Kannappa: ಪ್ರಭಾಸ್‌ ಚಿತ್ರದಲ್ಲಿ ಬಾಲಿವುಡ್‌ ನಟಿ: ʻಕಣ್ಣಪ್ಪʼದಲ್ಲಿ ಕಂಗನಾ!

Kannappa Update: ಟಾಲಿವುಡ್‌ ಸ್ಟಾರ್‌ ನಟ ಫ್ರಭಾಸ್‌ ನಟನೆಯ ಮುಂಬರುವ ʻಕಣ್ಣಪ್ಪʼ ಸಿನಿಮಾದಲ್ಲಿ ಬಾಲಿವುಡ್‌ ನಟಿ ಕಂಗನಾ ರನೌತ್‌ ಬಣ್ಣ ಹಚ್ಚುತ್ತಿದ್ದಾರೆ.  ಹಾಗಾದ್ರೇ ಈ ನಟಿ ಯಾವ ಚಿತ್ರದಲ್ಲಿ ಯಾವ ಪಾತ್ರ  ಮಾಡಲಿದ್ದಾರೆ.? ಇಲ್ಲದೆ ಕಂಪ್ಲೀಟ್‌ ಅಪ್ಡೇಟ್ಸ್‌.  

Written by - Zee Kannada News Desk | Last Updated : Feb 24, 2024, 09:59 AM IST
  • ನಟ ಪ್ರಭಾಸ್‌ ಅಭಿನಯದ ಆದಿಪುರುಷ್‌ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್‌ ಮಾಡದೇ ಇದ್ದರೂ ಇದೀಗ ಮತ್ತೊಂದು ಪೌರಾಣಿಕ ಚಿತ್ರಕ್ಕಾಗಿ ಸಿದ್ದತೆ ನಡೀತಿದೆ.
  • ಕಣ್ಣಪ್ಪ ಶಿವನ ನಿಷ್ಠಾವಂತ ಭಕ್ತನಾದರೂ ಆದರೆ ಈ ಕಥೆಯಲ್ಲಿ ಶಿವ ಮತ್ತು ಪಾರ್ವತಿಯ ಪಾತ್ರ ಅಷ್ಟೇ ಮುಖ್ಯವಾಗಿದೆ.
  • ಒಂದು ವೇಳೆ ಕಂಗನಾ ಕಣ್ಣಪ್ಪ ಸಿನಿಮಾದಲ್ಲಿ ನಟಿಸುವುದು ಖಚಿತವಾದರೇ, 16 ವರ್ಷಗಳ ಬಳಿಕ ಮತ್ತೆ ಈ ಜೋಡಿ ತೆರೆಹಂಚಿಕೊಳ್ಳಲಿದ್ದಾರೆ.
Kannappa: ಪ್ರಭಾಸ್‌ ಚಿತ್ರದಲ್ಲಿ ಬಾಲಿವುಡ್‌ ನಟಿ: ʻಕಣ್ಣಪ್ಪʼದಲ್ಲಿ ಕಂಗನಾ! title=

Kangana Ranaut In Kannappa: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ 'ಬಾಹುಬಲಿ' ಚಿತ್ರದ ಬಳಿಕ ಸಾಲು ಸಾಲು ಸೋಲು ಕಂಡು, ಸದ್ಯ 'ಸಲಾರ್' ಸಿನಿಮಾದ ಮೂಲಕ ಮತ್ತೆ ಯಶಸ್ಸನ್ನು ಪಡೆದಿದ್ದಾರೆ. ನಟ ಪ್ರಭಾಸ್‌ ಅಭಿನಯದ ಆದಿಪುರುಷ್‌ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್‌ ಮಾಡದೇ ಇದ್ದರೂ  ಇದೀಗ ಮತ್ತೊಂದು ಪೌರಾಣಿಕ ಚಿತ್ರಕ್ಕಾಗಿ ಸಿದ್ದತೆ ನಡೀತಿದೆ. ಅದೇ ಕಣ್ಣಪ್ಪ ಸಿನಿಮಾ. ಈ ಚಿತ್ರವನ್ನು ತೆಲುಗಿನ ಪ್ರಮುಖ ನಿರ್ಮಾಪಕ ವಿಷ್ಣು ಮಂಚು ದೊಡ್ಡ ಬಜೆಟ್‌ನಲ್ಲಿ ನಿರ್ಮಾಣ ಮಾಡಲಿದ್ದಾರೆ.

ಕಣ್ಣಪ್ಪ ಶಿವನ ನಿಷ್ಠಾವಂತ ಭಕ್ತನಾದರೂ  ಆದರೆ ಈ ಕಥೆಯಲ್ಲಿ ಶಿವ ಮತ್ತು ಪಾರ್ವತಿಯ ಪಾತ್ರ ಅಷ್ಟೇ ಮುಖ್ಯವಾಗಿದೆ. ಚಿತ್ರಕಥೆಯ ತಿರುವಿಗೆ ಶಿವ- ಪಾರ್ವತಿಯರ ಪಾತ್ರ ಬಹಳ ಮಹತ್ವ ಪಡೆದುಕೊಳ್ಳುತ್ತಿವುದರಿಂದ ಪ್ರಭಾಸ್ ಈ ಪಾತ್ರವನ್ನು ಒಪ್ಪಿಕೊಂಡಿದ್ದಾರೆ.  ಈ ಸಿನಿಮಾದಲ್ಲಿ ನೂಪುರ್ ಸನನ್ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ ಎಂಬ ವಿಷಯ ಈ ಹಿಂದೆಯೇ ತಿಳಿದು ಬಂದಿದೆ. ಆದರೆ ಈ ಚಿತ್ರದಲ್ಲಿ ಶಿವನಿಗೆ ಪಾರ್ವತಿಯಾಗಿ ಬಾಲಿವುಡ್‌ ಬೆಡಗಿ ಕಂಗನಾ ನಟಿಸಲಿದ್ದಾರೆ ಎಂಬ ಮಾತು ಓಡಾಡುತ್ತಿದೆ.

ಇದನ್ನೂ ಓದಿ: ಕೋಟಿಗಟ್ಟಲೇ ಸಂಭಾವನೆ ಪಡೆದ ಭಾರತದ ಮೊದಲ ನಟಿ ಇವರೇ.. ಬಾಲಿವುಡ್‌ನ ಲೇಡಿ ಸೂಪರ್‌ ಸ್ಟಾರ್!!‌

ಹೌದು.. ಬಾಲಿವುಡ್‌ ನಟಿ ಕಂಗನಾ ರನೌತ್‌ ಪ್ರಭಾಸ್ ಜೊತೆ ಪಾರ್ವತಿ ಪಾತ್ರಕ್ಕೆ  ಫಿಕ್ಸ್ ಆಗಿದೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿದೆ. ಸದ್ಯ ಈ ಸುದ್ದಿ ವೈರಲ್‌ ಆಗಿದ್ದೇ ತಡ ನಟಿ ಕಂಗನಾಗೆ ಪೌರಾಣಿಕ ಪಾತ್ರ ನಿಜಕ್ಕೂ ಚೆನ್ನಾಗೇ ಸೂಟ್ ಆಗುತ್ತೆ ಎಂದು ನೆಟ್ಟಿಗರು ಹಾಗೂ ಅಭಿಮಾನಿಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುಮಾಡಿದ್ದಾರೆ.  ಈ ಹಿಂದೆ  ಪ್ರಭಾಸ್‌ ಹಾಗೂ ಕಂಗನಾ 'ಏಕ್ ನಿರಂಜನ್' ಅನ್ನುವ ತೆಲುಗು ಸಿನಿಮಾದಲ್ಲಿ ನಟಿಸಿದ್ದರು.  ಪುರಿ ಜಗನ್ನಾಥ್ ನಿರ್ದೇಶನ ಚಿತ್ರ 2009ರಲ್ಲಿ ತೆರೆಕಂಡಿತ್ತು. 

ಒಂದು ವೇಳೆ ಕಂಗನಾ ಕಣ್ಣಪ್ಪ ಸಿನಿಮಾದಲ್ಲಿ ನಟಿಸುವುದು ಖಚಿತವಾದರೇ, 16 ವರ್ಷಗಳ ಬಳಿಕ ಮತ್ತೆ ಈ ಜೋಡಿ ತೆರೆಹಂಚಿಕೊಳ್ಳಲಿದ್ದಾರೆ. ಆದರೇ ಚಿತ್ರತಂಡ ಇನ್ನೂ ಯಾವ ಮಾಹಿತಿ ರಿವೀಲ್‌ ಮಾಡಿಲ್ಲ. ಇನ್ನೂ 'ಕಣ್ಣಪ್ಪ' ಸಿನಿಮಾವನ್ನು ಮುಕೇಶ್ ಕುಮಾರ್ ಸಿಂಗ್ ನಿರ್ದೇಶಿಸುತ್ತಿದ್ದಾರೆ. ಕಳೆದ ವರ್ಷ ನಟಿ ಕಂಗನಾ ಅಭಿನಯದ ʻಚಂದ್ರಮುಖಿ-2ʼ ಮತ್ತು ʻತೇಜಸ್‌ʼ ಸಿನಿಮಾದ ಅಷ್ಟಾಗಿ ಯಶಸ್ಸು ಗಳಿಸಲಿಲ್ಲ.  ಆದರೇ ಕಂಗನಾ ಅಭಿನಯದ ರಾಜಕೀಯ ಹಿನ್ನೆಲೆಯ 'ಎಮರ್ಜೆನ್ಸಿ' ಚಿತ್ರ ಇದೇ ಜುಲೈನಲ್ಲಿ ತೆರೆಕಾಣಲು ಸಜ್ಜಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News