ಸ್ಪೆಷಲ್‌ ಫೈಟ್‌ನಲ್ಲಿ ಅಜ್ಜಿ ತಾತನ ಜೊತೆಗೆ ಅಯೋಧ್ಯೆಗೆ ಹೊರಟ ಯುವರಾಜ!

Nikhil Kumarswamy: ಅಯೋಧ್ಯೆಯಲ್ಲಿ ರಾಮ್ ಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೂ ಆಮಂತ್ರಣ ಪತ್ರ ನೀಡಲಾಗಿದ್ದು, ಇದರ ಅಂಗವಾಗಿ ನಿಖಿಲ್‌ ಕುಮಾರ್‌ ತಾತಾ, ಅಜ್ಜಿ ಹಾಗೂ ತಂದೆಯ ಜೊತೆ  ಅಯೋಧ್ಯೆಗೆ ಪಯಣ ಬೆಳೆಸಿದ್ದಾರೆ.  

Written by - Zee Kannada News Desk | Last Updated : Jan 22, 2024, 10:12 AM IST
  • ರಾಮ್ ಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ರಾಜಕೀಯ ಮುಖಂಡರು, ಉದ್ಯಮಿಗಳು, ಸಿನಿಮಾ ತಾರೆಯರು, ಕ್ರೀಡಾಪಟುಗಳಿಗೆ ಆಮಂತ್ರಣ ಕೊಡಲಾಗಿದೆ.
  • ಜನವರಿ 21 ಭಾನುವಾರದಂದು ನಿಖಿಲ್ ಕುಮಾರ್, ಬೆಂಗಳೂರಿನ ಎಚ್‌ಎಎಲ್‌ನಿಂದ ಪ್ರೈವೆಟ್ ಜೆಟ್‌ನಲ್ಲಿ ಅಯೋಧ್ಯೆಯ ರಾಮ ಮಂದಿರದ ಉದ್ಘಾಟನೆಯ ಕಾರ್ಯಕ್ರಮಕ್ಕೆ ತೆರೆಳಿದ್ದಾರೆ.
  • ಯುವರಾಜ ನಿಖಿಲ್ ಜನ್ಮ ದಿನದಂದೇ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಆಗುತ್ತಿರೋದು ನಿಖಿಲ್‌ಗೆ ಖುಷಿ ಕೊಟ್ಟಿದೆ.
ಸ್ಪೆಷಲ್‌ ಫೈಟ್‌ನಲ್ಲಿ ಅಜ್ಜಿ ತಾತನ ಜೊತೆಗೆ ಅಯೋಧ್ಯೆಗೆ ಹೊರಟ ಯುವರಾಜ! title=

Nikhil Kumar Family Travelling To Ayodhya: ದಶಕಗಳಿಂದ ಕೋಟ್ಯಾಂತರ ಭಾರತೀಯರ ಕನಸಾಗಿದ್ದ ಅಯೋಧ್ಯೆಯ ಶ್ರೀ ರಾಮಮಂದಿರ ಇಂದು ಇದರ ಉದ್ಘಾಟನೆ ಕಾರ್ಯ ನಡೆಯಲಿದ್ದು, ಈ ಐತಿಹಾಸ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶಾದ್ಯಂತ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ರಾಮ್ ಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ರಾಜಕೀಯ ಮುಖಂಡರು, ಉದ್ಯಮಿಗಳು, ಸಿನಿಮಾ ತಾರೆಯರು, ಕ್ರೀಡಾಪಟುಗಳಿಗೆ ಆಮಂತ್ರಣ ಕೊಡಲಾಗಿದೆ.

ಕರ್ನಾಟಕದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೂ ಆಮಂತ್ರಣ ಪತ್ರ ನೀಡಲಾಗಿತ್ತು, ಕೆಲವು ದಿನಗಳ ಹಿಂದಷ್ಟೇ ರಾಮ ಜನ್ಮಭೂಮಿ ಟ್ರಸ್ಟ್ ವತಿ ಖುದ್ದಾಗಿ ಬಂದು ನಿಖಿಲ್ ಕುಮಾರ್‌ಗೆ ಆಹ್ವಾನ ಪತ್ರಿಕೆ ನೀಡಿದ್ದರು. ಆದರಿಂದ ಜನವರಿ 21 ಭಾನುವಾರದಂದು ಸ್ಯಾಂಡಲ್‌ವುಡ್‌ನ ಯುವರಾಜ ನಿಖಿಲ್ ಕುಮಾರ್, ಬೆಂಗಳೂರಿನ ಎಚ್‌ಎಎಲ್‌ನಿಂದ ಪ್ರೈವೆಟ್ ಜೆಟ್‌ನಲ್ಲಿ ಅಯೋಧ್ಯೆಯ ರಾಮ ಮಂದಿರದ ಉದ್ಘಾಟನೆಯ ಕಾರ್ಯಕ್ರಮಕ್ಕೆ ತೆರೆಳಿದ್ದಾರೆ.

 
 
 
 

 
 
 
 
 
 
 
 
 
 
 

A post shared by Nikhil Kumaraswamy (@nikhilgowda_jaguar)

ಇದನ್ನೂ ಓದಿ: ಅಯೋಧ್ಯೆಯಲ್ಲಿ ಸನ್‌ಗ್ಲಾಸ್‌ ಧರಿಸಿ ಕಸ ಗುಡಿಸಿದ ಕಂಗನಾ ವಿಡಿಯೋ ವೈರಲ್!

ಹೌದು.. ನಿನ್ನೆ ನಿಖಿಲ್‌ ಕುಮಾರ್‌ ರಾಮ್ ಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಸಮಾರಂಭದ ಆಹ್ವಾನದ ಮೇರೆಗೆ ತಾತಾ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು, ಅಜ್ಜಿ ಚೆನ್ನಮ್ಮ, ತಂದೆ ಎಚ್‌ಡಿ ಕುಮಾರಸ್ವಾಮಿ ಜೊತೆ  ಅಯೋಧ್ಯೆಗೆ ಪಯಣ ಬೆಳೆಸಿದ್ದಾರೆ. ಈ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯುವರಾಜ ನಿಖಿಲ್ ಜನ್ಮ ದಿನದಂದೇ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಆಗುತ್ತಿರೋದು ನಿಖಿಲ್‌ಗೆ ಖುಷಿ ಕೊಟ್ಟಿದೆ.

 ಅಯೋಧ್ಯೆ ಶ್ರೀರಾಮ ಮಂದಿ ಉದ್ಘಾಟನೆ ದಿನವೇ ನಿಖಿಲ್ ಕುಮಾರ್‌ ಹುಟ್ಟುಹಬ್ಬವಿದ್ದು, ಅಯೋಧ್ಯೆಯಲ್ಲಿ ಶ್ರೀರಾಮ ಸಮ್ಮುಖದಲ್ಲಿಯೇ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮಿಸಲಿದ್ದಾರೆ.  ಆದರಿಂದ ನಿಖಿಲ್ ಕುಮಾರ್ ಕೆಲವು ದಿನಗಳ ಹಿಂದೆನೇ ತಮ್ಮ ಅಭಿಮಾನಿಗಳಿಗೆ, ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಹೋಗುತ್ತಿರುವುದರಿಂದ ಈ ಬಾರಿ ಹುಟ್ಟುಹಬ್ಬವನ್ನು ನಿಮ್ಮೊಂದಿಗೆ ಆಚರಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಂದೇಶ ನೀಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News