Hampi Utsav 2024: ಹಂಪಿ ಉತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ ನಿಮಿಕಾ ರತ್ನಾಕರ್!

Hampi Utsav 2024: ಇಷ್ಟೂ ವರ್ಷಗಳಲ್ಲಿ ಕನ್ನಡ ಚಿತ್ರರಂಗದ ಅನೇಕ ನಟ ನಟಿಯರು ಈ ಉತ್ಸವದಲ್ಲಿ ಭಾಗಿಯಾಗಿ ಮೆರುಗು ನೀಡಿದ್ದಾರೆ. ಈ ಬಾರಿ ಇಂತಹದೊಂದು ಸುವರ್ಣಾವಕಾಶ ಶೇಕ್ ಇಟ್ ಪುಷ್ಪವತಿ ಖ್ಯಾತಿಯ ನಿಮಿಕಾ ರತ್ನಾಕರ್ ಅವರಿಗೆ ಲಭಿಸಿದೆ!

Written by - Zee Kannada News Desk | Last Updated : Feb 2, 2024, 10:25 PM IST
  • ಫೆ.4ರಂದು ಹಂಪಿ ಉತ್ಸವಕ್ಕೆ ಚಾಲನೆ ನೀಡಲಿರುವ ಸಿಎಂ ಸಿದ್ದರಾಮಯ್ಯ
  • ಹಂಪಿ ಉತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ ನಿಮಿಕಾ ರತ್ನಾಕರ್!‌
  • ಶೇಕ್ ಇಟ್ ಪುಷ್ಪವತಿ ಖ್ಯಾತಿಯ ನಿಮಿಕಾ ರತ್ನಾಕರ್‌ಗೆ ಸುವರ್ಣಾವಕಾಶ
Hampi Utsav 2024: ಹಂಪಿ ಉತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ ನಿಮಿಕಾ ರತ್ನಾಕರ್!  title=
ಹಂಪಿ ಉತ್ಸವ 2024

ವಿಜಯನಗರ: ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸ್ಮರಿಸಿಕೊಳ್ಳುವ ಈ ವರ್ಷದ ಹಂಪಿ ಉತ್ಸವಕ್ಕೆ ರಾಜ್ಯ ಸರ್ಕಾರ ಮುಹೂರ್ತ ನಿಗದಿ ಮಾಡಿದೆ. ಇದೇ ತಿಂಗಳ ಫೆಬ್ರವರಿ 4ರಂದು ಮೂರು ದಿನಗಳ ಹಂಪಿ ಉತ್ಸವಕ್ಕೆ ಚಾಲನೆ ಸಿಗಲಿದೆ. ನಾನಾ ಪ್ರಕಾರಗಳ ಕಲಾ ಪ್ರದರ್ಶನ, ಥರ ಥರದ ಕಾರ್ಯಕ್ರಮಗಳು ಈ ಉತ್ಸವದ ಪ್ರಧಾನ ಆಕರ್ಷಣೆ. ಇಷ್ಟೂ ವರ್ಷಗಳಲ್ಲಿ ಕನ್ನಡ ಚಿತ್ರರಂಗದ ಅನೇಕ ನಟ ನಟಿಯರು ಈ ಉತ್ಸವದಲ್ಲಿ ಭಾಗಿಯಾಗಿ ಮೆರುಗು ನೀಡಿದ್ದಾರೆ. ಈ ಬಾರಿ ಇಂತಹದೊಂದು ಸುವರ್ಣಾವಕಾಶ ಶೇಕ್ ಇಟ್ ಪುಷ್ಪವತಿ ಖ್ಯಾತಿಯ ನಿಮಿಕಾ ರತ್ನಾಕರ್ ಅವರಿಗೆ ಲಭಿಸಿದೆ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಶೇಕ್ ಇಟ್ ಪುಷ್ಪವತಿ ಎಂಬ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಪ್ರಸಿದ್ಧಿ ಪಡೆದುಕೊಂಡಿರುವವರು ನಿಮಿಕಾ ರತ್ನಾಕರ್. ವಿಶೇಷವೆಂದರೆ ಈ ಹಾಡೇ ಅವರನ್ನು ಹಂಪಿ ಉತ್ಸವದಲ್ಲಿ ಭಾಗಿಯಾಗಿ ನೃತ್ಯ ಪ್ರದರ್ಶನ ನೀಡುವ ಅವಕಾಶ ಕಲ್ಪಿಸಿದೆ. ಈಗಾಗಲೇ ಅದಕ್ಕೆ ಬೇಕಾದ ತಯಾರಿಗಳನ್ನು ಮಾಡಿಕೊಂಡಿರುವ ನಿಮಿಕಾ, ಆ ಕ್ಷಣಕ್ಕಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ: Poonam Pandey: ಇಂಟರ್ನೆಟ್ ಸೆಲೆಬ್ರಿಟಿ ಪೂನಂ ಪಾಂಡೆಯ ಟಾಪ್ 5 ವಿವಾದಗಳು..!‌

ಹಂಪಿ ಎಂದರೇನೇ ಅದೇನೋ ಆಕರ್ಷಣೆ. ನಿಮಿಕಾ ರತ್ನಾಕರ್ ಪಾಲಿಗೂ ಅಂತಹದೊಂದು ಸೆಳೆತವಿದೆಯಂತೆ. ಆದರೆ ಈವರೆಗೂ ಅಲ್ಲಿಗೆ ಭೇಟಿ ಕೊಡುವ ಅವಕಾಶ ಕೂಡಿ ಬಂದಿರಲಿಲ್ಲ. ಕೆಲ ಹಾಡುಗಳ ಮೂಲಕವಷ್ಟೇ ಹಂಪಿಯನ್ನು ಕಣ್ತುಂಬಿಕೊಂಡಿದ್ದ ಅವರು, ತಮ್ಮ ಪಾಲಿಗೆ ಆ ಪರಿಸರದಲ್ಲಿ ಬೆರೆಯುವ ಅವಕಾಶ ಸಿಕ್ಕಿದ್ದು ಖುಷಿ ಕೊಟ್ಟಿದೆ ಎಂಬುದು ನಿಮಿಕಾ ಮನದ ಮಾತು. 

ಈ ಹಿಂದೆ ನಿಮಿಕಾ ದಸರಾ ಉತ್ಸವದಲ್ಲಿಯೂ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ಅವರ ಪೋಷಕರು ಹಾಜರಿದ್ದು ಖುಷಿಗೊಂಡಿದ್ದರು. ಈ ಬಾರಿಯೂ ಪೋಷಕರೊಂದಿಗೆ ಹಂಪಿ ಉತ್ಸವದಲ್ಲಿ ಭಾಗಿಯಾಗೋ ಇಂಗಿತ ನಿಮಿಕಾರದ್ದು.

ಇದನ್ನೂ ಓದಿ: ಸಹಾಯಕನಿಗೆ ಚಪ್ಪಲಿಯಿಂದ ಹೊಡೆದಿದ್ದಕ್ಕಾಗಿ ಕ್ಷಮೆಯಾಚಿಸಿದ ಖ್ಯಾತ ಗಾಯಕ..!

ಅಷ್ಟಕ್ಕೂ ಶೇಕ್ ಇಟ್ ಪುಷ್ಪವತಿ ಎಂಬ ಹಾಡು ನಿಮಿಕಾಗೆ ಒಂದಿಡೀ ಕರ್ನಾಟಕಕ್ಕೆ ಪ್ರದಕ್ಷಿಣೆ ಹಾಕುವ ಅವಕಾಶ ಕಲ್ಪಿಸುತ್ತಿದೆ. ಈಗಾಗಲೇ ಅವರು ರಾಜ್ಯದ ನಾನಾ ಪ್ರದೇಶಗಳಲ್ಲಿ ಈ ನೃತ್ಯ ಪ್ರದರ್ಶನ ನೀಡಿದ್ದಾರೆ. ಇದೀಗ ಹಂಪಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಅವರ ಪಾಲಿಗೆ ವಿಶೇಷ ಘಳಿಗೆ. ಯಾಕೆಂದರೆ ಉತ್ತರ ಕರ್ನಾಟಕ ಮಂದಿಯ ಪ್ರೀತಿ, ಅಭಿಮಾನ ಪಡೆದುಕೊಂಡಿರುವ ಅವರಿಗೆ ಅಭಿಮಾನಿಗಳ ಸಮ್ಮುಖದಲ್ಲಿ ನೃತ್ಯ ಪ್ರದರ್ಶನ ನೀಡುವ ಸುಯೋಗ ಕೂಡಿ ಬಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News