Neha Shetty: ವೇದಿಕೆ ಮೇಲೆ ಸೀರೆ ಬಿಚ್ಚಿದ ನಟಿ..ಇಂತಹ ಕೀಳು ಮಟ್ಟದ ಪ್ರಚಾರ ಬೇಕಿತ್ತಾ ಎಂದ ನೆಟಿಜನ್ಸ್‌!

Neha Shetty Viral Video : ತೆಲುಗು ಸಿನಿರಂಗದಲ್ಲೇ ಸಕ್ರಿಯವಾಗಿರುವ ನಟಿ ನೇಹಾ ಶೆಟ್ಟಿ ಇದೀಗ ವೇದಿಕೆ ಮೇಲೆಯೇ ಸೀರೆ ಬಿಚ್ಚಿ ಹೀರೋಗೆ ಹೊದಿಸಿ ಟ್ರೋಲ್‌ ಆಗಿದ್ದಾರೆ. ಸದ್ಯ ಈ ಕುರಿತು ಸೋಷಿಯಲ್‌ ಮಿಡಿಯಾದಲ್ಲಿ ನೆಟ್ಟಿಗರು ಗರಂ ಆಗಿದ್ದಾರೆ.   

Written by - Savita M B | Last Updated : Aug 17, 2023, 02:59 PM IST
  • ಮುಂಗಾರು ಮಳೆ 2 ಚಿತ್ರದ ಮೂಲಕ ಕನ್ನಡಿಗರ ಮನಸ್ಸಿಗೆ ಹತ್ತಿರವಾದ ನೇಹಾ ಶೆಟ್ಟಿ
  • ತೆಲುಗಿನಲ್ಲೇ ಸೆಟಲ್‌ ಆಗಿದ್ದಾರೆ.
  • ನೇಹಾ ಶೆಟ್ಟಿ ವೇದಿಕೆ ಮೇಲೆ ನಾಯಕ ವಿಶ್ವಕ್‌ ಸೇನ್‌ ಜೊತೆ ಮೈ ಚಳಿ ಬಿಟ್ಟು ಡಾನ್ಸ್‌ ಮಾಡಿದ್ದಾರೆ.
Neha Shetty: ವೇದಿಕೆ ಮೇಲೆ ಸೀರೆ ಬಿಚ್ಚಿದ ನಟಿ..ಇಂತಹ ಕೀಳು ಮಟ್ಟದ ಪ್ರಚಾರ ಬೇಕಿತ್ತಾ ಎಂದ ನೆಟಿಜನ್ಸ್‌! title=

Neha Shetty : ಕನ್ನಡದಿಂದ ತಮ್ಮ ಸಿನಿ ಜರ್ನಿಯನ್ನು ಶುರು ಮಾಡಿ ಸಾಕಷ್ಟು ನಟ ನಟಿಯರು ತೆಲು ತಮಿಳು ಸೇರಿದಂತೆ ಇನ್ನಿತರ ಭಾಷಾ ಸಿನಿರಂಗದಲ್ಲಿ ಸೆಟಲ್‌ ಆಗುತ್ತಿದ್ದಾರೆ. ಸ್ಯಾಂಡಲ್‌ವುಡ್‌ ತೊರೆದು ಬೇರೆ ಸಿನಿರಂಗಕ್ಕೆ ಕಾಲಿಟ್ಟು ಅಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.

ಸದ್ಯ ಸ್ಯಾಂಡಲ್‌ವುಡ್‌ನ ಮುಂಗಾರು ಮಳೆ 2 ಚಿತ್ರದ ಮೂಲಕ ಕನ್ನಡಿಗರ ಮನಸ್ಸಿಗೆ ಹತ್ತಿರವಾದ ನೇಹಾ ಶೆಟ್ಟಿ ಸಹ ತೆಲುಗಿನಲ್ಲೇ ಸೆಟಲ್‌ ಆಗಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿದರೂ ಹೇಳಿಕೊಳ್ಳುವಂತಹ ಹಿಟ್‌ ಈ ನಟಿಗೆ ಇನ್ನೂ ಸಿಕ್ಕಿಲ್ಲ. ಆದರೆ ನಟಿಗೆ ಸಿನಿಮಾ ಅವಕಾಶಗಳೇನು ಕಮ್ಮಿಯಾಗಿಲ್ಲ. 

ಇದನ್ನೂ ಓದಿ-ಪ್ರೀತಿಯ ತಮ್ಮನ ಜನ್ಮ ದಿನದಂದೇ ಬಿಡುಗಡೆಯಾಗಲಿದೆ ಚಿರು ಕೊನೆಯ ಚಿತ್ರ ರಾಜಮಾರ್ತಾಂಡ

2016 ರಲ್ಲಿ ತೆರೆಕಂಡ ಮುಂಗಾರು ಮಳೆ 2 ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ಮಂಗಳೂರು ಚೆಲುವೆ ನೇಹಾ ಶೆಟ್ಟಿ, ಆ ಸಿನಿಮಾದ ನಂತರ ಸಿದಾ ಟಾಲಿವುಡ್‌ಗೆ ಜಿಗಿದರು. ಮೆಹಬೂಬ ಚಿತ್ರದ ಮೂಲಕ ತೆಲುಗು ಅಂಗಳಕ್ಕೆ ಕಾಲಿಟ್ಟ ಇವರು ಇದೀಗ ಗ್ಯಾಂಗ್ಸ್‌ ಆಫ್‌ ಗೋದಾವರಿ ಸಿನಿಮಾದ ಪ್ರಮೋಷನ್‌ ಕೆಲಸದಲ್ಲಿ ಬಿಜಿಯಾಗಿದ್ದಾರೆ.

ಇನ್ನು ಈ ಗ್ಯಾಂಗ್ಸ್‌ ಆಫ್‌ ಗೋದಾವರಿ ಚಿತ್ರದ ಒಂದು ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಈ ಹಾಡಿನ ರಿಲೀಸ್‌ ಈವೆಂಟ್‌ ವೇಳೆ ನಟಿ ನೇಹಾ ಶೆಟ್ಟಿ ವೇದಿಕೆ ಮೇಲೆ ನಾಯಕ ವಿಶ್ವಕ್‌ ಸೇನ್‌ ಜೊತೆ ಮೈ ಚಳಿ ಬಿಟ್ಟು ಡಾನ್ಸ್‌ ಮಾಡಿದ್ದಾರೆ. ಆ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ. 

ಈ ವಿಡಿಯೋ ಬರೀ ವೈರಲ್‌ ಆಗೋದಷ್ಟೇ ಅಲ್ಲ ಟ್ರೋಲ್‌ ಕೂಡಾ ಆಗುತ್ತಿದೆ. ಏನಿದೆ ಆ ವಿಡಿಯೋದಲ್ಲಿ ಅಂತೀರಾ..? ನೇಹಾ ಶೆಟ್ಟಿ ವೇದಿಕೆ ಮೇಲೆಯೇ ಸೀರೆಯ ಮೇಲ್ಬಾಗ ಬಿಚ್ಚಿ ನಾಯಕನಿಗೆ ಹೊದಿಸಿದ್ದಾರೆ. ಆ ಡಾನ್ಸ್‌ ವಿಡಿಯೋ ಸಖತ್‌ ವೈರಲ್‌ ಆಗಿದ್ದು ಅದರ ವಿರುದ್ಧ ಟೀಕೆಗಳು ಬರಲಾರಂಭಿಸಿವೆ.

ಇದನ್ನೂ ಓದಿ-Jailer: ಎಲ್ಲೆಡೆ ಆರ್ಭಟಿಸುತ್ತಿರುವ ಜೈಲರ್ ಅಲ್ಲಿ ಮಾತ್ರ ಗಪ್‌ಚುಪ್...ಕಾರಣ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News