ಜೂ. ಎನ್‌ಟಿಆರ್ - ಕೇಂದ್ರ ಸಚಿವ ಅಮಿತ್ ಶಾ ಭೇಟಿ! ಈ ಮೀಟ್ & ಗ್ರೀಟ್ ಹಿಂದಿನ ಉದ್ದೇಶವೇನು?

Junior NTR - Amit Shah meet : ಜೂನಿಯರ್ ಎನ್‌ಟಿಆರ್ ಇತ್ತೀಚೆಗೆ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಅಮಿತ್‌ ಶಾ ಅವರು ಜೂ. ಎನ್‌ಟಿಆರ್‌ ಅವರನ್ನು ಭೇಟಿಯಾದ ವೇಳೆ ತೆಗೆದ ಚಿತ್ರಗಳನ್ನು ಅಮಿತ್ ಶಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

Written by - Chetana Devarmani | Last Updated : Aug 23, 2022, 10:51 AM IST
  • ಜೂ. ಎನ್‌ಟಿಆರ್ - ಕೇಂದ್ರ ಸಚಿವ ಅಮಿತ್ ಶಾ ಭೇಟಿ
  • ಈ ಮೀಟ್ & ಗ್ರೀಟ್ ಹಿಂದಿನ ಉದ್ದೇಶವೇನು?
  • ಜೂನಿಯರ್ ಎನ್‌ಟಿಆರ್ ನಟನೆಯನ್ನು ಶ್ಲಾಘಿಸಿದ ಅಮಿತ್‌ ಶಾ
ಜೂ. ಎನ್‌ಟಿಆರ್ - ಕೇಂದ್ರ ಸಚಿವ ಅಮಿತ್ ಶಾ ಭೇಟಿ! ಈ ಮೀಟ್ & ಗ್ರೀಟ್ ಹಿಂದಿನ ಉದ್ದೇಶವೇನು? title=
ಜೂ. ಎನ್‌ಟಿಆರ್ - ಅಮಿತ್ ಶಾ

Jr NTR - Amit Shah meet : ಆರ್‌ಆರ್‌ಆರ್‌ನ ಅದ್ಭುತ ಯಶಸ್ಸಿನೊಂದಿಗೆ ದಕ್ಷಿಣ ಭಾರತದ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ದೇಶದಾದ್ಯಂತ ಮನೆಮಾತಾಗಿದ್ದಾರೆ. ಅವರ ಜನಪ್ರಿಯತೆಯು ಹಲವಾರು ಪಟ್ಟು ಹೆಚ್ಚಾಯಿತು ಮತ್ತು ಈಗ ಇಬ್ಬರು ತಾರೆಯರ ಪ್ರತಿಯೊಂದು ನಡೆ ಮಾಧ್ಯಮ ಮತ್ತು ಅಭಿಮಾನಿಗಳ ಗಮನಸೆಳೆಯುತ್ತಿದೆ. ಜೂನಿಯರ್ ಎನ್‌ಟಿಆರ್ ಅವರ ಇತ್ತೀಚಿನ ನಡೆ ಫ್ಯಾನ್ಸ್‌ ಕುತೂಹಲಕ್ಕೆ ಕಾರಣವಾಗಿದೆ. ಜೂನಿಯರ್ ಎನ್‌ಟಿಆರ್ ಇತ್ತೀಚೆಗೆ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಮುನುಗೋಡು ನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ಅಮಿತ್‌ ಶಾ ತೆಲಂಗಾಣಕ್ಕೆ ಆಗಮಿಸಿದ್ದರು. ಈ ವೇಳೆ ಜೂ.ಎನ್‌ಟಿಆರ್‌ ಮತ್ತು ಅಮಿತ್‌ ಶಾ ಭೇಟಿಯಾಗಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ : ಬೆಂಗಳೂರಲ್ಲಿ ಮತ್ತೊಂದು ದಾರುಣ ಘಟನೆ: ಮಗು ಕೊಂದು ತಾಯಿ‌ ಆತ್ಮಹತ್ಯೆಗೆ ಯತ್ನ

ಅಮಿತ್‌ ಶಾ ಅವರು ಜೂ. ಎನ್‌ಟಿಆರ್‌ ಅವರನ್ನು ಭೇಟಿಯಾದ ವೇಳೆ ತೆಗೆದ ಚಿತ್ರಗಳನ್ನು ಅಮಿತ್ ಶಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೂನಿಯರ್ ಎನ್‌ಟಿಆರ್ ನೀಲಿ ಬಣ್ಣದ ಶರ್ಟ್ ಮತ್ತು ಪ್ಯಾಂಟ್ ಧರಿಸಿರುವುದನ್ನು ಕಾಣಬಹುದು. ಜೂನಿಯರ್ ಎನ್‌ಟಿಆರ್ ಅವರ ನಟನೆಯನ್ನು ಅಮಿತ್‌ ಶಾ ಶ್ಲಾಘಿಸಿದ್ದಾರೆ. "ಹೈದರಾಬಾದ್‌ನಲ್ಲಿ ಅತ್ಯಂತ ಪ್ರತಿಭಾವಂತ ನಟ ಮತ್ತು ನಮ್ಮ ತೆಲುಗು ಚಿತ್ರರಂಗದ ರತ್ನ ಜೂನಿಯರ್ ಎನ್‌ಟಿಆರ್ ಅವರೊಂದಿಗೆ ಉತ್ತಮ ಚರ್ಚೆ ನಡೆಯಿತು" ಎಂದು ಈ ಫೋಟೋಗೆ ಅಮಿತ್‌ ಶಾ ಶೀರ್ಷಿಕೆ ನೀಡಿದ್ದಾರೆ. ಇದೀಗ ಈ ಮೀಟ್ ಆ್ಯಂಡ್ ಗ್ರೀಟ್ ಹಿಂದಿನ ಉದ್ದೇಶವೇನು ಎಂದು ನೆಟ್ಟಿಗರು ಆಶ್ಚರ್ಯ ಪಡುತ್ತಿದ್ದಾರೆ. 

ಜೂನಿಯರ್ ಎನ್ ಟಿಆರ್ ರಾಜಕೀಯ ಪ್ರವೇಶದ ಬಗ್ಗೆ ಸಹ ಊಹಾಪೋಹಗಳು ಶುರುವಾಗಿವೆ. ಆದರೆ ಆರ್‌ಆರ್‌ಆರ್‌ನಲ್ಲಿನ ನಟನೆಗಾಗಿ ಜೂನಿಯರ್‌ ಎನ್‌ಟಿಆರ್‌ ಅವರನ್ನು ಅಭಿನಂದಿಸಲು ಅಮಿತ್ ಶಾ ಬಯಸಿದ್ದರು ಎಂದು ವರದಿಗಳು ಸೂಚಿಸುತ್ತವೆ. ವರದಿಯ ಪ್ರಕಾರ, ಅವರ ಸಭೆಯು 20 ನಿಮಿಷಗಳ ಕಾಲ ನಡೆಯಿತು. ಜೂನಿಯರ್ ಎನ್‌ಟಿಆರ್ ಕೂಡ ಅಮಿತ್ ಶಾ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ ಮತ್ತು ಅವರ ಒಳ್ಳೆಯ ಮಾತುಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. 

ಜೂನಿಯರ್ NTR ಅವರ ಮುಂಬರುವ ಯೋಜನೆಗಳ ಕುರಿತು ಮಾತನಾಡುತ್ತಾ, ಅವರು NTR 30 ಮತ್ತು NTR 31 ಸಿನಿಮಾವನ್ನ ಘೋಷಿಸಿದ್ದಾರೆ. NTR 30 ಅನ್ನು ಕೊರಟಾಲ ಶಿವ ನಿರ್ದೇಶಿಸಿದರೆ, NTR 31 ಅನ್ನು ಕನ್ನಡದ ನಿರ್ದೇಶಕ ಕೆಜಿಎಫ್‌ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶಿಸಲಿದ್ದಾರೆ. ಎರಡೂ ಚಿತ್ರಗಳ ಬಗ್ಗೆ ಇನ್ನೂ ಯಾವುದೇ ರೀತಿಯ ವಿವರಗಳನ್ನು ಹಂಚಿಕೊಂಡಿಲ್ಲ. 

ಇದನ್ನೂ ಓದಿ : ಅಮೆರಿಕದ ಈ ನಗರದಲ್ಲಿ ಮೊದಲ ಬಾರಿಗೆ ರಾರಾಜಿಸಿದ ಭಾರತದ ತ್ರಿವರ್ಣ ಧ್ವಜ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News