Kangana Ranaut:'ಭಿಕ್ಷೆಯ ಸ್ವಾತಂತ್ರ್ಯ' ಹೇಳಿಕೆಯ ಬಳಿಕ ಮತ್ತೊಮ್ಮೆ ಮಹಾತ್ಮಾ ಗಾಂಧಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಕಂಗನ ರಣಾವತ್

Kangana Ranaut New Statement - ಮಹಾತ್ಮಾ ಗಾಂಧಿ ವಿರುದ್ಧ ಕಂಗನಾ ರಣಾವತ್ (Kangana Ranaut) ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಕುರಿತು ಕಂಗನಾ ತನ್ನ Instagram ಸ್ಟೋರಿಗಳಲ್ಲಿ ದೀರ್ಘ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ. ತನ್ನ ಪೋಸ್ಟ್ ಗಳಲ್ಲಿ  ಕಂಗನಾ ಮಹಾತ್ಮ ಗಾಂಧಿಯನ್ನು (Mahatma Gandhi) ಗುರಿಯಾಗಿಸಿದ್ದಾರೆ. 

Written by - Nitin Tabib | Last Updated : Nov 16, 2021, 07:10 PM IST
  • 'ಗಾಂಧೀಜಿ ಅಧಿಕಾರ ದಾಹಿ ಹಾಗೂ ಚಾಲಾಕ್ ಆಗಿದ್ದರು'
  • ಭಗತ್ ಸಿಂಗ್ ಅವರನ್ನು ಗಲ್ಲಿಗೆರಿಸುವುದನ್ನು ಅವರು ಬಯಸಿದ್ದರು.
  • ಅವರು ನಮಗೆ ಒಂದು ಕಪಾಳಕ್ಕೆ ಹೊಡೆದರೆ ಇನ್ನೊಂದು ಕಪಾಳ ಮುಂದೆ ಮಾಡಿದರೆ ಸ್ವಾತಂತ್ರ್ಯ ಸಿಗುತ್ತದೆ ಎಂದು ಕಲಿಸಿದರು.
Kangana Ranaut:'ಭಿಕ್ಷೆಯ ಸ್ವಾತಂತ್ರ್ಯ' ಹೇಳಿಕೆಯ ಬಳಿಕ ಮತ್ತೊಮ್ಮೆ ಮಹಾತ್ಮಾ ಗಾಂಧಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಕಂಗನ ರಣಾವತ್  title=
Kangana Ranaut New Statement (File Photo)

Kangana Ranaut New Statement - ಮಹಾತ್ಮಾ ಗಾಂಧಿ ವಿರುದ್ಧ ಕಂಗನಾ ರಣಾವತ್ (Kangana Ranaut) ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಕುರಿತು ಕಂಗನಾ ತನ್ನ Instagram ಸ್ಟೋರಿಗಳಲ್ಲಿ ದೀರ್ಘ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ. ತನ್ನ ಪೋಸ್ಟ್ ಗಳಲ್ಲಿ  ಕಂಗನಾ ಮಹಾತ್ಮ ಗಾಂಧಿಯನ್ನು (Mahatma Gandhi) ಗುರಿಯಾಗಿಸಿದ್ದಾರೆ. ಮೊದಲ ಪೋಸ್ಟ್ ನಲ್ಲಿ ಕಂಗನಾ ಗಾಂಧಿ ಅವರನ್ನು 'ಸತ್ತಾ ಕಾ ಭೂಕಾ' (ಅಧಿಕಾರದ ಹಸಿವು ಹೊಂದಿರುವವ) ಮತ್ತು 'ಚಾಲಾಕ್' (ಚತುರ) ಎಂದು ಬಣ್ಣಿಸಿದ್ದಾರೆ. ಆದರೆ, ಎರಡನೇ ಪೋಸ್ಟ್‌ನಲ್ಲಿ ಭಗತ್ ಸಿಂಗ್‌ (Bhagat Singh) ಗಲ್ಲಿಗೇರಬೇಕು ಎಂದು ಗಾಂಧೀಜೀ ಬಯಸಿದ್ದರು ಎಂದು ಬರೆದಿದ್ದಾರೆ. ಹೀಗಾಗಿ ಜನರು ತಮ್ಮ ನಾಯಕರನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಬೇಕು ಎಂದು ಕಂಗನಾ ಸಲಹೆ ನೀಡಿದ್ದಾರೆ. ಕಪಾಳಮೋಕ್ಷ ಮಾಡುವವನ ಮುಂದೆ ಇನ್ನೊಂದು ಕೆನ್ನೆ ತಿರುಗಿಸಿದರೆ ಸ್ವಾತಂತ್ರ್ಯ ಸಿಗುವುದಿಲ್ಲ ಎಂದೂ ಕೂಡ ಕಂಗನಾ ಬರೆದುಕೊಂಡಿದ್ದಾರೆ.

ಅಧಿಕಾರ ದಾಹಿ, ಚಾಲಾಕ್ ಎಂದ ಕಂಗನಾ
ಕಂಗನಾ ರಣಾವತ್ ಈ ಹಿಂದೆ ನೀಡಿದ ಹೇಳಿಕೆಯ ಬಗ್ಗೆ ಕೋಲಾಹಲ ಇನ್ನೂ ನಿಂತಿಲ್ಲ, ಈ ಮಧ್ಯೆ, ಅವರು ಇನ್ನೂ ಕೆಲವು ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಮಾಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವರನ್ನು ಅವರು ತಮ್ಮ ಮಾಲೀಕರಿಗೆ ಒಪಿಸಿದರು. ಅವರಲ್ಲಿ ಧೈರ್ಯ ಇರಲಿಲ್ಲ ಮತ್ತು ಅವರ  ರಕ್ತದಲ್ಲಿ ಕುದಿತ ಇರಲಿಲ್ಲ ಎಂದು ಕಂಗನಾ ಬರೆದುಕೊಂಡಿದ್ದಾರೆ. ಅವರು ಅಧಿಕಾರ ದಾಹಿ ಮತ್ತು ಕುತಂತ್ರಿಗಳಾಗಿದ್ದರು ... ಯಾರಾದರೂ ನಿಮಗೆ ಕಪಾಳಮೋಕ್ಷ ಮಾಡಿದರೆ, ಅವರ ಮುಂದೆ ಮತ್ತೊಂದು ಕಪಾಳ ಮುಂದೆ ಮಾಡಿದರೆ ನಿಮಗೆ ಸ್ವಾತಂತ್ರ್ಯ ಸಿಗುತ್ತದೆ ಎಂದು ಅವರು ನಮಗೆ ಕಲಿಸಿದರು. ಹೀಗಾಗಿ ನಿಮ್ಮ ಹಿರೋ ಯಾರು ಎಂಬುದನ್ನು  ಬುದ್ಧಿವಂತಿಕೆಯಿಂದ ಆರಿಸಿ.

ಜನರು ಇತಿಹಾಸವನ್ನು ತಿಳಿದುಕೊಳ್ಳಬೇಕು
ತನ್ನ ಇನ್ನೊಂದು ಪೋಸ್ಟ್ ನಲ್ಲಿ ಕಂಗನಾ,  ಗಾಂಧಿ ಎಂದಿಗೂ ಭಗತ್ ಸಿಂಗ್ ಮತ್ತು ನೇತಾಜಿಯನ್ನು  (Netaji Subhash Chandra Bose) ಬೆಂಬಲಿಸಲಿಲ್ಲ. ಗಾಂಧೀಜಿಯವರು ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸಬೇಕೆಂದು ಬಯಸಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಆದ್ದರಿಂದ ನೀವು ಯಾರನ್ನು ಬೆಂಬಲಿಸುತ್ತೀರಿ ಎಂಬುದನ್ನು ನೀವೇ ಆರಿಸಬೇಕಾಗುತ್ತದೆ. ಏಕೆಂದರೆ ಅವರೆಲ್ಲರನ್ನೂ ನಿಮ್ಮ ನೆನಪಿನ ಒಂದೇ ಪೆಟ್ಟಿಗೆಯಲ್ಲಿ ಇರಿಸುವುದು ಮತ್ತು ಕೇವಲ ಅವರ ಜನ್ಮ ವಾರ್ಷಿಕೋತ್ಸವದಂದು ಅವರನ್ನು ನೆನಪಿಸಿಕೊಳ್ಳುವುದು ಸಾಕಾಗುವುದಿಲ್ಲ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅದು ಮೂರ್ಖತನವಲ್ಲ ಆದರೆ ಬೇಜವಾಬ್ದಾರಿ ಮತ್ತು ಕೇವಲ ಮೇಲ್ನೋಟಕ್ಕೆ ಮಾತ್ರ ಇರಲಿದೆ. ಜನರು ತಮ್ಮ ಇತಿಹಾಸ ಮತ್ತು ಅದರ ವೀರರನ್ನು ತಿಳಿದಿರಬೇಕು.

ಸ್ವಾತಂತ್ರ್ಯದ ಹೇಳಿಕೆಯ ಮೇಲೆ ನಡೆಯುತ್ತಿರುವ ಗದ್ದಲ
ಇತ್ತೀಚೆಗೆ ಟೈಮ್ಸ್ ನೌ ಶೃಂಗಸಭೆಯಲ್ಲಿ ಕಂಗನಾ ರಣಾವತ್ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ ಎಂದು ಹೇಳಿಕೆ ನೀಡಿದ್ದರು. ಇದಕ್ಕೂ ಮುನ್ನ ಗಾಂಧೀಜಿ ಬಟ್ಟಲಲ್ಲಿ ಭಿಕ್ಷೆ ಬೇಡುವ ಮೂಲಕ ಸ್ವಾತಂತ್ರ್ಯ ಪಡೆದಿದ್ದರು. ಬ್ರಿಟಿಷ್ ಆಡಳಿತದ ಮುಂದಿನ ರೂಪ ಕಾಂಗ್ರೆಸ್ ಎಂದು ಕಂಗನಾ ಬಣ್ಣಿಸಿದ್ದರು.

Trending News