Harshika Poonacha : ಹಸೆಮಣೆ ಏರಲು ಸಜ್ಜಾದ ನಟಿ..ವಿಶೇಷವಾಗಿ ಲಗ್ನ ಪತ್ರಿಕೆ ಹಂಚಿಕೊಂಡ ಹರ್ಷಿಕಾ-ಭುವನ್..!

Harshika Poonacha Marriage Invitation : ಕನ್ನಡದ ಖ್ಯಾತ ನಟಿ ಹರ್ಷಿತಾ ಪೊಣಚ್ಚ ಅವರು ತಮ್ಮ ಮದಯವೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ತುಂಬಾ ವರ್ಷಗಳಿಂದ ಪ್ರೀತಿಸುತ್ತಿದ್ದ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಕೊನೆಗೂ ಹಸೆಮಣೆ ಏರುತ್ತಿದ್ದಾರೆ. ಸದ್ಯ ತಮ್ಮ ಮದುವೆ ಲಗ್ನ ಪತ್ರಿಕೆಯನ್ನು ವಿಷೇಶವಾಗಿ ಹಂಚಿಕೊಂಡಿದ್ದಾರೆ. 

Written by - Savita M B | Last Updated : Aug 7, 2023, 09:50 AM IST
  • ಚಂದನವನದಲ್ಲಿ ಇತ್ತೀಚಿಗೆ ಗಟ್ಟಿಮೇಳದ ಸದ್ದು ಜೋರಾಗಿಯೇ ಕೇಳಿಬರುತ್ತಿದೆ.
  • ಕಿರು ತೆರೆಯ ಕಲಾವಿದರಿಂದ ಹಿಡಿದು ಬೆಳ್ಳಿ ತೆರೆಯ ನಟ ನಟಿಯರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
  • ಇದೀಗ ಹರ್ಷಿತಾ ಪೊಣಚ್ಚ ಅವರ ಮದುವೆ ಕೂಗು ಕೇಳಿ ಬರುತ್ತಿದೆ.
Harshika Poonacha : ಹಸೆಮಣೆ ಏರಲು ಸಜ್ಜಾದ ನಟಿ..ವಿಶೇಷವಾಗಿ ಲಗ್ನ ಪತ್ರಿಕೆ ಹಂಚಿಕೊಂಡ ಹರ್ಷಿಕಾ-ಭುವನ್..! title=

Harshika Poonacha : ಚಂದನವನದಲ್ಲಿ ಇತ್ತೀಚಿಗೆ ಗಟ್ಟಿಮೇಳದ ಸದ್ದು ಜೋರಾಗಿಯೇ ಕೇಳಿಬರುತ್ತಿದೆ. ಕಿರು ತೆರೆಯ ಕಲಾವಿದರಿಂದ ಹಿಡಿದು ಬೆಳ್ಳಿ ತೆರೆಯ ನಟ ನಟಿಯರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಅಭಿ-ಅವಿವಾ, ವಸಿಷ್ಟ ಸಿಂಹ-ಹರಿಪ್ರಿಯಾ ಮದುವೆ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಹರ್ಷಿತಾ ಪೊಣಚ್ಚ ಅವರ ಮದುವೆ ಕೂಗು ಕೇಳಿ ಬರುತ್ತಿದೆ. 

ನಟಿ ಹರ್ಷಿಕಾ ಪೂಣಚ್ಚ ಬಿಗ್ ಬಾಸ್ ಖ್ಯಾತಿಯ ಭುವನ್ ಜೊತೆ ಮದುವೆಯಾಗುವ ಬಗ್ಗೆ ಇತ್ತೀಚೆಗಷ್ಟೇ ಸ್ಪಷ್ಟನೆ ನೀಡಿದ್ದರು. ಮದುವೆ ದಿನಾಂಕವೂ ನಿಗದಿಯಾಗಿತ್ತು. ಸದ್ಯ ನಟಿ ಸಪ್ತಪದಿ ತುಳಿಯುವುದು ಮಾತ್ರ ಬಾಕಿ ಇದೆ. 

ಇದನ್ನೂ ಓದಿ- PUBG ಹುಚ್ಚಿಗೆ ಹೆತ್ತವರನ್ನೇ ಹೊಡೆದು ಕೊಂದ ಪಾಪಿ ಮಗ..!

ಇತ್ತೀಚಿಗಷ್ಟೇ ಕೊಡಗಿನ ಇಗ್ಗುತ್ತಪ್ಪ ದೇವಾಲಯದಲ್ಲಿ ಸರಳವಾಗಿ ಲಗ್ನಪತ್ರಿಕೆ ಕಾರ್ಯಕ್ರಮ ನಡೆದಿದೆ. ಎರಡು ಕುಟುಂಬದ ಸದಸ್ಯೆರು ಮತ್ತು ಆತ್ಮೀಯರು ಭಾಗಿಯಾಗಿದ್ದರು. ಸದ್ಯ ಈ ಜೋಡಿ ಆತ್ಮೀಯರು, ಸಿನಿರಂಗದ ನಟ ನಟಿಯರು, ಸೇರಿದಂತೆ ಇನ್ನಿತರ ಗಣ್ಯರಿಗೆ ಆಮಂತ್ರಣ ಪತ್ರಿಕೆ ಹಂಚುತ್ತಿದ್ದಾರೆ. 

ಇನ್ನು ಈ ಕ್ಯೂಟ್‌ ಕಪಲ್‌ ಮದುವೆ ಆಗಸ್ಟ್ 24 ಕ್ಕೆ ಅದ್ದೂರಿಯಾಗಿ ನಡೆಯಲಿದ್ದು, ಆಮಂತ್ರಣ ಪತ್ರಿಕೆ ಈಗಾಗಲೇ ಸಿದ್ಧವಾಗಿದೆ. ಕೊಡಗು ಭಾಷೆಯಲ್ಲಿಯೇ ಆಮಂತ್ರಣ ಪತ್ರಿಕೆಯನ್ನು ಮಾಡಲಾಗಿದದ್ದು, ಕೊಡಗು ಸಂಪ್ರದಾಯದಂತೆ ಮದುವೆಯೂ ನಡೆಲಿದೆ. 

ಹರ್ಷಿತಾ ಪೊಣಚ್ಚ ಹಾಗೂ ಭುವನ್‌ ತಮ್ಮ ಮದುವೆ ಲಗ್ನ ಪತ್ರಿಕೆಯನ್ನು ವಿಷೇಶವಾಗಿ ಹಂಚಿಕೊಂಡಿದ್ದಾರೆ. ಇನ್ನು ಲಗ್ನ ಪತ್ರಿಕೆಯಲ್ಲಿ ಅವರಿಬ್ಬರ ಬಾಲ್ಯದ ಚಿತ್ರವನ್ನು ಹಾಕಲಾಗಿದೆ. ವಿಶೇಷವೆಂದರೇ ತಮ್ಮ ತೋಟದಲ್ಲಿ ಬೆಳೆದ ಮೆಣಸು, ಕಾಫಿ ಪೌಡರ್‌ ಜೇನುತುಪ್ಪದ ಜೊತೆ ಲಗ್ನ ಪತ್ರಿಕೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಈ ನವಜೋಡಿಯ ಲಗ್ನ ಪತ್ರಿಕೆ ಹಂಚುತ್ತಿರುವ ರೀತಿ ಬಾರೀ ವೈರಲ್‌ ಆಗಿದೆ. 

ಇದನ್ನೂ ಓದಿ- ಸ್ವಿಮ್ ಸೂಟ್‌ನಲ್ಲಿ ಮಾಳವಿಕಾ ಶೈನಿಂಗ್‌ : ಹಾಟ್‌ ಫೋಟೋಸ್‌ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News