Jailer: ಕಾಂತಾರ, ಆದಿಪುರುಷ್ ಚಿತ್ರಗಳ ಲೈಫ್‌ಟೈಮ್ ಕಲೆಕ್ಷನ್ ಉಡೀಸ್‌ ಮಾಡಿದ ಜೈಲರ್..ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?!

Jailer Karnataka Box Office Collection : ಇದೀಗ ಭಾರತೀಯ ಸಿನಿರಂಗದಲ್ಲಿ ಭರ್ಜರಿ ಆರ್ಭಟ ಮಾಡುತ್ತಿರುವ ಸಿನಿಮಾ ಅಂದರೇ ಅದು ಜೈಲರ್‌. ಹೌದು ಭಾಕ್ಸಾಫಿಸ್‌ನಲ್ಲಿ ಕಮಾಲ್‌ ಮಾಡುವುದರ ಜೊತೆಗೆ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾದ ಕ್ರೇಜ್‌ ದಿನೇ ದಿನೇ ಹೆಚ್ಚುತ್ತಿದೆ. ಕಲೆಕ್ಷನ್‌ ವಿಚಾರದಲ್ಲಿಯೂ ಸಹ ಸಿನಿಮಾ ಎಲ್ಲ ದಾಖಲೆಗಳನ್ನು ಉಡೀಸ್‌ ಮಾಡುತ್ತಿದೆ.   

Written by - Savita M B | Last Updated : Aug 16, 2023, 05:42 PM IST
  • ಜೈಲರ್‌ ಸಿನಿಮಾ ಬಿಡುಗಡೆಯಾದಾಗಿಂದಲೂ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ
  • ಈಗಲೂ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿರುವ ಸಿನಿಮಾ ಜೈಲರ್
  • ಕಲೆಕ್ಷನ್‌ ವಿಚಾರದಲ್ಲಿಯೂ ಸಹ ಸಿನಿಮಾ ಎಲ್ಲ ದಾಖಲೆಗಳನ್ನು ಉಡೀಸ್‌ ಮಾಡುತ್ತಿದೆ.
 Jailer: ಕಾಂತಾರ, ಆದಿಪುರುಷ್ ಚಿತ್ರಗಳ ಲೈಫ್‌ಟೈಮ್ ಕಲೆಕ್ಷನ್ ಉಡೀಸ್‌ ಮಾಡಿದ ಜೈಲರ್..ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?!  title=

Jailer Collection : ಹೌದು ದಕ್ಷಿಣ ಭಾತರದಲ್ಲಿ ಸಖತ್‌ ಸೌಂಡ್‌ ಮಾಡುತ್ತಿರುವ ಜೈಲರ್‌ ಸಿನಿಮಾ ಬಿಡುಗಡೆಯಾದಾಗಿಂದಲೂ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಆರನೇ ದಿನಕ್ಕೂ ಅದೇ ಆರ್ಭಟದಿಂದಲೇ ಕಾಲಿಟ್ಟಿರುವ ಸಿನಿಮಾ ಒಟ್ಟಾರೆಯಾಗಿ 400 ಕೋಟಿ ಗಳಿಕೆ ಮಾಡಿ ಎಲ್ಲ ದಾಖಲೆಗಳನ್ನು ಮುರಿದಿದೆ. 

ಸದ್ಯ ಈಗಲೂ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿರುವ ಸಿನಿಮಾ  ವಾರಾಂತ್ಯದ ದಿನಗಳಲ್ಲಿ ಮತ್ತಷ್ಟು ಗಳಿಕೆ ಮಾಡಿತ್ತು. ಅಲ್ಲದೇ ನಿನ್ನೆ  ( ಆಗಸ್ಟ್ 15 ) ಸ್ವಾತಂತ್ರ ದಿನಾಚರಣೆಯ ರಜಾ ದಿನವಾಗಿದ್ದರಿಂದ ಈ ಸಿನಿಮಾ ಗಳಿಕೆ ಡಬಲ್‌ ಆಗಿತ್ತು. 

ಇದನ್ನೂ ಓದಿ- Jailer collection : ಜೈಲರ್‌ ಹೊಸ ದಾಖಲೆ, ಗಲ್ಲಾಪೆಟ್ಟಿಗೆಯಲ್ಲಿ ತಲೈವಾ ಕಮಾಲ್‌! ಒಟ್ಟು ಕಲೆಕ್ಷನ್‌ ಎಷ್ಟು ಕೋಟಿ?

ಇನ್ನು  ಜೈಲರ್ ಮಾಡಿರುವ ಒಟ್ಟು ಗಳಿಕೆಯಲ್ಲಿ ಸಿಂಹಪಾಲು ತಮಿಳುನಾಡಿನ ಬಾಕ್ಸ್ ಆಫೀಸ್‌ನದ್ದು, ಎರಡನೇ ಸ್ಥಾನ ಪಡೆದಿರುವುದು ಕರ್ನಾಟಕ. ಹೌದು ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಜೈಲರ್‌ ಸಿನಿಮಾ ಭರ್ಜರಿ ಓಪನಿಂಗ್‌ ಪಡೆದುಕೊಂಡು ಮೊದಲ 5 ದಿನಗಳಲ್ಲಿ 36.05 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. 

ಹೀಗೆ ಭರ್ಜರಿಯಾಗಿ ಮುನ್ನುಗ್ಗುತ್ತಿರುವ ಸಿನಿಮಾ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ಕಾಂತಾರ ಚಿತ್ರ ಮತ್ತು ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಓಂ ರಾವತ್ ಕಾಂಬಿನೇಶನ್ ನ ಆದಿಪುರುಷ್ ಚಿತ್ರದ ಒಟ್ಟಾರೆ ಗಳಿಕೆಯನ್ನು ಜೈಲರ್ ಸಿನಿಮಾ ಕೇವಲ ಆರೇ ದಿನಗಳಲ್ಲಿ ಹೊಡೆದುರುಳಿಸಿದೆ. 

ಇದನ್ನೂ ಓದಿ- ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿದ ಭೋಲಾ ಶಂಕರ್ ಹಿಂದಿಯಲ್ಲಿ ಬಿಡುಗಡೆ: ಎಲ್ಲಿ? ಯಾವಾಗ? ಇಲ್ಲಿದೆ ಡಿಟೇಲ್ಸ್‌!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News