Pooja Hegde: ಐಷಾರಾಮಿ ಮನೆ ಖರೀದಿಸಿದ ಪೂಜಾ ಹೆಗ್ಡೆ.. ಮುಂಬೈನ ಸಮುದ್ರ ತೀರದಲ್ಲಿರುವ ಈ ಕನಸಿನ ಅರಮನೆಯ ಬೆಲೆ ಎಷ್ಟು ಗೊತ್ತಾ?

Pooja Hegde Asset: ಪೂಜಾ ಹೆಗ್ಡೆ ತಮ್ಮ ಅದ್ಭುತ ನಟನೆಯಿಂದ ಜಗತ್ತಿನಾದ್ಯಂತ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇದೀಗ ಈ ಬಾಲಿವುಡ್‌ ಬ್ಯೂಟಿ ಕಡಲತೀರದಲ್ಲಿ ಹೊಸ ಮನೆ ಖರೀದಿಸಿದ್ದಾರೆ. 

Written by - Chetana Devarmani | Last Updated : Apr 14, 2024, 08:11 AM IST
  • ಖ್ಯಾತ ನಟಿ ಪೂಜಾ ಹೆಗ್ಡೆ
  • ಹೊಸ ಮನೆ ಖರೀದಿಸಿದ ಸೌತ್‌ ಬ್ಯೂಟಿ
  • ಕಡಲತೀರದಲ್ಲಿದೆ ಪೂಜಾ ಹೆಗ್ಡೆ ಹೊಸ ಮನೆ
Pooja Hegde: ಐಷಾರಾಮಿ ಮನೆ ಖರೀದಿಸಿದ ಪೂಜಾ ಹೆಗ್ಡೆ.. ಮುಂಬೈನ ಸಮುದ್ರ ತೀರದಲ್ಲಿರುವ ಈ ಕನಸಿನ ಅರಮನೆಯ ಬೆಲೆ ಎಷ್ಟು ಗೊತ್ತಾ? title=

Pooja Hegde new house: ನಟಿ ಪೂಜಾ ಹೆಗ್ಡೆ ಈಗಾಗಲೇ ದಕ್ಷಿಣ ಚಿತ್ರರಂಗದಲ್ಲಿ ಸಾಕಷ್ಟು ಕೀರ್ತಿ ಗಳಿಸಿದ್ದಾರ. ಕೆಲವು ಸಮಯದಿಂದ ಅವರು ಬಾಲಿವುಡ್‌ನಲ್ಲೂ ಸಕ್ರಿಯರಾಗಿದ್ದಾರೆ. ಪೂಜಾ ಹೆಗ್ಡೆ ಬ್ಯೂಟಿ ಮತ್ತು ನಟನೆಗೆ ಪ್ರೇಕ್ಷಕರು ಮಾರುಹೋಗಿದ್ದಾರೆ. ನಟಿಯ ಅಭಿಮಾನಿಗಳ ಪಟ್ಟಿ ಕೂಡ ವೇಗವಾಗಿ ಬೆಳೆಯುತ್ತಿದೆ.  

ಇತ್ತೀಚಿಗೆ ಪೂಜಾ ಹೆಗ್ಡೆ ಮುಂಬೈನ ಕಡಲ ತೀರದಲ್ಲಿ 4,000 ಚದರ ಅಡಿ ಆಸ್ತಿಯನ್ನು 45 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ ಎಂಬ ಸುದ್ದಿ ಬಂದಿದೆ. ಪ್ಯಾನ್ ಇಂಡಿಯಾ ಸ್ಟಾರ್‌ ಪೂಜಾ ಹೆಗ್ಡೆ ಹೊಸ ಮನೆ ಮುಂಬೈನ ಬಾಂದ್ರಾ ಪ್ರದೇಶದಲ್ಲಿದೆ. 

ಇದನ್ನೂ ಓದಿ: ಖ್ಯಾತ ಫುಟ್ಬಾಲ್ ಆಟಗಾರನ ಜೊತೆ ಊರ್ವಶಿ ರೌಟೆಲಾ ಡೇಟಿಂಗ್‌ ! ಈತ ಯಾರು, ಎಷ್ಟು ಕೋಟಿಗೆ ಒಡೆಯ ಗೊತ್ತಾ? 

ಈ ಹಿಂದೆ ಮುಂಬೈನಲ್ಲಿ ಬೇರೆಡೆ ವಾಸಿಸುತ್ತಿದ್ದ ಪೂಜಾ ಈಗ ಈ ಮನೆಗೆ ಶಿಫ್ಟ್‌ ಆಗಲಿದ್ದಾರಂತೆ. ಐಷಾರಾಮಿ ಬಂಗಲೆಗೆ ಪೂಜಾ ಹೆಗಡೆ ಶಿಫ್ಟ್ ಆಗುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಭವ್ಯವಾದ ನಿವಾಸದಿಂದ ಸಾಗರದ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದಂತೆ.  

ಈ ಮೊದಲು ಪೂಜಾ ಹೆಗ್ಡೆ ರಜೆಗಾಗಿ ಗೋವಾಗೆ ಹೋಗಿದ್ದರು. ನೋ ಮೇಕಪ್ ಲುಕ್ ಫೋಟೋ ಶೇರ್‌ ಮಾಡಿದ್ದರು. ಗೋವಾದ ಬಿಸಿಲಿನಲ್ಲಿ ತಮ್ಮ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ನಟಿ ಪೂಜಾ ಹೆಗ್ಡೆ ಗೋವಾದ ಕೆಲವು ವಿಶೇಷ ತಿನಿಸುಗಳ ಕಿರುನೋಟ ಮತ್ತು ಕೊಳದ ಬಳಿ ವಿಶ್ರಾಂತಿ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದರು.

ಪೂಜಾ ಹೆಗ್ಡೆ ಸದ್ಯ 'ದೇವ' ಚಿತ್ರಕ್ಕಾಗಿ ಸುದ್ದಿಯಲ್ಲಿದ್ದಾರೆ. ಇದಲ್ಲದೇ ‘ಸಾನಕಿ’ ಶೀರ್ಷಿಕೆಯಡಿ ತಯಾರಾಗುತ್ತಿರುವ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಕರೀನಾ ಕಪೂರ್‌ ಸೈಫ್‌ ಅಲಿ ಖಾನ್‌ ವಿಚ್ಛೇದನದ ಸುಳಿವು ಕೊಟ್ಟಬಿಡ್ತಾ ಒಂದೇ ಒಂದು ಪೋಸ್ಟ್‌ !?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News