ʼಡಂಕಿʼ ಗೆಲುವಿಗಾಗಿ ಶಿರಡಿ ಸಾಯಿಬಾಬಾ ಮೊರೆ ಹೋದ ಶಾರುಖ್‌..! ವಿಡಿಯೋ ವೈರಲ್‌

SRK visits Shirdi : ಬಾಲಿವುಡ್‌ ನಟ ಶಾರುಖ್ ಖಾನ್ ಮತ್ತು ಅವರ ಪುತ್ರಿ ಸುಹಾನಾ ಗುರುವಾರಪ್ರಾರ್ಥನೆ ಸಲ್ಲಿಸಿದರು. ಕಳೆದ ಕೆಲವು ದಿನಗಳ ಹಿಂದೆ ಜಮ್ಮುವಿನ ವೈಷ್ಣೋ ದೇವಿ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಇದೀಗ 'ಡಂಕಿ' ಚಿತ್ರದ ಯಶಸ್ಸಿಯಾಗಿ ಸಾಯಿಬಾಬಾ ಮೊರೆ ಹೋಗಿದ್ದಾರೆ.

Written by - Krishna N K | Last Updated : Dec 21, 2023, 05:28 PM IST
  • ಪ್ರಸಿದ್ಧ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿದ ನಟ ಶಾರುಖ್‌ ಖಾನ್‌.
  • ಮಗಳು ಸುಹಾನಾ ಖಾನ್‌ ಜತೆ ಸಾಯಿಬಾಬಾ ದರ್ಶನ ಪಡೆದ ಕಿಂಗ್‌ ಖಾನ್‌.
  • ಇಂದು ಎಸ್‌ಆರ್‌ಕೆ ನಟನೆಯ ಡಂಕಿ ಸಿನಿಮಾ ತೆರೆ ಕಂಡಿದೆ.
ʼಡಂಕಿʼ ಗೆಲುವಿಗಾಗಿ ಶಿರಡಿ ಸಾಯಿಬಾಬಾ ಮೊರೆ ಹೋದ ಶಾರುಖ್‌..! ವಿಡಿಯೋ ವೈರಲ್‌ title=

Shah rukh khan Dunki : ಬಹುನಿರೀಕ್ಷಿತ ಡಂಕಿ ಸಿನಿಮಾ ಇಂದು ತೆರೆ ಕಂಡಿದೆ. ಸಿನಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದೀಗ ಡಂಕಿ ಸಿನಿಮಾ ಯಶಸ್ಸಿಯಾಗಿ ಶಾರುಖ್‌ ದೇವರ ಮೋರೆ ಹೋಗಿದ್ದು, ಮಗಳು ಸುಹಾನಾ ಖಾನ್‌ ಜೊತೆ ಶಿರಡಿ ಸಾಯಿ ಬಾಬಾ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಕುರಿತು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ವಿಡಿಯೋದಲ್ಲಿ ಸುಹಾನಾ ನೀಲಿಬಣ್ಣದ ಸಲ್ವಾರ್-ಕುರ್ತಾ ಸೂಟ್‌ ಧರಿಸಿದ್ದರು. ಶಾರುಖ್ ಖಾನ್ ಬಿಳಿ ಟಿ-ಶರ್ಟ್, ಡಾರ್ಕ್ ಕೋಟ್, ಕಪ್ಪು ಟೋಪಿ ಮತ್ತು ಕೇಸರಿ ಶಾಲು ಧರಿಸಿದ್ದಾರೆ. ಸೆಲೆಬ್ರಿಟಿ ಜೋಡಿಯ ಅನಿರೀಕ್ಷಿತ ಆಗಮನದಿಂದ ಸಾಕಷ್ಟು ಅಭಿಮಾನಿ ಅವರನ್ನು ನೋಡಲು ಮುಗಿಬಿದ್ದರು. ದೇವಸ್ಥಾನದಿಂದ ಹೊರ ಬಂದನಂತರ ಶಾರುಖ್‌ ಅಭಿಮಾನಿಗಳತ್ತ ಕೈ ಬೀಸಿದರು.

ಇದನ್ನೂ ಓದಿ: 30 ಸೆಕೆಂಡ್ ವಿಡಿಯೋ ಮಾಡೋಕೆ ಈ Reels Star ಗೆ 2 ಲಕ್ಷ ರೂ. ಕೊಡ್ಬೇಕಂತೆ..!

ಈ ವರ್ಷದ ಎರಡು ಸೂಪರ್‌ ಹಿಟ್ ಚಿತ್ರಗಳನ್ನು ಶಾರುಖ್‌ ನೀಡಿದ್ದಾರೆ. 'ಪಠಾಣ್' ಮತ್ತು 'ಜವಾನ್' ಅದ್ಭುತ ಪ್ರದರ್ಶನ ಕಂಡಿವೆ. ಇದೀಗ ಶಾರುಖ್ ಖಾನ್ 'ಡುಂಕಿ' ಮೂಲಕ ಹ್ಯಾಟ್ರಿಕ್ ಸಾಧಿಸುವ ಗುರಿಯನ್ನು ಹೊಂದಿದ್ದಾರೆ. ಇಂದು ಬಹುನಿರೀಕ್ಷ ಸಿನಿಮಾ ತೆರೆ ಕಂಡಿದೆ. 

ಅಲ್ಲದೆ, ಜೋಯಾ ಅಖ್ತರ್ ಅವರ 'ದಿ ಆರ್ಚೀಸ್' ಮೂಲಕ ಶಾರುಖ್‌ ಪುತ್ರಿ ಸುಹಾನಾ ಸಿನಿರಂಗಕ್ಕೆ ಕಾಲಿಟ್ಟಿದ್ದಾರೆ. ಈ ಸಿನಿಮಾ ನೆಟ್‌ಪ್ಲಿಕ್ಸ್‌ನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಖುಷಿ ಕಪೂರ್, ಅಗಸ್ತ್ಯ ನಂದಾ, ಮಿಹಿರ್ ಅಹುಜಾ, ವೇದಂಗ್ ರೈನಾ, ಯುವರಾಜ್ ಮೆಂಡಾ ಸೇರಿದಂತೆ ಇತರ ನಟರು ಈ ಸಿನಿಮಾದಲ್ಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News