3 ದಶಕಗಳ ಬಳಿಕ ಒಂದಾಗ್ತಿದೆ ಕಮಲ್-ಮಣಿರತ್ನಂ ಜೋಡಿ: 'ಥಗ್ ಲೈಫ್' ಬಳಗಕ್ಕೆ ಸಿಲಂಬರಸನ್ ಗ್ರ್ಯಾಂಡ್ ಎಂಟ್ರಿ

Sandalwood Updates: ಈ ಬಾರಿ 'ಥಗ್ ಲೈಫ್' ಮೂಲಕ ಕಮಲ್-ಮಣಿ ಹೊಸ ಇತಿಹಾಸ ಬರೆಯಲು ಹೊರಟಿದ್ದಾರೆ. ಟೈಟಲ್ ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ಈ ಚಿತ್ರಕ್ಕೀಗ ತಮಿಳಿನ ಖ್ಯಾತ ನಟ ಸಿಲಂಬರಸನ್ ಎಂಟ್ರಿ ಕೊಟ್ಟಿದ್ದಾರೆ.

Written by - YASHODHA POOJARI | Last Updated : May 10, 2024, 04:03 PM IST
    • ನಟ ಕಮಲ್ ಹಾಸನ್ ಮತ್ತು ನಿರ್ದೇಶಕ ಮಣಿರತ್ನಂ ಜೋಡಿ ಮತ್ತೆ ಒಂದಾಗ್ತಿದೆ
    • 'ಥಗ್ ಲೈಫ್' ಮೂಲಕ ಕಮಲ್-ಮಣಿ ಹೊಸ ಇತಿಹಾಸ ಬರೆಯಲು ಹೊರಟಿದ್ದಾರೆ
    • ಈ ಚಿತ್ರಕ್ಕೀಗ ತಮಿಳಿನ ಖ್ಯಾತ ನಟ ಸಿಲಂಬರಸನ್ ಎಂಟ್ರಿ ಕೊಟ್ಟಿದ್ದಾರೆ
3 ದಶಕಗಳ ಬಳಿಕ ಒಂದಾಗ್ತಿದೆ ಕಮಲ್-ಮಣಿರತ್ನಂ ಜೋಡಿ: 'ಥಗ್ ಲೈಫ್' ಬಳಗಕ್ಕೆ ಸಿಲಂಬರಸನ್ ಗ್ರ್ಯಾಂಡ್ ಎಂಟ್ರಿ title=
Thug Life Movie

Sandalwood Updates: ಮೂರು ದಶಕಗಳ ನಂತರ ಲೆಜೆಂಡರಿ ನಟ ಕಮಲ್ ಹಾಸನ್ ಮತ್ತು ನಿರ್ದೇಶಕ ಮಣಿರತ್ನಂ ಜೋಡಿ ಮತ್ತೆ ಒಂದಾಗಿರುವುದು ಗೊತ್ತೇ ಇದೆ. 36 ವರ್ಷಗಳ ಹಿಂದೆ ಗ್ಯಾಂಗ್‌ ಸ್ಟರ್ ಸಿನಿಮಾ 'ನಾಯಕನ್' ಬಿಡುಗಡೆಯಾಗಿ ಕಮಾಲ್ ಮಾಡಿತ್ತು. ಅದೇ ವೈಭವ ಮತ್ತೆ ಸೃಷ್ಟಿಸಲು ಈ ಸೂಪರ್ ಹಿಟ್ ಜೋಡಿ ಕೈ ಜೋಡಿಸಿದೆ.

ಇದನ್ನೂ ಓದಿ: ಬಿಸಿ ಹಾಲಿಗೆ ತುಪ್ಪ ಬೆರೆಸಿ ಕುಡಿಯಿರಿ: ಪವಾಡವನ್ನೇ ಸೃಷ್ಟಿಸುತ್ತೆ ಈ ಮ್ಯಾಜಿಕ್ ಡ್ರಿಂಕ್

ಈ ಬಾರಿ 'ಥಗ್ ಲೈಫ್' ಮೂಲಕ ಕಮಲ್-ಮಣಿ ಹೊಸ ಇತಿಹಾಸ ಬರೆಯಲು ಹೊರಟಿದ್ದಾರೆ. ಟೈಟಲ್ ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ಈ ಚಿತ್ರಕ್ಕೀಗ ತಮಿಳಿನ ಖ್ಯಾತ ನಟ ಸಿಲಂಬರಸನ್ ಎಂಟ್ರಿ ಕೊಟ್ಟಿದ್ದಾರೆ.

ಥಗ್ ಲೈಫ್ ತಂಡಕ್ಕೀಗ ಸಿಲಂಬರಸನ್ ಸೇರ್ಪಡೆಯಾಗಿದ್ದಾರೆ. ಮರುಭೂಮಿಯಲ್ಲಿ ಕಾರ್ ಚೇಸಿಂಗ್ ಮಾಡುತ್ತಾ ಬುಲೆಟ್ ಫೈರ್ ಮಾಡುವ ಸಿಲಂಬರಸನ್ ಝಲಕ್ ಬಿಡುಗಡೆ ಮಾಡಿ ಚಿತ್ರತಂಡ ಅವರನ್ನು ಸ್ವಾಗತಿಸಿದೆ. ಇನ್ನು, ನಟಿ ತ್ರಿಶಾ ಮತ್ತು ಜಯರಾಮ್‌ ರವಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:  ಯಾವ ಔಷಧಿಯೂ ಬೇಕಿಲ್ಲ! ಈ ಕಪ್ಪು ಬಣ್ಣದ ಹಣ್ಣು ತಿಂದರೆ ಸಾಕು ಕ್ಷಣದಲ್ಲಿ ಸಂಪೂರ್ಣ ನಾರ್ಮಲ್ ಆಗುತ್ತೆ ಬ್ಲಡ್ ಶುಗರ್!

ಈ ಚಿತ್ರವನ್ನು ಕಮಲ್‌ ಹಾಸನ್‌, ಮಣಿರತ್ನಂ, ಆರ್‌ ಮಹೇಂದ್ರನ್‌ ಮತ್ತು ಶಿವ ಅನಂತ್‌ ಅವರು ಜತೆಯಾಗಿ ರಾಜ್‌ ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಹೆಸರಿನಲ್ಲಿ ನಿರ್ಮಿಸುತ್ತಿದ್ದಾರೆ. ಎಆರ್‌ ರೆಹಮಾನ್‌ ಸಂಗೀತ,  ಶ್ರೀಕರ್‌ ಪ್ರಸಾದ್‌ ಅವರು ಸಂಕಲನದ ಹೊಣೆ ಹೊತ್ತಿದ್ದಾರೆ. ರವಿ ಕೆ. ಚಂದ್ರನ್‌ ಅವರ ಕೊರಿಯೊಗ್ರಫಿ  ಥಗ್ ಲೈಫ್ ಸಿನಿಮಾಕ್ಕಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News