ವಿಶ್ವಾದ್ಯಂತ 2 ಸಾವಿರ, ಕರ್ನಾಟಕ ಒಂದರಲ್ಲೇ 350 ಚಿತ್ರಮಂದಿರಗಳಲ್ಲಿ 'ಕೆಜಿಎಫ್​' ರಿಲೀಸ್

ಕನ್ನಡ ಮಾತ್ರವಲ್ಲದೆ 5 ಭಾಷೆಗಳಲ್ಲಿ ಆರ್ಭಟಿಸಲಿರುವ ಕೆಜಿಎಫ್.

Last Updated : Dec 21, 2018, 08:32 AM IST
ವಿಶ್ವಾದ್ಯಂತ 2 ಸಾವಿರ, ಕರ್ನಾಟಕ ಒಂದರಲ್ಲೇ 350 ಚಿತ್ರಮಂದಿರಗಳಲ್ಲಿ 'ಕೆಜಿಎಫ್​' ರಿಲೀಸ್ title=

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಕೆಜಿಎಫ್' ಕೋರ್ಟ್​ನ ತಡೆಯಾಜ್ಞೆ ನಡುವೆಯೂ ವಿಶ್ವಾದ್ಯಂತ ಬರೋಬ್ಬರಿ 2,000 ಚಿತ್ರಮಂದಿರ​ಗಳಲ್ಲಿ ತೆರೆಕಾಣುತ್ತಿದೆ. ಕನ್ನಡ ಸಿನಿಮಾವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ತೆರೆಕಾಣುತ್ತಿರುವುದು ಚಂದನವನದ ಇತಿಹಾಸದಲ್ಲಿ ಇದೇ ಮೊದಲು.

ವಿಶ್ವಾದ್ಯಂತ 2,000 ಚಿತ್ರಮಂದಿರಗಳಲ್ಲಿ ಕೆಜಿಎಫ್ ಆರ್ಭಟಿಸಲಿರುವ ಕೆಜಿಎಫ್ ಕರ್ನಾಟಕ ಒಂದರಲ್ಲೇ 350 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಅದರಲ್ಲಿ 200 ಚಿತ್ರಮಂದಿರಗಳು ಬೆಂಗಳೂರಿನಲ್ಲೇ ಇವೆ. 

ಬೆಳಗ್ಗೆ ನಾಲ್ಕು ಗಂಟೆಯಿಂದಲೇ ಅನೇಕ ಚಿತ್ರಮಂದಿರಗಳಲ್ಲಿ ‘ಕೆಜಿಎಫ್​’ ಪ್ರದರ್ಶನ ಆರಂಭಗೊಂಡಿತ್ತು. ಮುಂಜಾನೆಯೇ ಚಿತ್ರಮಂದಿರಕ್ಕೆ ಆಗಮಿಸಿದ್ದ  ಅಭಿಮಾನಿಗಳು ಸಿನಿಮಾ ವೀಕ್ಷಿಸಿ ನೆಚ್ಚಿನ ನಟನಿಗೆ ಜೈಕಾರ ಕೂಗಿದರು.

ಗಾಂಧಿನಗರದಲ್ಲಿ ಅಭಿಮಾನಿಗಳ ಜೊತೆ ಕೆಜಿಎಫ್​ ವೀಕ್ಷಿಸಲಿರುವ ರಾಕಿಂಗ್​ ಸ್ಟಾರ್​: ನಿನ್ನೆ ರಾತ್ರಿಯವರೆಗೂ ಸಿನಿಮಾ ಪ್ರಚಾರಕ್ಕಾಗಿ ಓಡಾಡುತ್ತಿದ್ದ ಯಶ್, ಇಂದು ಬೆಳಗ್ಗೆ 10 ಗಂಟೆಗೆ ಗಾಂಧಿನಗರದ ನರ್ತಕಿ ಚಿತ್ರಮಂದಿರಕ್ಕೆ ಆಗಮಿಸಲಿದ್ದು ತಮ್ಮ ಅಭಿಮಾನಿಗಳ ಜೊತೆ ಕುಳಿತು ಸಿನಿಮಾ ವೀಕ್ಷಿಸಲಿದ್ದಾರೆ.

Trending News