ಜೈಲರ್ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ ವಿನಾಯಕನ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

Jailer Villan Remuneration: ಜೈಲರ್‌ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಸೌಂಡ್‌ ಮಾಡಿತ್ತು. ಇದೀಗ ಚಿತ್ರದಲ್ಲಿ ವಿಲನ್‌ ಆಗಿ ಅಬ್ಬರಿಸಿದ್ದ ವಿನಾಯಕನ್ ಪಡೆದ ಸಂಭಾವನೆ ಬಗ್ಗೆ ಸೋಷಿಯಲ್‌ ಮಿಡಿಯಾದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ.

Written by - Savita M B | Last Updated : Sep 18, 2023, 03:12 PM IST
  • ತಲೈವ ನಟನೆಯ ಜೈಲರ್‌ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್‌ ಪಡೆದುಕೊಂಡಿತ್ತು
  • ಈ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿರುವಾಗಲೇ ಓಟಿಟಿ ಅಂಗಳಕ್ಕೂ ಕಾಲಿಟ್ಟಿದೆ.
  • ಈ ಸಿನಿಮಾದಲ್ಲಿ ಅದ್ಭುತ ಪಾತ್ರವರ್ಗದಿಂದ ಮಿಂಚಿದ ಜೈಲರ್‌ನ ತಾರಾಗಣದ ಸಂಭಾವನೆ ಸಾಕಷ್ಟು ವದಂತಿಗಳು ಹರಿದಾಡುತ್ತಿದ್ದವು
ಜೈಲರ್ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ ವಿನಾಯಕನ್ ಪಡೆದ ಸಂಭಾವನೆ ಎಷ್ಟು ಗೊತ್ತಾ?  title=

Jailer: ತಲೈವ ನಟನೆಯ ಜೈಲರ್‌ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್‌ ಪಡೆದುಕೊಂಡಿತ್ತು. ಇನ್ನು ಈ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿರುವಾಗಲೇ ಓಟಿಟಿ ಅಂಗಳಕ್ಕೂ ಕಾಲಿಟ್ಟಿದೆ. 

ಇನ್ನು ಈ ಸಿನಿಮಾದಲ್ಲಿ ಅದ್ಭುತ ಪಾತ್ರವರ್ಗದಿಂದ ಮಿಂಚಿದ ಜೈಲರ್‌ನ ತಾರಾಗಣದ ಸಂಭಾವನೆ ಸಾಕಷ್ಟು ವದಂತಿಗಳು ಹರಿದಾಡುತ್ತಿದ್ದವು. ಅದರಲ್ಲೂ ಖಳನಾಯನಾಕನಾಗಿ ರಾರಾಜಿಸಿದ್ದ ವಿನಾಯಕನ್‌ ಪಡೆದಿರುವ ಸಂಭಾವನೆ ಬಗ್ಗೆ ಹಲವಾರು ವರದಿಗಳು ಮಾಹಿತಿ ನೀಡಿದ್ದವು. ಆದರೆ ಅದು ನಿಜವಾ ಅಥವಾ ಸುಳ್ಳಾ ಎಂಬುದರ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ. ಆ ಮಾಹಿತಿ ಇಲ್ಲಿದೆ ನೋಡಿ...

ಇದನ್ನೂ ಓದಿ-ಧ್ರುವ ಸರ್ಜಾ ಮಡಿಲಿಗೆ ಮಗುವಾಗಿ ಸೇರಿದ ಚಿರು..ಗಂಡು ಮಗುವಿಗೆ ಜನ್ಮ ನೀಡಿದ ಪ್ರೇರಣಾ!!   

ಕೋಟಿ ಕೋಟಿ ಕಲೆಕ್ಷನ್‌ ಮಾಡಿ ಬೀಗಿರುವ ಜೈಲರ್‌ ಸಿನಿಮಾ ನಿರ್ಮಾಪಕರು ನಟರನ್ನು, ಜೊತೆಗೆ ಕೈಜೋಡಿಸಿದ ಯಾರನ್ನೂ ಮರೆತಿಲ್ಲ. ಈ ಚಿತ್ರದ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಗಿಫ್ಟ್‌ ನೀಡಿ ಸಂಭ್ರಮಿಸಿದ್ದರು. 

ಸದ್ಯ ಹಲವಾರು ವರದಿಗಳು ವಿನಾಯಕ್‌ 35 ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನುತ್ತಿವೆ. ಇದಕ್ಕೆ ಅವರೇ ಸ್ವತಃ ಒಂದು ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು "ಮಾಡಲಾದ ವರದಿಗಳಂತೆ ಜೈಲರ್‌ ಸಿನಿಮಾಗಾಗಿ ನಾನು 35 ಲಕ್ಷ ಸಂಭಾವನೆ ಪಡದುಕೊಂಡಿಲ್ಲ. ನಾನು ಈ ವದಂತಿಯ ಮೂರು ಪಟ್ಟು ಹಣವನ್ನು ಪಡೆದುಕೊಂಡಿದ್ದೇನೆ ನಿರ್ಮಾಪಕರು ನಾನು ಕೇಳಿದ್ದಷ್ಟು ನೀಡಿದ್ದಾರೆ. ಹಾಗೆಯೇ ಶೂಟಿಂಗ್‌ ಸೆಟ್‌ನಲ್ಲಿ ನನಗೆ ಒಳ್ಳೆಯ ಉಪಚಾರ ಮಾಡಿ ನೋಡಿಕೊಂಡಿದ್ದಾರೆ" ಎಂದು ಖಳನಾಯಕ ವಿನಾಯಕನ್ ತಿಳಿಸಿದ್ದಾರೆ. 

ಇದನ್ನೂ ಓದಿ-Happy Birthday Upendra: 'ಸ್ಯಾಂಡಲ್ ವುಡ್ ಬುದ್ಧಿವಂತ'ನಿಗೆ ಇಂದು ಜನ್ಮದಿನದ ಸಂಭ್ರಮ!!  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News