ಸುಧಾಮೂರ್ತಿ ಪಾದಕ್ಕೆ ನಮಸ್ಕರಿಸಿದ ಅಮಿತಾಬ್ ಬಚ್ಚನ್‌ ಹೇಳಿದ್ದೇನು?

ಹಿಂದಿಯಲ್ಲಿ ಪ್ರಸಾರವಾಗುವ ಸುಪ್ರಸಿದ್ಧ ಶೋ 'ಕೌನ್‌ ಬನೇಗಾ ಕರೋಡ್‌ಪತಿ' ಕಾರ್ಯಕ್ರಮದ ಸೀಸನ್ 11ರ ಕೊನೇ ಸಂಚಿಕೆಯಲ್ಲಿ ನಮ್ಮ ನೆಚ್ಚಿನ ಕನ್ನಡತಿ, ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಭಾಗವಹಿಸಿದ್ದಾರೆ.

Last Updated : Nov 25, 2019, 11:23 AM IST
ಸುಧಾಮೂರ್ತಿ ಪಾದಕ್ಕೆ ನಮಸ್ಕರಿಸಿದ ಅಮಿತಾಬ್ ಬಚ್ಚನ್‌ ಹೇಳಿದ್ದೇನು? title=
Photo courtesy: Twitter Video Grab

ಬೆಂಗಳೂರು: ಹಿಂದಿಯಲ್ಲಿ ಪ್ರಸಾರವಾಗುವ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್(Amitabh Bachchan) ನಿರೂಪಣೆಯ ಸುಪ್ರಸಿದ್ಧ ಶೋ 'ಕೌನ್‌ ಬನೇಗಾ ಕರೋಡ್‌ಪತಿ' ಕಾರ್ಯಕ್ರಮದ ಸೀಸನ್ 11ರ ಕೊನೇ ಸಂಚಿಕೆಯಲ್ಲಿ ನಮ್ಮ ನೆಚ್ಚಿನ ಕನ್ನಡತಿ, ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ, ಖ್ಯಾತ ಲೇಖಕಿ  ಸುಧಾಮೂರ್ತಿ(Sudha Murthy) ಭಾಗವಹಿಸಿದ್ದಾರೆ. ಈ ಸಂಚಿಕೆ ಇದೇ ತಿಂಗಳ 29ರಂದು ಸೋನಿ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ವಾಹಿನಿಯು ಇದರ ಪ್ರೋಮೋವೊಂದನ್ನು ರಿಲೀಸ್ ಮಾಡಿದ್ದು, ಇದರಲ್ಲಿ ಸುಧಾಮೂರ್ತಿ ಪಾದಕ್ಕೆ ನಮಸ್ಕರಿಸಿದ ಅಮಿತಾಬ್ ಬಚ್ಚನ್‌ ನೀಡಿರುವ ಹೇಳಿಕೆಯೊಂದು ಎಲ್ಲರ ಮನ ಮುಟ್ಟಿದೆ. ಇದೀಗ ಅದರ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪ್ರೋಮೊದಲ್ಲಿ ಸುಧಾಮೂರ್ತಿ ಅವರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಬಿಗ್ ಬಿ ಅಮಿತಾಬ್ ಬಚ್ಚನ್ ಸುಧಾಮೂರ್ತಿ ಅವರ ಕಾಲಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆದಿರುವುದು ವಿಶೇಷವಾಗಿದೆ. ಸುಧಾಮೂರ್ತಿ ಅವರ ಸಾಧನೆ ಮತ್ತು ಸಮಾಜ ಸೇವೆಯನ್ನು ಪ್ರೇಕ್ಷಕರಿಗೆ ವಿವರಿಸಿರುವ ಅಮಿತಾಬ್ ಬಚ್ಚನ್, ಈ ಕಾರ್ಯಕ್ರಮದಲ್ಲಿ ಇನ್ಫೋಸಿಸ್‌ ಫೌಂಡೇಶನ್ ಮೂಲಕ ಸುಧಾ ಮೂರ್ತಿ ಅವರು ಮಾಡಿರುವ ಅನೇಕ ಜನಪರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಸುಧಾಮೂರ್ತಿಯವರ ಸಂಚಿಕೆ ಕುರಿತು ಮಾತನಾಡಿರುವ ಅಮಿತಾಬ್ ಬಚ್ಚನ್, "ಸುಧಾಮೂರ್ತಿಯವರನ್ನು ಭೇಟಿಯಾಗಿದ್ದು ನನ್ನ ಸೌಭಾಗ್ಯ ಎಂದು ಬಣ್ಣಿಸಿದ್ದಾರೆ. ಅಲ್ಲದೆ ಸುಧಾಮೂರ್ತಿ ಇರೋ ದೇಶದಲ್ಲಿ ನಾನಿದ್ದೇನೆ ಎಂಬುದೇ ನನಗೆ ಹೆಮ್ಮೆ. ಸುಧಾಮೂರ್ತಿ ಅವರು ಮಾಡುತ್ತಿರುವ ಜನಪರ ಕೆಲಸ ಕಾರ್ಯಗಳು, ಆರ್ಥಿಕವಾಗಿ ಹಿಂದುಳಿದವರು ಮತ್ತು ದುರ್ಬಲರಿಗೆ ಅವರ ಸಹಕಾರ ಶ್ಲಾಘನೀಯ" ಎಂದಿದ್ದಾರೆ.

Trending News