ಕ್ರಿಮಿನಲ್ ಲಾಯರ್ ಆಗಬೇಕಿದ್ದ ಈಕೆ ಇಂದು ಫೇಮಸ್‌ ನಟಿ.. ಸ್ಟಾರ್ ನಟನ ಎರಡನೇ ಪತ್ನಿ, ಇಬ್ಬರು ಮಕ್ಕಳ ತಾಯಿ.. 485 ಕೋಟಿಗೆ ಒಡತಿ ಈ ಬ್ಯೂಟಿ!

Kareena Kapoor Life story: ಬಾಲಿವುಡ್‌ನ ಈ ಫೇಮಸ್‌ ನಟಿ ಕ್ರಿಮಿನಲ್ ಲಾಯರ್ ಆಗುವ ಗುರಿ ಹೊಂದಿದ್ದರು. ಆದರೆ ಕುಟುಂಬದ ಪ್ರಭಾವದಿಂದ ಚಿತ್ರರಂಗಕ್ಕೆ ಬಂದು ಯಶಸ್ವಿ ತಾರೆಯಾದರು. ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾದ ಈಕೆ 24 ವರ್ಷಗಳಿಂದ ಬಾಲಿವುಡ್ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

Written by - Chetana Devarmani | Last Updated : Apr 18, 2024, 11:21 AM IST
  • ಕ್ರಿಮಿನಲ್ ಲಾಯರ್ ಆಗುವ ಗುರಿ ಹೊಂದಿದ್ದ ಬಾಲಿವುಡ್‌ನ ಫೇಮಸ್‌ ನಟಿ
  • ಸ್ಟಾರ್ ನಟನ ಎರಡನೇ ಪತ್ನಿ, ಇಬ್ಬರು ಮಕ್ಕಳ ತಾಯಿಯಾದರೂ ಕಡಿಮೆಯಾಗಿಲ್ಲ ಕ್ರೇಜ್‌
  • 24 ವರ್ಷಗಳಿಂದ ಬಾಲಿವುಡ್ ಪ್ರೇಕ್ಷಕರನ್ನು ರಂಜಿಸುತ್ತಿರುವ ಬಾಲಿವುಡ್‌ ತಾರೆ
ಕ್ರಿಮಿನಲ್ ಲಾಯರ್ ಆಗಬೇಕಿದ್ದ ಈಕೆ ಇಂದು ಫೇಮಸ್‌ ನಟಿ.. ಸ್ಟಾರ್ ನಟನ ಎರಡನೇ ಪತ್ನಿ, ಇಬ್ಬರು ಮಕ್ಕಳ ತಾಯಿ.. 485 ಕೋಟಿಗೆ ಒಡತಿ ಈ ಬ್ಯೂಟಿ!  title=

Kareena Kapoor: ಕಪೂರ್ ಕುಟುಂಬವು ಬಾಲಿವುಡ್ ಚಲನಚಿತ್ರೋದ್ಯಮದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಈ ಕುಟುಂಬದ ಅನೇಕ ಜನರು ಚಿತ್ರರಂಗದಲ್ಲಿ ಮಿಂಚಿದ್ದಾರೆ. ಅವರಲ್ಲಿ ಕರೀನಾ ಕಪೂರ್‌ ಸಹ ಒಬ್ಬರು. ಕರೀನಾ ಕಪೂರ್ ಬಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದಾರೆ. ಆದರೆ ಚಿತ್ರರಂಗಕ್ಕೆ ಕಾಲಿಡುವ ಮುನ್ನ ಆಕೆಯ ಗುರಿ ಬೇರೆಯಾಗಿತ್ತು. ಕರೀನಾ ಕಪೂರ್ ಕ್ರಿಮಿನಲ್ ಲಾಯರ್ ಆಗಬೇಕೆಂದು ಬಯಸಿದ್ದರು. ಲಾ ಕಾಲೇಜಿನಲ್ಲಿ (Law College) ಪ್ರವೇಶ ಪಡೆದರು. ಕೆಲ ದಿನ ಕಾಲೇಜಿಗೂ ಹೋಗಿದ್ದರು.  .

ಕರೀನಾ ಕಪೂರ್ ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ನಾನು ಸಿನಿಮಾ ಸೆಟ್‌ಗಳನ್ನು ನೋಡುತ್ತಾ ಬೆಳೆದಿದ್ದೇನೆ. ನಾನು ನಟಿ ಆಗಬೇಕೆಂದು ಬಯಸಿದ್ದೆ. ಆದರೆ ಒಂದು ಹಂತದಲ್ಲಿ ನಾನು ಕ್ರಿಮಿನಲ್ ವಕೀಲೆ ಆಗುವ ಕನಸು ಕಂಡಿದ್ದೆ. ಆದರೆ ಅದು ನನಗೆ ಸೆಟ್ ಆಗುವುದಿಲ್ಲ ಎಂದು ಅರಿತು ಮಧ್ಯದಲ್ಲಿಯೇ ಬಿಟ್ಟೆ. ನಾನು ಲಾಯರ್‌ ಆಗುವೆ ಎಂದಾಗ ನನ್ನ ಕುಟುಂಬದ ಅನೇಕ ಜನರು ನಕ್ಕರು. ಕಾನೂನು ಪುಸ್ತಕಗಳ ಗಾತ್ರವನ್ನು ನೋಡಿದಾಗ ವಕೀಲ ವೃತ್ತಿ ಕಷ್ಟ ಎಂದು ನಾನು ಭಾವಿಸಿದೆ. ಅದಕ್ಕಾಗಿಯೇ ನಾನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೆ ಎಂದಿದ್ದಾರೆ. 

ಇದನ್ನೂ ಓದಿ: ದೀಪಿಕಾ ಪಡುಕೋಣೆ ಮೈಮೇಲಿನ ʻರಣಬೀರ್‌ ಕಪೂರ್‌ʼ ಹೆಸರಿನ ಟ್ಯಾಟೂ ನೋಡಿದ್ದೀರಾ? ಆಲಿಯಾಗೂ ಗೊತ್ತಾ ಇವರ ಸೀಕ್ರೇಟ್‌ ಸಂಬಂಧ!

ಕರೀನಾ ಕಪೂರ್ 2000 ರಲ್ಲಿ ಬಾಲಿವುಡ್‌ಗೆ ಪ್ರವೇಶಿಸಿದರು. ಅಭಿಷೇಕ್ ಬಚ್ಚನ್ ಅವರ 'ರೆಫ್ಯೂಜಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಸುಮಾರು ಎರಡು ದಶಕಗಳ ಕಾಲ ಹಿಂದಿ ಚಿತ್ರರಂಗದಲ್ಲಿ ಅಗ್ರ ನಾಯಕಿಯಾಗಿ ಮುಂದುವರಿದರು. ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ.

ಕರೀನಾ ಕಪೂರ್ 2016 ರಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರನ್ನು ವಿವಾಹವಾದರು. ಇದು ಸೈಫ್‌ ಅಲಿ ಖಾನ್‌ ಅವರ ಎರಡನೇ ಮದುವೆಯಾಗಿದೆ. ಈ ದಂಪತಿಗೆ ತೈಮೂರ್ ಅಲಿ ಖಾನ್ ಮತ್ತು ಜೆಹ್ ಅಲಿ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಕರೀನಾ ಕಪೂರ್ ಅವರ ಸಂಪತ್ತು 485 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ದ್ವಾರಕೀಶ್‌ ಕೊನೆಯ ಆಸೆ ಈಡೇರಿಸಿದ ನಟಿ ಶ್ರುತಿ ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News