Jailer : ಜೈಲರ್‌ ಒಟಿಟಿ ಎಂಟ್ರಿ ಕನ್ಫರ್ಮ್‌...ತಿಂಗಳಿಗೂ ಮೊದಲೇ ಡಿಜಿಟಲ್‌ ಅಂಗಳಕ್ಕೆ ಕಾಲಿಟ್ಟಿದ್ದೇಕೆ..?

Jailer OTT Release Date Fix : ಸದ್ಯ ಬಾಕ್ಸಾಫೀಸ್‌ ಕೊಳ್ಳೆ ಹೊಡೆಯುತ್ತಿರುವ ಜೈಲರ್‌ ಸಿನಿಮಾ ಇದೀಗ ಒಟಿಟಿ ಅಂಗಳಕ್ಕೆ ಕಾಲಿಡಲಿದೆ. ಎಲ್ಲಿ? ಯಾವಾಗ? ಇಲ್ಲಿದೆ ನೋಡಿ ಫುಲ್‌ ಡಿಟೇಲ್ಸ್‌...  

Written by - Savita M B | Last Updated : Sep 2, 2023, 01:53 PM IST
  • ಕಾಲಿವುಡ್‌ ಸೂಪರ್‌ ಸ್ಟಾರ್‌ ರಜನಿಕಾಂತ್ ಅಭಿನಯದ ಜೈಲರ್‌ ಸಿನಿಮಾ
  • ಸಿನಿಮಾ ಸದ್ಯ 600 ಕೋಟಿ ಕ್ಲಬ್‌ ಸಿನಿಮಾಗಳ ಪಟ್ಟಿಗೆ ಸೇರ್ಪಡೆಯಾಗಿದೆ.
  • ಇದೀಗ ಇದೇ ಸಿನಿಮಾ ಒಟಿಟಿಗೆ ಬರಲು ರೆಡಿಯಾಗಿದೆ
Jailer : ಜೈಲರ್‌ ಒಟಿಟಿ ಎಂಟ್ರಿ ಕನ್ಫರ್ಮ್‌...ತಿಂಗಳಿಗೂ ಮೊದಲೇ ಡಿಜಿಟಲ್‌ ಅಂಗಳಕ್ಕೆ ಕಾಲಿಟ್ಟಿದ್ದೇಕೆ..?  title=

Jailer : ಕಾಲಿವುಡ್‌ ಸೂಪರ್‌ ಸ್ಟಾರ್‌ ರಜನಿಕಾಂತ್ ಅಭಿನಯದ ಜೈಲರ್‌ ಸಿನಿಮಾ ಬಿಡುಗಡೆಯಾಗಿ ಎಲ್ಲ ದಾಖಲೆಗಳನ್ನು ಉಢೀಸ್‌ ಮಾಡುತ್ತಿದೆ. ಆಗಸ್ಟ್‌ 11ರಂದು ಬಿಡುಗಡೆಯಾದ ಈ ಸಿನಿಮಾ ಸದ್ಯ 600 ಕೋಟಿ ಕ್ಲಬ್‌ ಸಿನಿಮಾಗಳ ಪಟ್ಟಿಗೆ ಸೇರ್ಪಡೆಯಾಗಿದೆ. 

ನೆಲ್ಸನ್‌ ದಿಲೀಪ್ ಕುಮಾರ್‌ ನಿರ್ದೇಶನದಡಿಯಲ್ಲಿ ಮೂಡಿಬಂದಿರುವ ಈ ಸಿನಿಮಾಗೆ ಅನಿರುದ್ಧ ರವಿಚಂದರ್‌ ಅವರ ಮ್ಯೂಸಿಕ್‌ ದೊರಕಿದೆ. ಈ ಸಿನಿಮಾ ಬಿಡುಗಡೆಯಗೂ ಮುನ್ನವೇ ಅಭಿಮಾನಿಗಳಲ್ಲಿ ಎಲ್ಲಿಲ್ಲದ ಕುತೂಹಲ ಹೆಚ್ಚಿಸಿತ್ತು. ಈ ಸಿನಿಮಾದ ಮತ್ತೊಂದು ವಿಶೇಷತೆಯೆಂದರೇ ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್‌ ಶಿವಣ್ಣ ಈ ಚಿತ್ರದಲ್ಲಿ ಕಾಣಿಸಿಕೊಂಡಿರುವುದು.

ಇದನ್ನೂ ಓದಿ-ʼದಳಪತಿ 68ʼ ಚಿತ್ರದಲ್ಲಿ ವಿಜಯ್‌ ಡಬಲ್‌ ರೋಲ್...ಈ ಇಬ್ಬರು ನಾಯಕಿಯರ ಜೊತೆ ರೋಮ್ಯಾನ್ಸ್‌!

ಹೀಗೆ ದೊಡ್ಡ ತಾರಾಬಳಗವನ್ನು ಹೊಂದಿರುವ ಈ ಸಿನಿಮಾ ದೊಡ್ಡ ಮಟ್ಟದಲ್ಲಿಯೇ ಯಶಸ್ಸನ್ನು ಗಳಿಸಿತು. ಇದೀಗ ಇದೇ ಸಿನಿಮಾ ಒಟಿಟಿಗೆ ಬರಲು ರೆಡಿಯಾಗಿದ್ದು, ಯಾವಾಗ ಮತ್ತು ಎಲ್ಲಿ ಎನ್ನುವ ವಿಚಾರವೂ ಹೊರಬಿದ್ದಿದೆ. 

ಕೆಲವು ದಿನಗಳ ಹಿಂದೆ ಈ ಜೈಲರ್‌ ಸಿನಿಮಾ ನೆಟ್‌ಫ್ಲಿಕ್ಸ್‌ ಮತ್ತು ಸನ್‌ ನೆಕ್ಸ್ಟ್ ಗಳಲ್ಲಿ  ಸ್ಟ್ರೀಮಿಂಗ್‌ ಆಗಬಹುದು ಎನ್ನುವ ಸುದ್ದಿಗಳು ಹರಿದಾಡುತ್ತಿದ್ದವು. ಇದೀಗ ಅದೇ ಜೈಲರ್‌ ಸಿನಿಮಾ ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮಿಂಗ್‌ ಆಗಲಿದೆ ಎಂದು ಸ್ವತಃ ಪ್ರೈಂ ಅಧಿಕೃತವಾಗಿ ಘೋಷಿಸಿದೆ. ಹಾಗಾದರೆ ಯಾವಾಗಿನಿಂದ ಸಿನಿಮಾ ಸ್ಟ್ರೀಮಿಂಗ್‌ ಆಗಲಿದೆ? ಅದಕ್ಕೂ ಉತ್ತರ ಇಲ್ಲಿದೆ.

ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಜೈಲರ್‌ ಸಿನಿಮಾ ಸೆಪ್ಟೆಂಬರ್‌ 7ರಂದು ಅಮೆಜಾನ್‌ ಪ್ರೈಂನಲ್ಲಿ ತಮಿಳು, ತೆಲುಗು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮಿಂಗ್‌ ಆರಂಭವಾಗಲಿದೆ ಎಂದು ಪ್ರೈಂ ತಿಳಿಸಿದೆ.  

ಇದನ್ನೂ ಓದಿ-ಯೋಗಿ ಜೀ ಕಾಲಿಗೆ ಬಿದ್ದಿದ್ದಕ್ಕೆ ಟ್ರೋಲ್‌..! ಮುಟ್ಟಿನೋಡಿಕೊಳ್ಳುವಂತೆ ಉತ್ತರಿಸಿದ ತಲೈವಾ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News