ಕಿಂಗ್ ಖಾನ್ ಜೊತೆ ಹೆಜ್ಜೆ ಹಾಕಿದ 'ವಿರುಷ್ಕಾ' ಜೋಡಿ

    

Last Updated : Dec 27, 2017, 04:35 PM IST
ಕಿಂಗ್ ಖಾನ್ ಜೊತೆ ಹೆಜ್ಜೆ ಹಾಕಿದ 'ವಿರುಷ್ಕಾ' ಜೋಡಿ title=
Pic courtesy: @iamsrk

ಮುಂಬೈ: ರೋಮಾಂಟಿಕ್ ಚಿತ್ರಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದಿರುವ ಬಾಲಿವುಡ್ ಬಾದಷಾ ಶಾರುಖ್  ವಿರುಷ್ಕಾ ಜೋಡಿಯ ಆರಕ್ಷತೆಯ ಕಾರ್ಯಕ್ರಮದಲ್ಲಿ ಈ ನವ ಜೋಡಿಯ ಜೊತೆಗೆ ಪಂಜಾಬಿ ಹಾಡಿಗೆ ನೃತ್ಯ ಮಾಡುವುದರ ಮೂಲಕ ಗಮನ ಸೆಳೆದಿದ್ದಾರೆ.

ಈ ವಿಡಿಯೋವನ್ನು ವಿರಾಟ್ ಕೊಹ್ಲಿ ಅಭಿಮಾನಿ ಬಳಗ ಇನ್ಸ್ತಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಶಾರುಖ್ ಖಾನ್ ಜೊತೆ 2008 ರಲ್ಲಿ ರಬ್ ದೇ ಬನಾ ಡಿ ಜೋಡಿ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ನಟಿ ಅನುಷ್ಕಾ ಶರ್ಮಾ ನಂತರ 2012 ರಲ್ಲಿ ಜಬ್ ತಕ್ ಹೈ ಜಾನ್ ಚಿತ್ರದಲ್ಲಿ ಅಭಿನಯಿಸಿದ್ದರು. ಆ ಮೂಲಕ ಕಿಂಗ್ ಖಾನ್ ಜೊತೆಗೆ ಅನುಷ್ಕಾ ಅನೂನ್ಯ ಸಂಬಂಧವನ್ನು ಹೊಂದಿದ್ದಾರೆ. 

ಡಿಸೆಂಬರ್ 11 ರಂದು ಇಟಲಿಯ ತಸ್ಕನಿ ಯಲ್ಲಿ ಮದುವೆಯಾದ ವಿರಾಟ್ ಮತ್ತು ಅನುಷ್ಕಾ ನವದೆಹಲಿ ಮತ್ತು ಮುಂಬೈನಲ್ಲಿ ಆರಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅದರ ಭಾಗವಾಗಿ ನವದೆಹಲಿಯಲ್ಲಿ ಪ್ರಧಾನಿ ಮೋದಿಯವರು ಆರಕ್ಷತೆ ಕಾರ್ಯಕರ್ಮಕ್ಕೆ ಭಾಗಿಯಾಗಿ ಶುಭಕೋರಿದ್ದರು. ಅದೇ ರೀತಿಯಾಗಿ ಬಾಲಿವುಡ್ ನಟ ನಟಿಯರಿಗಾಗಿ ಮುಂಬೈನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Trending News