2020ರಲ್ಲಿ ನಿಮ್ಮ ಜೀವನಕ್ಕೆ ಸಂಬಂಧಿಸಿದ ಈ ಸಂಗತಿಗಳು ಬದಲಾಗಲಿವೆ

ನಿಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ಹೊಸ ವರ್ಷದಲ್ಲಿ ಬದಲಾಗಲಿವೆ. ಹಣಕಾಸಿನ ವಿಷಯದಲ್ಲಿ, ಅದರಲ್ಲೂ ವಿಶೇಷವಾಗಿ ವೈಯಕ್ತಿಕ ಹಣಕಾಸಿನ ಮೇಲೆ ಇವು ಪ್ರಭಾವ ಬೀರಲಿದೆ. ಯಾವುದು ಅಗ್ಗವಾಗಲಿದೆ ಅಥವಾ ಯಾವುದು ದುಬಾರಿಯಾಗಲಿದೆ ಎಂಬುದನ್ನು ತಿಳಿಯಲು ಈ ಲೇಖನ ಓದಿ

Written by - Nitin Tabib | Last Updated : Dec 30, 2019, 03:24 PM IST
2020ರಲ್ಲಿ ನಿಮ್ಮ ಜೀವನಕ್ಕೆ ಸಂಬಂಧಿಸಿದ ಈ ಸಂಗತಿಗಳು ಬದಲಾಗಲಿವೆ title=

1 ಜನವರಿ 2020 ರಿಂದ ಕೆಲವು ಹೊಸ ನಿಯಮಗಳು ಜಾರಿಗೆ ಬರಲಿವೆ. ಇವುಗಳಲ್ಲಿ ಆಧಾರ್, ಎಟಿಎಂ, ವಿಮೆ ಮುಂತಾದ ಪ್ರಮುಖ ವಿಷಯಗಳು ಒಳಗೊಂಡಿವೆ. ಅವುಗಳ ನೇರ ಪ್ರಭಾವ ನಿಮ್ಮ ಜೇಬಿನ ಮೇಲೆ ಆಗಲಿದೆ. ಜನವರಿ 1, 2020 ರಿಂದ ಏನು ಬದಲಾಗುತ್ತಿದೆ ಮತ್ತು ಯಾವ ಹೊಸ ನಿಯಮಗಳನ್ನು ಜಾರಿಗೆ ತರಲಿದೆ ಎಂದು ತಿಳಿಯೋಣ.

ಚಿನ್ನಾಭರಣದ ನಿಯಮಗಳಲ್ಲಿ ಬದಲಾವಣೆ
ಹೊಸ ವರ್ಷದಲ್ಲಿ ಚಿನ್ನಾಭರಣ ಖರೀದಿಸುವ ನಿಯಮಗಳಲ್ಲಿ ಬದಲಾವಣೆ ಇರಬಹುದು. ಹೊಸ ವರ್ಷದಿಂದ ಆಭರಣಗಳ ಹಾಲ್ಮಾರ್ಕಿಂಗ್ ಅನ್ನು ಸರ್ಕಾರ ಕಡ್ಡಾಯಗೊಳಿಸಲಿದೆ. ಹೊಸ ನಿಯಮಗಳು 2021 ರ ಜನವರಿ 15 ರೊಳಗೆ ದೇಶಾದ್ಯಂತ ಜಾರಿಗೆ ಬರಲಿದೆ. ಇದೀಗ ಚಿನ್ನದ ಆಭರಣಗಳ ಮೇಲೆ ಹಾಲ್ಮಾರ್ಕ್ ಮಾಡುವುದು ಸ್ವಯಂಪ್ರೇರಿತವಾಗಿದೆ. ಹಾಲ್ಮಾರ್ಕ್ ಚಿನ್ನದ ಶುದ್ಧತೆಗೆ ಪುರಾವೆಯಾಗಿದೆ. ಹಾಲ್ಮಾರ್ಕ್ ಸರಿಯಾಗಿಲ್ಲದಿದ್ದರೆ, ಆಭರಣ ವ್ಯಾಪಾರಿಗಳಿಗೆ ನೋಟಿಸ್ ಸಹ ನೀಡಲಾಗುತ್ತದೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆಯ ನಿಯಮಗಳಲ್ಲಿ ಬದಲಾವಣೆ
60ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದಿದ ವ್ಯಕ್ತಿಯು ಹಿರಿಯ ನಾಗರಿಕ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್) ಅಡಿಯಲ್ಲಿ ಹೂಡಿಕೆ ಮಾಡಬಹುದು. ಈ ಖಾತೆಯು 5 ವರ್ಷಗಳಲ್ಲಿ ಮ್ಯಾಚ್ಯುರ್ ಆಗುತ್ತದೆ. ಈ ಕಾರಣದಿಂದಾಗಿ, 5 ವರ್ಷಗಳ ಮೊದಲು ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ಎಸ್‌ಸಿಎಸ್‌ಎಸ್‌ನಲ್ಲಿ ಬ್ಯಾಂಕ್ ಎಫ್‌ಡಿಗಿಂತ ಹೆಚ್ಚಿನ ಬಡ್ಡಿ ಸಿಗುತ್ತದೆ.

ವಿಮಾ ಪಾಲಿಸಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ
ಜೀವ ವಿಮಾ ಪಾಲಿಸಿಯ ನಿಯಮಗಳು 1 ಫೆಬ್ರವರಿ 2020 ರಿಂದ ಬದಲಾಗುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ IRDA ವಿಮಾ ಕಂಪನಿಗಳಿಗೆ ಆದೇಶ ರವಾನಿಸಿದೆ. ಈ ಬದಲಾವಣೆಗಳು ಲಿಂಕ್ಡ್, ಲಿಂಕ್ ಮಾಡದ ವಿಮಾ ಪಾಲಸಿಗಳಿಗೆ ಅನ್ವಯಿಸುತ್ತಿವೆ. ಹೊಸ ನಿಯಮಗಳ ಅನುಷ್ಠಾನದಿಂದ ಪ್ರೀಮಿಯಂ ದುಬಾರಿಯಾಗಿ. ಖಾತರಿಯ ಲಾಭವೂ ಸ್ವಲ್ಪ ಕಡಿಮೆ ಆಗಲಿದೆ. ಪಾಲಸಿ ಮ್ಯಾಚ್ಯುರ್ ನಂತರ ಹಣ ಹಿಂಪಡೆತಡ ಮಿತಿ 33% ರಿಂದ 60% ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಪಾಲಿಸಿ ತೆಗೆದುಕೊಳ್ಳುವವರಿಗೆ ಖಾತರಿಯ ಆದಾಯವೂ ಸಿಗಲಿದೆ. ಯುಲಿಪ್ ಹೂಡಿಕೆದಾರರಿಗೆ ಕನಿಷ್ಠ ಜೀವಿತಾವಧಿ ಕವರ್ ಕಡಿಮೆಯಾಗಲಿದೆ.

ದುಬಾರಿಯಾಗಲಿದೆ ವಾಹನ ಖರೀದಿ
1 ಜನವರಿ 2020 ರಿಂದ ಎಲ್ಲಾ ರೀತಿಯ ವಾಹನಗಳು ದುಬಾರಿಯಾಗಲಿವೆ. ಎಲ್ಲಾ ವಾಹನ ಕಂಪನಿಗಳು ತಮ್ಮ ವಾಹನಗಳ ಬೆಲೆಯಲ್ಲಿ ಏರಿಕೆ ಮಾಡಲಿವೆ. ಬಿಎಸ್-4  ಎಂಜಿನ್ ಕಡ್ಡಾಯ ನಿಯಮ ಅನುಷ್ಠಾನದ ನಂತರ, ವೆಚ್ಚ ಅತಿಕ್ರಮಣದಿಂದಾಗಿ ಬೆಲೆಗಳು ಹೆಚ್ಚಾಗತೊಡಗಿವೆ. ಮಾರುತಿ ಮತ್ತು ಟಾಟಾ, ಹ್ಯುಂಡೈ ಮುಂತಾದ ಕಂಪನಿಗಳು ಈಗಾಗಲೇ ಈ ಕುರಿತು ಘೋಷಣೆ ಕೂಡ ಮಾಡಿವೆ. ಮಹೀಂದ್ರಾ ಮತ್ತು ಮಹೀಂದ್ರಾ ಕೂಡ ಬೆಲೆ ಹೆಚ್ಚಿಸುವುದಾಗಿ ಹೇಳಿದೆ. ವಾಹನಗಳ ಬೆಲೆ ಹೆಚ್ಚಳದಿಂದಾಗಿ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಕುಸಿತವೂ ಕೂಡ ಗಮನಿಸಬಹುದಾಗಿದೆ.

ಫ್ರಿಡ್ಜ್, ಎಸಿ ಇತ್ಯಾದಿಗಳು ಕೂಡ ದುಬಾರಿಯಾಗಲಿವೆ
ಹೊಸ ವರ್ಷದಲ್ಲಿ, ರೆಫ್ರಿಜರೇಟರ್ ಮತ್ತು ಎಸಿಯ ಬೆಲೆಯಲ್ಲಿಯೂ ಕೂಡ ಏರಿಕೆಯಾಗಲಿದೆ. ರೆಫ್ರಿಜರೇಟರ್‌ಗಳು ಸುಮಾರು 6000 ರೂಪಾಯಿಗಳಷ್ಟು ದುಬಾರಿಯಾಗಲಿವೆ. 5 ಸ್ಟಾರ್ ಎಸಿ, 165 ಲೀಟರ್‌ಗಿಂತ ಹೆಚ್ಚಿನ ಕ್ಷಮತೆಯ ಫ್ರಿಜ್‌ಗಳ ಬೆಲೆ ಹೆಚ್ಚಾಗಲಿದೆ. ಹೊಸ ಎನರ್ಜಿ ಲೆವೆಲಿಂಗ್ ಮಾನದಂಡಗಳು ಜಾರಿಗೆ ಬರಲಿವೆ. ಎಸಿ ಮತ್ತು ಫ್ರಿಜ್‌ನಲ್ಲಿ ತಂಪಾಗಿಸಲು ಬಳಸಲಾಗುವ ಫೋಮ್ ಬದಲಿಗೆ ನಿರ್ವಾತ ಫಲಕಗಳನ್ನು ಬರಲಿವೆ.

ಹೊಸ ವರ್ಷದಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯವಾಗಲಿದೆ
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ  ವಿದ್ಯುನ್ಮಾನ ಪದ್ಧತಿ ಆರಂಭಗೊಂಡಿದೆ. ಜನವರಿ 15 ರಿಂದ ಎಲ್ಲಾ ವಾಹನಗಳಿಗೆ ಫಾಸ್ಟಾಗ್ ಕಡ್ಡಾಯವಾಗಲಿದೆ. ಹೆದ್ದಾರಿಯಲ್ಲಿ ಟೋಲ್ ನಾಕಾಗಳ ಮೂಲಕ ಸಾಗುವ ಎಲ್ಲ ವಾಹನಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯವಾಗಿರಲಿದೆ. ಇದುವರೆಗೆ ಸುಮಾರು 1 ಕೋಟಿ ಫಾಸ್ಟ್ಯಾಗ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಟ್ಯಾಗ್ ಮಾಡಲಾದ ವಾಹನಗಳು ಮಾತ್ರ ಫಾಸ್ಟ್ಯಾಗ್ ಲೇನ್ ಮೂಲಕ ಹಾದು ಹೋಗಬಹುದಾಗಿದೆ.  ಫಾಸ್ಟ್ಯಾಗ್ ಲೇನ್ ಮೂಲಕ ವೇಗದಿಂದ ವಾಹನ ಚಲಾಯಿಸಿಕೊಂಡು ಹೋದರೆ, ಅಂತವರ ಟೋಲ್ ಚಾರ್ಜ್ ದ್ವಿಗುಣವಾಗಲಿದೆ.

ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಜಾರಿಗೆ ಬರಲಿದೆ
ಪಡಿತರ ಚೀಟಿಯ ಪ್ರಮಾಣಿತ ಸ್ವರೂಪವನ್ನು ಸರ್ಕಾರ ಸಿದ್ಧಪಡಿಸಿದ್ದು,  ಯೋಜನೆಯಡಿಯಲ್ಲಿ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋದಾಗ ಕಾರ್ಡ್‌ನ ಲಾಭ ಪಡೆಯಲು ಹೊಸ ಪಡಿತರ ಚೀಟಿ ಪಡೆಯುವ ಅಗತ್ಯವಿಲ್ಲ. ಈ ನಿಯಮವನ್ನು ಮುಂದಿನ ವರ್ಷ ಜೂನ್ 1 ರಿಂದ ಜಾರಿಗೆ ತರಲಾಗುತ್ತಿದೆ. ಅಷ್ಟೇ ಅಲ್ಲ ಹಳೆ ಪಡಿತರ ಚೀಟಿ ಬಳಸಿಯೇ ಗ್ರಾಹಕರು  ಪಡಿತರ ಪಡೆಯಲು ಸಾಧ್ಯವಾಗಲಿದೆ. ಜೊತೆಗೆ ಯಾವುದೇ ಪಡಿತರ ಅಂಗಡಿಯಿಂದ ನೀವು  ಪಡಿತರವನ್ನು ಖರೀದಿಸುವ ಸೌಲಭ್ಯ ಸಿಗಲಿದೆ.

ಈ ಕೆಲಸ ಮಾಡದೇ ಹೋದಲ್ಲಿ ರದ್ದಾಗಲಿದೆ ನಿಮ್ಮ ಪ್ಯಾನ್ ಕಾರ್ಡ್
ಜನವರಿ 1 ರಿಂದ ಪ್ಯಾನ್ ಕಾರ್ಡ್‌ ನಿಯಮದಲ್ಲಿ ದೊಡ್ಡ ಬದಲಾವಣೆ ಕಂಡುಬರಲಿದೆ. ಡಿಸೆಂಬರ್ 31 ರೊಳಗೆ ಪ್ಯಾನ್-ಆಧಾರ್ ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ಜನವರಿ 1 ರಿಂದ ರದ್ದಾಗಲಿದ್ದು, ಅದನ್ನು ನಿಷ್ಕ್ರಿಯ ವಿಭಾಗದಲ್ಲಿ ಸೇರಿಸಲಾಗುವುದು. ಇದರರ್ಥ ನಿಮ್ಮ ಪಾಲಿಗೆ ಪ್ಯಾನ್ ಕಾರ್ಡ್ ಒಂದು ಜಂಕ್ ಆಗಿ ಪರಿಣಮಿಸಲಿದೆ. ಒಂದು ವೇಳೆ ನಿಮ್ಮ ಪ್ಯಾನ್ ಕಾರ್ಡ್ ಮಾನ್ಯತೆ ರದ್ದಾದರೆ, ಆದಾಯ ತೆರಿಗೆ, ಹೂಡಿಕೆ ಅಥವಾ ಸಾಲ ಇತ್ಯಾದಿಗಳಿಗೆ ಸಂಬಂಧಿಸಿದ ಯಾವುದೇ ಕೆಲಸ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ.

ಚಿಪ್ ರಹಿತ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳು ಬಂದ್ ಆಗಲಿವೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಎಲ್ಲ ಗ್ರಾಹಕರಿಗೆ ಮ್ಯಾಗ್ನೆಟಿಕ್ ಸ್ಟ್ರೈಪ್ ಡೆಬಿಟ್ ಕಾರ್ಡ್ ಅನ್ನು ಇಎಂವಿ ಚಿಪ್ ಕಾರ್ಡ್ ಆಗಿ ಪರಿವರ್ತಿಸುವಂತೆ ಸೂಚಿಸಿದೆ. ಇದಕ್ಕಾಗಿ ಎಸ್‌ಬಿಐ ಇಎಂವಿ ಚಿಪ್ ಮತ್ತು ಪಿನ್ ಆಧಾರಿತ ಡೆಬಿಟ್ ಕಾರ್ಡ್‌ಗಳನ್ನು ವಿತರಿಸಲು ಆರಂಭಿಸಿದೆ. ಈ ಕೆಲಸ ಮಾಡಿಕೊಳ್ಳಲು ಬ್ಯಾಂಕ್  31 ಡಿಸೆಂಬರ್ 2019 ಅನ್ನು ಅಂತಿಮ ದಿನಾಂಕವಾಗಿ ನಿಗದಿಪಡಿಸಿದೆ. ಈ ಕೆಲಸ ನೀವು ಮಾಡದೆ ಹೋದಲ್ಲಿ ನಿಮ್ಮ ಹಳೆ ಕಾರ್ಡ್ ನಿರ್ಬಂಧಕ್ಕೆ ಒಳಗಾಗಲಿದ್ದು, ನಿಮಗೆ ATMನಿಂದ ಹಣ ಪಡೆಯುವುದು ಸಾಧ್ಯವಾಗದೆ ಹೋಗಬಹುದು.

ಬಂದ್ ಆಗಲಿದೆ ಮೋದಿ ಸರ್ಕಾರದ ಈ ಯೋಜನೆ
1 ಜನವರಿ 2020ರಿಂದ ಮೋದಿ ಸರ್ಕಾರ ಆರಂಭಿಸಿದ್ದ "ಸಬಕಾ ವಿಶ್ವಾಸ್" ಯೋಜನೆ ಬಂದ್ ಆಗಲಿದೆ. ಸಬ್ಕಾ ವಿಶ್ವಾಸ್ ಯೋಜನೆಯನ್ನು 2019-20ರ ಹಣಕಾಸು ವರ್ಷದ ಸಾಮಾನ್ಯ ಬಜೆಟ್‌ನಲ್ಲಿ ಪರಿಚಯಿಸಲಾಯಿತು. ಪರೋಕ್ಷ ತೆರಿಗೆಯ ಬಾಕಿ ಇರುವ ವಿವಾದಗಳನ್ನು ಬಗೆಹರಿಸಲು ಹಣಕಾಸು ಸಚಿವಾಲಯ ಈ ಯೋಜನೆಯನ್ನು ರೂಪಿಸಿತ್ತು. ಈ ಯೋಜನೆಯ ಅವಧಿ 31 ಡಿಸೆಂಬರ್ 2019 ಕ್ಕೆ ಕೊನೆಗೊಳ್ಳುತ್ತದೆ. ಈ ಯೋಜನೆಯಡಿ, ತೆರಿಗೆ ಪಾವತಿಸಬೇಕಾದವರಿಗೆ ಸರ್ಕಾರದಿಂದ 70%ವರೆಗಿನ ರಿಯಾಯಿತಿ ಸಿಗುತ್ತದೆ.

Trending News