ಬ್ಯಾಕ್ ಟು ಬ್ಯಾಕ್ 15 ಸಿನಿಮಾ ಫ್ಲಾಪ್.. ಆದರೂ ಇಂದಿಗೂ ಇವರೇ ಸೂಪರ್‌ಸ್ಟಾರ್

Actor with Highest Flop Movies: ಬಾಲಿವುಡ್‌ಗೆ ಮೊದಲ 100 ಕೋಟಿ ಚಿತ್ರ ನೀಡಿದ ಸೂಪರ್‌ಸ್ಟಾರ್ ಅನೇಕ ಫ್ಲಾಪ್ ಚಿತ್ರಗಳನ್ನು ಬ್ಯಾಕ್ ಟು ಬ್ಯಾಕ್ ನೀಡಿದ ದಾಖಲೆಯನ್ನೂ ಹೊಂದಿದ್ದಾರೆ.   

Written by - Chetana Devarmani | Last Updated : Aug 19, 2023, 02:42 PM IST
  • ಬ್ಯಾಕ್ ಟು ಬ್ಯಾಕ್ 15 ಸಿನಿಮಾ ಫ್ಲಾಪ್
  • ಬಾಲಿವುಡ್‌ಗೆ ಮೊದಲ 100 ಕೋಟಿ ಚಿತ್ರ ನೀಡಿದ ನಟ
  • ಇಂದಿಗೂ ಇವರೇ ಬಾಲಿವುಡ್‌ನ ಸೂಪರ್‌ಸ್ಟಾರ್
ಬ್ಯಾಕ್ ಟು ಬ್ಯಾಕ್ 15 ಸಿನಿಮಾ ಫ್ಲಾಪ್.. ಆದರೂ ಇಂದಿಗೂ ಇವರೇ ಸೂಪರ್‌ಸ್ಟಾರ್  title=

Actor with Highest Flop Movies: 80 ರ ದಶಕದಲ್ಲಿ ತನ್ನ ನೃತ್ಯ ಶೈಲಿಯಿಂದ ಲಕ್ಷಾಂತರ ಜನರನ್ನು ಆಕರ್ಷಿಸಿದ ಮತ್ತು ಡಿಸ್ಕೋ ಡ್ಯಾನ್ಸರ್ ಎಂಬ ಟ್ಯಾಗ್ ಅನ್ನು ಪಡೆದ ಮಿಥುನ್ ಚಕ್ರವರ್ತಿ ಅವರ ಸ್ಟಾರ್‌ಡಮ್ 90 ರ ದಶಕದಲ್ಲಿ ತಣ್ಣಗಾಯಿತು. 90ರ ದಶಕದ ಆರಂಭದಲ್ಲಿ ಮಿಥುನ್ ಚಕ್ರವರ್ತಿ ಸತತ ಫ್ಲಾಪ್ ಚಿತ್ರಗಳನ್ನು ನೀಡಿದ್ದರು. 5 ವರ್ಷಗಳಲ್ಲಿ 15 ಚಿತ್ರಗಳು ಬ್ಯಾಕ್-ಟು-ಬ್ಯಾಕ್ ಫ್ಲಾಪ್‌ ಆಗಿದ್ದವು. ಆಗ ಜನರು 'ಡಿಸ್ಕೋ ಡ್ಯಾನ್ಸರ್' ಅನ್ನು ಫ್ಲಾಪ್ ಸ್ಟಾರ್ ಎಂದು ಕರೆಯಲು ಪ್ರಾರಂಭಿಸಿದರು.

ಇದನ್ನೂ ಓದಿ: ʼತಲೈವಾ ರಜನಿʼಗಿಂತ ʼದಳಪತಿ ವಿಜಯ್ʼ ದೊಡ್ಡ ವ್ಯಕ್ತಿ..! ಖ್ಯಾತ ನಟನ ಬಹಿರಂಗ ಹೇಳಿಕೆ

ವರದಿಗಳ ಪ್ರಕಾರ, 1993 ರಿಂದ 1996 ರವರೆಗೆ, ಮಿಥುನ್ ಚಕ್ರವರ್ತಿ ಅಚರ ಅನೇಕ ಚಿತ್ರಗಳು ವಿಫಲವಾಗಿವೆ. 1993 ರಲ್ಲಿ ಬಿಡುಗಡೆಯಾದ ಮಹೇಶ್ ಭಟ್ ನಿರ್ದೇಶನದ ತಡಿಪಾರ್ ಬಾಕ್ಸ್ ಆಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು.  ಹೀಗೆ ಸಾಲು ಸಾಲು ಸಿನಿಮಾಗಳು ಸೋಲುಂಡವು. 

ವರದಿಗಳ ಪ್ರಕಾರ, ಮಿಥುನ್ ಚಕ್ರವರ್ತಿ ತಮ್ಮ ಇಡೀ ಚಲನಚಿತ್ರ ಜೀವನದಲ್ಲಿ 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವುಗಳಲ್ಲಿ 50 ಕ್ಕೂ ಹೆಚ್ಚು ಹಿಟ್ ಆಗಿವೆ. ಮಿಥುನ್ ಚಕ್ರವರ್ತಿ ಅವರ ನಟನೆಯ ಸಿನಿಮಾ ಬಾಲಿವುಡ್‌ಗೆ 100 ಕೋಟಿ ಕಲೆಕ್ಷನ್‌ ತಂದ ಮೊದಲ ಸಿನಿಮಾ ಆಗಿದೆ. ಮಿಥುನ್ ಚಕ್ರವರ್ತಿ ಕೊನೆಯದಾಗಿ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.  

ಇದನ್ನೂ ಓದಿ: ಪಾಪರಾಜಿ ಮೇಲೆ ಸಿಟ್ಟಾದ ದೀಪಿಕಾ ಪಡುಕೋಣೆ, ವಿಡಿಯೋ ವೈರಲ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News