ದು, ಇದೀಗ ಈ ನಟ ಉತ್ತರಕಾಂಡ ಚಿತ್ರದಲ್ಲಿ ಈತನ ಲುಕ್ ಚೇಂಜ್ ಮಾಡಿದ್ದಾರೆ. ಇಷ್ಟು ದಿನ ಚಾಕೊಲೇಟ್ ಹೀರೋ ತರಹ ಇದ್ದ ದಿಗಂತ್‌ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ನಟ ಈ ಸಿನಿಮಾದಲ್ಲಿ ‘ಮಲ್ಲಿಗೆ’ ಅನ್ನುವ  ಪಾತ್ರ ಮಾಡುತ್ತಿದ್ದಾರೆ. 

ಹೌದು.. ಉತ್ತರಕಾಂಡ ಚಿತ್ರದಲ್ಲಿ ನಿರ್ದೇಶಕ ರೋಹಿತ್ ಪದಕಿ ಒಂದು ಕ್ಯಾರೆಕ್ಟರ್‌ ಅನ್ನ ದಿಗಂತ್ ಮುಖದಲ್ಲಿಯೇ ಕಂಡಿದ್ದಾರೆ. ಬಹುಶಃ ದಿಗಂತ್ ಕೂಡ ಫ್ ಪಾತ್ರ ಮಾಡಿದ್ರೆ ಈ ರೀತಿ ಕಾಣ್ತಾರೆ ಅನ್ನೋ ಕಲ್ಪನೆ ಮಾಡಿಕೊಂಡಿರುವುದಿಲ್ಲ. ಚಿತ್ರತಂಡ ನಟ ದಿಗಂತ್‌ ಪಾತ್ರದ ಪೋಸ್ಟರ್‌ ರಿವೀಲ್‌ ಮಾಡಿದ್ದಾರೆ. ಇದರಲ್ಲಿ ಸ್ವತಃ ದಿಗಂತ್ ಕೂಡ ತಮ್ಮನ್ನ ತಾವು ಗುರುತು ಹಿಡಿರೋದಿಲ್ಲ ಎಂದು ಅನಿಸುತ್ತದೆ. ಅಂತಹ ರಫ್ ಆಗಿರೋ ಪಾತ್ರದಲ್ಲಿಯೇ ಈ ನಟ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

 
 
 
 

 
 
 
 
 
 
 
 
 
 
 

A post shared by diganthmanchale (@diganthmanchale)

ಇದನ್ನೂ ಓದಿ: Uttarakaanda: ಉತ್ತರಕಾಂಡಕ್ಕೆ ಸ್ಯಾಂಡಲ್‌ವುಡ್‌ ಬೋಲ್ಡ್‌ ಬ್ಯೂಟಿ ಎಂಟೀ:‌ ಚೈತ್ರಾ ಆಚಾರ್ ನಯಾ ಲುಕ್‌ ರಿವೀಲ್!

ನಟ ದಿಗಂತ್‌ ಮಂಚಾಲೆ ಉತ್ತರಕಾಂಡ ಕ್ಯಾರೆಕ್ಟರ್‌ ಪೋಸ್ಟರ್‌ನಲ್ಲಿ ಗುಟ್ಕಾ ತಿನ್ನೋ ರಫ್ ಪಾತ್ರವನ್ನು ಮಾಡಿದ್ದಾರೆ. ಇಷ್ಟೊಂದು ಬದಲಾಗಿರುವ ಈ ನಟನ ಪಾತ್ರ ತುಂಬಾನೆ ಸ್ಪೆಷಲ್ ಅಂತ ಅನಿಸುತ್ತದೆ. ಹಾಗೆಯೇ ಈ ಪೋಸ್ಟರ್‌ನಲ್ಲಿ ಪ್ರೀತಿ ಮತ್ತು ಗುಟ್ಕಾ ಎಷ್ಟು ಡೇಂಜರೋ ಅಷ್ಟೇ ಡೇಂಜರ್ ಈ ಮಿರ್ಚಿ ಮಲ್ಲಿಗೆ ಅನ್ನು ಅರ್ಥದಲ್ಲಿಯೇ ತಮ್ಮ ಚಿತ್ರದಲ್ಲಿರುವ ಪಾತ್ರದ ಪರಿಚಯ ಮಾಡಲಾಗಿದೆ. ಚಾಕೊಲೇಟ್ ಹೀರೋ ಆಗಿದ್ದ ದಿಗಂತ್‌ಗೆ ಇದೀಗ ಕಂಪ್ಲೀಟ್ ರಫ್ ಲುಕ್ ನೀಡಿದ್ದಾರೆ.

ಉತ್ತರಕಾಂಡ ಸಿನಿಮಾ ಶೂಟಿಂಗ್‌ ಇದೇ ಏಪ್ರಿಲ್-15 ರಿಂದಲೇ ವಿಜಯಪುರದಲ್ಲಿ ಪ್ರಾರಂಭವಾಗಿದ್ದು, ಹೆಚ್ಚು ಕಡಿಮೆ 15 ದಿನ ಚಿತ್ರೀಕರಣದ ಪ್ಲಾನ್‌ ಆಗಿದೆ. ಇತ್ತೀಚೆಗೆ ನಟಿ ಚೈತ್ರಾ ಆಚಾರ್‌ ಕೂಡ ಈ ಸಿನಿಮಾ ತಂಡ ಸೇರಿಕೊಂಡಿದ್ದು, ಈ ನಟಿ ಲಚ್ಚಿ ಎಂಬ ಪಾತ್ರವನ್ನು ಮಾಡಲಿದ್ದಾರೆ. ಇನ್ನೂ ಈ ಸಿನಿಮಾವನ್ನು ಕೆ.ಆರ್.ಜಿ.ಸಂಸ್ಥೆನಿರ್ಮಾಣ ಮಾಡುತ್ತಿದ್ದು, ಒಳ್ಳೆ ಚಿತ್ರ ತಯಾರಿಸ್ತಿರೋ ಖುಷಿಯಲ್ಲಿ ನಿರ್ಮಾಪಕರಾದ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ.ರಾಜ್ ಇದ್ದಾರೆ. ಮತ್ತೊಂದು ವಿಶೇಷವೆನೆಂದರೆ ಈ ಚಿತ್ರದ ಹಾಡುಗಳಿಗೆ ಬಾಲಿವುಡ್‌ನ ಮ್ಯೂಸಿಕ್ ಡೈರೆಕ್ಟರ್ ಅಮಿತ್ ತಿವಾರಿ ಸಂಗೀತ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News