Janhvi Kapoor: ನಟನೆ ಬಿಟ್ಟು ಕ್ರಿಕೆಟರ್ ಆದ ಬಾಲಿವುಡ್ ನಟಿ ಜಾಹ್ನವಿ ಕಪೂರ್..!

ಇತ್ತೀಚಿನ ಫೋಟೋದಲ್ಲಿ ಜಾಹ್ನವಿ ಮೈದಾನದಲ್ಲಿ ಬೆವರು ಹರಿಸಿ ಕ್ರಿಕೆಟ್ ಅಭ್ಯಾಸ ಮಾಡಿದ್ದಾರೆ. ಇದ್ದಕ್ಕಿದ್ದಂತೆಯೇ ಹೆಲ್ಮೆಟ್ ಧರಿಸಿ ಜಾಹ್ನವಿ ಬ್ಯಾಟ್ ಹಿಡಿಯಲು ಕಾರಣವೇನು ಅಂತಾ ಅಭಿಮಾನಿಗಳು ತಮ್ಮಲ್ಲಿಯೇ ಪ್ರಶ್ನಿಸಿಕೊಂಡಿದ್ದಾರೆ.

Written by - Puttaraj K Alur | Last Updated : Jan 26, 2022, 04:47 PM IST
  • ನಟನೆಯನ್ನು ಬಿಟ್ಟು ಕ್ರಿಕೆಟರ್ ಆದ್ರಾ ಬಾಲಿವುಡ್ ನಟಿ ಜಾಹ್ನವಿ ಕಪೂರ್
  • ಬ್ಯಾಟ್ ಹಿಡಿದು ಮೈದಾನದಲ್ಲಿ ಬೆವರು ಹರಿಸಿದ ನಟಿ ಶ್ರೀದೇವಿ ಮಗಳು
  • ‘ಮಿಸ್ಟರ್ ಅಂಡ್ ಮಿಸೆಸ್ ಮಹಿ’ ಚಿತ್ರದ ಜಾಹ್ನವಿ ಫಸ್ಟ್ ಲುಕ್ ರಿಲೀಸ್
Janhvi Kapoor: ನಟನೆ ಬಿಟ್ಟು ಕ್ರಿಕೆಟರ್ ಆದ ಬಾಲಿವುಡ್ ನಟಿ ಜಾಹ್ನವಿ ಕಪೂರ್..! title=
‘ಮಿಸ್ಟರ್ ಅಂಡ್ ಮಿಸೆಸ್ ಮಹಿ’ ಚಿತ್ರದ ಜಾಹ್ನವಿ ಫಸ್ಟ್ ಲುಕ್ ರಿಲೀಸ್

ನವದೆಹಲಿ: ಖ್ಯಾತ ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್(Janhvi Kapoor) ಅವರ ಪ್ರತಿಯೊಂದು ಪೋಸ್ಟ್ ಮೇಲೆ ಅಭಿಮಾನಿಗಳ ಕಣ್ಣು ನೆಟ್ಟಿದೆ. ಅವರ ಪ್ರತಿಯೊಂದು ಪೋಸ್ಟ್‌ ಗಾಗಿ ಫ್ಯಾನ್ಸ್ ಕುತೂಹಲದಿಂದ ಕಾಯುತ್ತಿರುತ್ತಾರೆ. ಇತ್ತೀಚೆಗೆ ನಟಿ ಸಾಮಾಜಿಕ ಮಾಧ್ಯಮ(Social Media)ದಲ್ಲಿ ಹಂಚಿಕೊಂಡಿರುವ ಪೋಸ್ಟ್ ನೋಡಿ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಯಾಕೆ ಅಂತೀರಾ..? ಜಾಹ್ನವಿ ನಟನೆಯನ್ನು ಬಿಟ್ಟು ಕ್ರಿಕೆಟರ್ ಆದ್ರಾ ಅಂತಾ ಅನ್ನೋ ಪ್ರಶ್ನೆ ಮೂಡಿದೆ.

ಇತ್ತೀಚಿನ ಫೋಟೋದಲ್ಲಿ ಜಾಹ್ನವಿ(Janhvi Kapoor) ಮೈದಾನದಲ್ಲಿ ಬೆವರು ಹರಿಸಿ ಕ್ರಿಕೆಟ್ ಅಭ್ಯಾಸ ಮಾಡಿದ್ದಾರೆ. ಇದ್ದಕ್ಕಿದ್ದಂತೆಯೇ ಹೆಲ್ಮೆಟ್ ಧರಿಸಿ ಜಾಹ್ನವಿ ಬ್ಯಾಟ್ ಹಿಡಿಯಲು ಕಾರಣವೇನು ಅಂತಾ ಅಭಿಮಾನಿಗಳು ತಮ್ಮಲ್ಲಿಯೇ ಪ್ರಶ್ನಿಸಿಕೊಂಡಿದ್ದಾರೆ.

ಅಷ್ಟಕ್ಕೂ ವಿಷಯವೇನು?

ಈ ಚಿತ್ರಗಳನ್ನು ಜಾಹ್ನವಿ ಕಪೂರ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರವನ್ನು ಹಂಚಿಕೊಂಡ ನಟಿ, ‘ಕ್ರಿಕೆಟ್ ಶಿಬಿರ.. ಮಿಸ್ಟರ್ ಅಂಡ್ ಮಿಸೆಸ್ ಮಹಿ’ ಎಂಬ ಕ್ಯಾಪ್ಶನ್ ಬರೆದಿದ್ದಾರೆ. ವಾಸ್ತವವಾಗಿ ಜಾಹ್ನವಿ ತಮ್ಮ ಮುಂಬರುವ ಚಿತ್ರಕ್ಕಾಗಿ ಈ ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿದ್ದಾರೆ. ಈ ಚಿತ್ರದ ಹೆಸರೇ ‘ಮಿಸ್ಟರ್ ಅಂಡ್ ಮಿಸಸ್ ಮಹಿ’(Mr And Mrs Mahi). ಈ ಚಿತ್ರದಲ್ಲಿ ಜಾಹ್ನವಿ ಕ್ರಿಕೆಟ್(Cricket) ಆಟಗಾರ್ತಿಯಾಗಿ ಮಿಂಚಲು ರೆಡಿಯಾಗಿದ್ದಾರೆ.

ಇದನ್ನೂ ಓದಿ: Powerstar Puneeth Rajkumar:ಅಪ್ಪು ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್‌' ಚಿತ್ರದ ಪೋಸ್ಟರ್‌ ರಿಲೀಸ್‌

‘ಮಿಸ್ಟರ್ ಅಂಡ್ ಮಿಸಸ್ ಮಹಿ’ ಚಿತ್ರದ ಜಾಹ್ನವಿ ಫಸ್ಟ್ ಲುಕ್ ಬಿಡುಗಡೆ

ಬಾಲಿವುಡ್ ಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಕಳೆದ ವರ್ಷ ‘ಮಿಸ್ಟರ್ ಅಂಡ್ ಮಿಸಸ್ ಮಹಿ’ ಚಿತ್ರವನ್ನು ಘೋಷಿಸಿತ್ತು. ಘೋಷಣೆಯಾದಾಗಿನಿಂದ ಅಭಿಮಾನಿಗಳು ಜಾಹ್ನವಿ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಅಭಿನಯದ ಈ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಜನವರಿ 26ರ ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಚಿತ್ರದ ಶೂಟಿಂಗ್ ಸಮಯದಲ್ಲಿನ ಹಲವು ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಜಾಹ್ನವಿ ಕಪೂರ್ ಅವರ ಫಸ್ಟ್ ಲುಕ್(Jhanvi Kapoor First Look) ಸಖತ್ತಾಗಿದೆ.

ರಾಜ್‌ಕುಮಾರ್ ರಾವ್ ಮತ್ತು ಜಾಹ್ನವಿ ಕಪೂರ್ ಜೋಡಿ ಮೋಡಿ

ರಾಜ್‌ಕುಮಾರ್ ರಾವ್(Rajkumar Rao) ಮತ್ತು ಜಾಹ್ನವಿ ಕಪೂರ್ ಜೋಡಿ ‘ರೂಹಿ’ ಚಿತ್ರದಲ್ಲಿ ಕಾಣಿಸಿಕೊಂಡು ಮೋಡಿ ಮಾಡಿತ್ತು. 20 ಕೋಟಿ ವೆಚ್ಚದಲ್ಲಿ ಹಾರ್ದಿಕ್ ಮೇಹ್ತಾ ನಿರ್ದೇಶನದಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಅಷ್ಟೇನೂ ಸದ್ದು ಮಾಡಲಿಲ್ಲ. ಆದರೆ ಈ ಜೋಡಿ ತೆರೆಮೇಲೆ ಮೋಡಿ ಮಾಡುವಲ್ಲಿ ಯಶಸ್ವಿಯಾಗಿದೆ. ಇದೀಗ ಇದೇ ಜೋಡಿ ಮತ್ತೊಮ್ಮೆ ತೆರೆಯಲ್ಲಿ ಮಿಂಚಲು ಸಜ್ಜಾಗಿದೆ.   

ಇದನ್ನೂ ಓದಿ: David Warner: ‘ಪುಷ್ಪ’ ಸಿನಿಮಾದಲ್ಲಿ ಕಾಣಿಸಿಕೊಂಡ ಆಸ್ಟ್ರೇಲಿಯ ಕ್ರಿಕೆಟಿಗ ಡೇವಿಡ್ ವಾರ್ನರ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News