Rajinikanth Salary: ಅತಿಥಿ ಪಾತ್ರಕ್ಕೂ ಕೋಟಿಗಟ್ಟಲೆ.. ಲಾಲ್ ಸಲಾಂಗಾಗಿ ರಜನಿಕಾಂತ್ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ..?

Rajinikanth Laal Salaam movie payment details: ಎಷ್ಟೇ ದೊಡ್ಡ ಸ್ಟಾರ್ ಹೀರೋ ಆಗಿರಲಿ... ಅತಿಥಿ ಪಾತ್ರಕ್ಕೆ ಎರಡರಿಂದ ಮೂರು ಕೋಟಿ... ಅಥವಾ 10 ಕೋಟಿಗಿಂತ ಕಡಿಮೆ ಹಣ ಪಡೆಯುತ್ತಾರೆ.. ಆದರೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಅತಿಥಿ ಪಾತ್ರಕ್ಕೆ ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಾರೆ ಎಂಬುದು ಈಗ ಹಾಟ್ ಟಾಪಿಕ್ ಆಗಿದೆ..

Written by - Savita M B | Last Updated : Feb 1, 2024, 10:38 AM IST
  • ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್
  • ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಸತತ ಸೋಲು ಕಂಡರೂ ಅವರ ಕ್ರೇಜ್‌.. ಸಂಭಾವನೆ ಸ್ವಲ್ಪವೂ ಕಡಿಮೆಯಾಗಿಲ್ಲ.
  • ಈ ವಿಚಾರದಲ್ಲಿ ತಲೈವಾ ಟೀಕೆಯನ್ನೂ ಎದುರಿಸಿದ್ದರು.
Rajinikanth Salary: ಅತಿಥಿ ಪಾತ್ರಕ್ಕೂ ಕೋಟಿಗಟ್ಟಲೆ.. ಲಾಲ್ ಸಲಾಂಗಾಗಿ ರಜನಿಕಾಂತ್ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ..? title=

Rajinikanth Paycheck in Laal Salaam: ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಸತತ ಸೋಲು ಕಂಡರೂ ಅವರ ಕ್ರೇಜ್‌.. ಸಂಭಾವನೆ ಸ್ವಲ್ಪವೂ ಕಡಿಮೆಯಾಗಿಲ್ಲ. ಈ ವಿಚಾರದಲ್ಲಿ ತಲೈವಾ ಟೀಕೆಯನ್ನೂ ಎದುರಿಸಿದ್ದರು. ಜೈಲರ್ ಚಿತ್ರದ ಸೂಪರ್ ಯಶಸ್ಸಿನ ನಂತರ, ಸೂಪರ್ ಸ್ಟಾರ್ ಹೆಚ್ಚು ಉತ್ಸಾಹದಿಂದ ಚಿತ್ರಗಳನ್ನು ಮಾಡಲು ಪ್ರಾರಂಭಿಸಿದರು. ಇದೀಗ ಅವರ ಮಗಳು ಐಶ್ವರ್ಯ ನಿರ್ದೇಶಿಸುತ್ತಿರುವ ಲಾಲ್ ಸಲಾಂ ಚಿತ್ರದಲ್ಲಿ ರಜನಿ ಕೇವಲ ಅತಿಥಿ ಪಾತ್ರದಲ್ಲಿ ನಟಿಸಿದ್ದರೂ ಲಾಲ್ ಸಲಾಂ ಅವರ ಸಿನಿಮಾ ಎಂದೇ ಪ್ರಮೋಷನ್‌ ಮಾಡಲಾಗುತ್ತಿದೆ.. 

ಇದನ್ನೂ ಓದಿ-ಬಿಳಿ ಸೀರೆಯುಟ್ಟು ಮಲ್ಲಿಗೆ ಹೂವಿನ ನಶೆ ಏರಿಸುವ ಈ ನಟಿ ಯಾರು ಗುರುತಿಸಿ!!

ಕ್ರಿಕೆಟ್ ಹಿನ್ನೆಲೆಯ ಈ ಚಿತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್, ನಿರೋಷಾ, ತಂಗದುರೈ ಮತ್ತು ಧನ್ಯ ಬಾಲಕೃಷ್ಣನ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಎಆರ್ ರೆಹಮಾನ್ ಸಂಗೀತ ನೀಡಿದ್ದು ಸಿನಿಮಾದ ಕ್ರೇಜ್ ಹೆಚ್ಚಿಸಿದೆ. ಇತ್ತೀಚೆಗೆ ನಡೆದ ಈ ಸಿನಿಮಾದ ಆಡಿಯೋ ಸಮಾರಂಭದಲ್ಲಿ ಎಲ್ಲಾ ಹಾಡುಗಳು ಬಿಡುಗಡೆಯಾಗಿದ್ದು, ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ. ಲಾಲ್ ಸಲಾಂ ಫೆಬ್ರವರಿ 9 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. 

ಇದನ್ನೂ ಓದಿ-ಅನುಷ್ಕಾ ಶೆಟ್ಟಿ ನಾಗ ಚೈತನ್ಯ ಮದುವೆ! ಎಂಗೇಜ್‌ಮೆಂಟ್ ಕೂಡ ಆಗಿದೆಯಾ?

ಚಿತ್ರದ ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿವೆ. ಇದೇ ವೇಳೆ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಸಂಬಂಧಿಸಿದ ಸುದ್ದಿಯೊಂದು ಹರಿದಾಡುತ್ತಿದೆ.. ಹೌದು ಈ ಸಿನಿಮಾದಲ್ಲಿ ತಲೈವಾ ಅತಿಥಿ ಪಾತ್ರದಲ್ಲಿ ನಟಿಸಲು ಎಷ್ಟು ಸಂಭಾವನೆ ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಚಿತ್ರತಂಡದಿಂದ ಬಂದಿರುವ ಮಾಹಿತಿ ಪ್ರಕಾರ ಲಾಲ್ ಸಲಾಂ ಚಿತ್ರದಲ್ಲಿ ಮೊಯ್ದೀನ್ ಭಾಯ್ ಆಗಿ ನಟಿಸಲು ಸೂಪರ್ ಸ್ಟಾರ್ ರಜನಿಕಾಂತ್ 40 ಕೋಟಿ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದ್ದು.. ಅತಿಥಿ ಪಾತ್ರಕ್ಕೆ ನಿಜವಾಗಿಯೂ ಇಷ್ಟೊಂದು ಹಣ ತೆಗೆದುಕೊಂಡಿದ್ದಾರಾ ಎಂದು ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News