ಜನ್ಮದಿನದ ಸಂಭ್ರಮದಲ್ಲಿ ಗೋಲ್ಡನ್ ಗರ್ಲ್ 'ಅಮೂಲ್ಯ'

ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡ ಸ್ಯಾಂಡಲ್ ವುಡ್ ನಟಿ ಅಮೂಲ್ಯ.

Yashaswini V Yashaswini V | Updated: Sep 14, 2018 , 02:42 PM IST
ಜನ್ಮದಿನದ ಸಂಭ್ರಮದಲ್ಲಿ ಗೋಲ್ಡನ್ ಗರ್ಲ್ 'ಅಮೂಲ್ಯ'
Pic: Facebook

ಬೆಂಗಳೂರು: ಸ್ಯಾಂಡಲ್ ವುಡ್ ನಟಿ, ಚೆಲುವಿನ ಚಿತ್ತಾರದ ಬೆಡಗಿ ಗೋಲ್ಡನ್ ಗರ್ಲ್ ಅಮೂಲ್ಯ ಜಗದೀಶ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 

ಗೌರಿ-ಗಣೇಶ ಹಬ್ಬಕ್ಕಾಗಿ ತವರಿಗೆ ಆಗಮಿಸಿದ್ದ ಅಮೂಲ್ಯಗೆ ನಟಿಗೆ ಅವರ ತಾಯಿ, ಸೋದರ ಹಾಗೂ ಕುಟುಂಬದ ಸ್ನೇಹಿತರು ಮಧ್ಯರಾತ್ರಿಯೇ ಕೇಕ್ ತಂದುಕತ್ತರಿಸುವ ಮೂಲಕ ಶುಭ ಕೋರಿದ್ದರು.

ಅಲ್ಲದೆ, ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಅವರ ನಿವಾಸದಲ್ಲಿ ಅಮೂಲ್ಯ, ಪತಿ, ಮನೆಯವರು ಹಾಗೂ ಅಭಿಮಾನಿಗಳ ನಡುವೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಚಿಕನ್ ಎಂದರೆ ಬಾಯ್ ಚಪ್ಪರಿಸುವ ಮೌಲ್ಯ ಹುಟ್ಟು ಹಬ್ಬಕ್ಕಾಗಿ ಕೇಕ್ ಮಧ್ಯದಲ್ಲಿ ಚಿಕನ್ ಡಿಸೈನ್ ಇರುವಂತೆ ಕೇಕ್ ಮಾಡಿಸಲಾಗಿತ್ತು.

ತಮ್ಮ ಮದುವೆಯ ದಿನವೂ ಗಿಡ ನೆಡುವ ಮೂಲಕ ಪರಿಸರ ಪ್ರೇಮ ಮೆರೆದಿದ್ದ ಅಮೂಲ್ಯ, ಕಳೆದ ವರ್ಷ ಪತಿ ಜಗದೀಶ್ ಮನೆಯಲ್ಲಿ ತಮ್ಮ ಮೊದಲ ಹುಟ್ಟುಹಬ್ಬದ ಆಚರಿಸಿದ್ದರು. ಆ ಸಂದರ್ಭದಲ್ಲಿ ಅಮೂಲ್ಯ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ  ಗಿಡ ವಿತರಣೆ ಮಾಡಿದ್ದರು.
 

By continuing to use the site, you agree to the use of cookies. You can find out more by clicking this link

Close