ಈ ಸ್ಪರ್ಧಿಯನ್ನು ಸೇವ್ ಮಾಡ್ಬೇಕು ಅಂತಾ ಎಲಿಮಿನೇಷನ್ ಕ್ಯಾನ್ಸಲ್ ಮಾಡಿದ್ರು ಸುದೀಪ್! ಬಿಗ್’ಬಾಸ್ ಇತಿಹಾಸದಲ್ಲಿ ಇದೇ ಮೊದಲು…

Kiccha Sudeep, Bigg Boss Season 10: ವೀಕೆಂಡ್ ಬಂತೆಂದರೆ ಸ್ಪರ್ಧಿಗಳಿಗೆ ನಡುಕ, ಆದ್ರೆ ವೀಕ್ಷಕರಿಗೆ ಕಿಚ್ಚನ ಮಾತು ಕೇಳೋ ತವಕ. ಅಂದಹಾಗೆ ಈ ವಾರ ದೊಡ್ಮನೆಯಿಂದ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗ್ಬೇಕಿತ್ತು. ಆದರೆ ಈ ವಾರ ಯಾರೂ ಕೂಡ ಹೊರಹೋಗಿಲ್ಲ.

Written by - Bhavishya Shetty | Last Updated : Dec 3, 2023, 11:38 PM IST
    • ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ
    • ಈ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಸ್ನೇಹಿತ್ ಮತ್ತು ಮೈಕಲ್ ಇದ್ದರು
    • ಬದಲಾಗಿ ಕನ್ನಡದ ಮೇಲಿನ ವಿಶೇಷ ಅಭಿಮಾನದಿಂದ ಎಂದು ಹೇಳಲಾಗುತ್ತಿದೆ
ಈ ಸ್ಪರ್ಧಿಯನ್ನು ಸೇವ್ ಮಾಡ್ಬೇಕು ಅಂತಾ ಎಲಿಮಿನೇಷನ್ ಕ್ಯಾನ್ಸಲ್ ಮಾಡಿದ್ರು ಸುದೀಪ್! ಬಿಗ್’ಬಾಸ್ ಇತಿಹಾಸದಲ್ಲಿ ಇದೇ ಮೊದಲು… title=
Bigg Boss Season 10

Kiccha Sudeep, Bigg Boss Season 10: ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಇದು 10ನೇ ಸೀಸನ್. ಈ ಸೀಸನ್’ನಲ್ಲಿ ಮೊಟ್ಟ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರು ತಮ್ಮ ವಿಶೇಷ ಅಧಿಕಾರವನ್ನು ಬಳಕೆ ಮಾಡಿ ಸ್ನೇಹಿತ್ ಮತ್ತು ಮೈಕಲ್ ಅವರನ್ನು ಸೇವ್ ಮಾಡಿದ್ದಾರೆ. ಈ ಬೆಳವಣಿಗೆ ಕೇವಲ ಸ್ಪರ್ಧೆಯ ದೃಷ್ಟಿಕೋನದಿಂದಲ್ಲ. ಬದಲಾಗಿ ಕನ್ನಡದ ಮೇಲಿನ ವಿಶೇಷ ಅಭಿಮಾನದಿಂದ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ವಾರದಲ್ಲಿ 3 ಬಾರಿ ಪೇರಳೆ ಜ್ಯೂಸ್ ಕುಡಿಯಿರಿ: ಈ ಕಾಯಿಲೆಗಳಿಂದ ಪಡೆಯಿರಿ ಶಾಶ್ವತ ಮುಕ್ತಿ

ವೀಕೆಂಡ್ ಬಂತೆಂದರೆ ಸ್ಪರ್ಧಿಗಳಿಗೆ ನಡುಕ, ಆದ್ರೆ ವೀಕ್ಷಕರಿಗೆ ಕಿಚ್ಚನ ಮಾತು ಕೇಳೋ ತವಕ. ಅಂದಹಾಗೆ ಈ ವಾರ ದೊಡ್ಮನೆಯಿಂದ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗ್ಬೇಕಿತ್ತು. ಆದರೆ ಈ ವಾರ ಯಾರೂ ಕೂಡ ಹೊರಹೋಗಿಲ್ಲ.

ಕೊನೆಯದಾಗಿ ಈ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಸ್ನೇಹಿತ್ ಮತ್ತು ಮೈಕಲ್ ಇದ್ದರು. ಎಲ್ಲರೂ ಈ ವಾರ ಸ್ನೇಹಿತ್ ಮನೆಯಿಂದ ಹೊರ ಬರ್ತಾರೆ ಎಂದು ಅಂದುಕೊಂಡಿದ್ದರು. ಆದರೆ, ಈ ಸಮಯದಲ್ಲಿ ಕಿಚ್ಚ ಸುದೀಪ್ ಅವರು ತಮ್ಮ ವಿಶೇಷ ಅಧಿಕಾರವನ್ನು  ಬಳಸಿಕೊಂಡು ಮೈಕಲ್ ಮತ್ತು ಸ್ನೇಹಿತ್ ಅವರನ್ನು ಮನೆಯಲ್ಲೇ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾ ಗೆದ್ದರೂ ಕಳಪೆ ದಾಖಲೆ ಬರೆದ ರಿಂಕು ಸಿಂಗ್: ಟಿ20 ಪದಾರ್ಪಣೆ ಮಾಡಿದ ಬಳಿಕ ಇದೇ ಮೊದಲು

ಕಿಚ್ಚ ಸುದೀಪ್ ಈ ವಿಶೇಷ ಅಧಿಕಾರ ಬಳಸಿರುವುದಕ್ಕೆ ಕಾರಣ ಕನ್ನಡದ ಮೇಲಿನ ಮೈಕಲ್ ಬದ್ಧತೆ. ಮೈಕಲ್ ಮತ್ತು ಸ್ನೇಹಿತ್ ಈ ವಾರ ಅದ್ಭುತವಾಗಿ ಆಟವಾಡಿದ್ದರು. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿದ್ದ ಕಿಚ್ಚ, 10 ಸೀಸನ್’ಗಳ ಇತಿಹಾಸದಲ್ಲಿ ವಿಶೇಷ ಅಧಿಕಾರವನ್ನು ಮೊಟ್ಟ ಮೊದಲ ಬಾರಿಗೆ ಬಳಸಿಕೊಂಡು ಈ ಇಬ್ಬರು ಸ್ಪರ್ಧಿಗಳನ್ನು ಸೇವ್ ಮಾಡಿಕೊಂಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News