ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಪ್ರೀಮಿಯರ್ ಪದ್ಮಿನಿ ಟೈಟಲ್ ಸಾಂಗ್!

ಪ್ರಸಿದ್ಧ ಗಾಯಕ ವಿಜಯ್ ಪ್ರಕಾಶ್ ಹಾಡಿರುವ ಈ  ಟೈಟಲ್ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಈಗಾಗಲೇ ಹಿಟ್ ಆಗಿರುವ ಟೈಟಲ್ ಟ್ರ್ಯಾಕಿಗೆ ಬೆಂಗಳೂರಿನ ಕೆಫೆ ಶ್ರೀ ಹೌಸ್​​​ನಲ್ಲಿ ಬಾರ್ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದೆ. 

Last Updated : Jan 18, 2019, 02:01 PM IST
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಪ್ರೀಮಿಯರ್ ಪದ್ಮಿನಿ ಟೈಟಲ್ ಸಾಂಗ್! title=

ಬೆಂಗಳೂರು: ನವರಸನಾಯಕ ಜಗ್ಗೇಶ್ ಅಭಿನಯದ ಪ್ರೀಮಿಯರ್ ಪದ್ಮಿನಿ ಚಿತ್ರದ ಟೈಟಲ್ ಸಾಂಗ್ ಲಿರಿಕಲ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಶ್ರುತಿ ನಾಯ್ಡು ನಿರ್ಮಾಣದಲ್ಲಿ ರಮೇಶ್ ಇಂದಿರಾ ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಜಗ್ಗೇಶ್ ವಿಬಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಈ ಚಿತ್ರದಲ್ಲಿ ಯೋಗರಾಜ್ ಭಟ್ ಬರೆದಿರುವ 'ಅತ್ಲಾಗೋದ್ರೆ ಅತ್ಲಾಗೆ, ಇತ್ಲಾಗ್ ಬಂದ್ರೆ ಇತ್ಲಾಗೆ...' ಎಂಬ ಹಾಡು ಬಿಡುಗಡೆಯಾಗಿ ಬಹು ದಿನಗಳು ಕಳೆದರೂ ಸಿನಿಪ್ರಿಯರು ಈ ಹಾಡನ್ನು ಗುನುಗುತ್ತಲೇ ಇದ್ದಾರೆ. ಪ್ರಸಿದ್ಧ ಗಾಯಕ ವಿಜಯ್ ಪ್ರಕಾಶ್ ಹಾಡಿರುವ ಈ  ಟೈಟಲ್ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಈಗಾಗಲೇ ಹಿಟ್ ಆಗಿರುವ ಟೈಟಲ್ ಟ್ರ್ಯಾಕಿಗೆ ಬೆಂಗಳೂರಿನ ಕೆಫೆ ಶ್ರೀ ಹೌಸ್​​​ನಲ್ಲಿ ಬಾರ್ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದೆ. 

ಈ ಹಿಂದೆ ಚಾಲ್ತಿಯಲ್ಲಿದ್ದ 'ಪ್ರೀಮಿಯರ್ ಪದ್ಮಿನಿ' ಕಾರನ್ನೇ ಮೂಲ ವಸ್ತುವನ್ನಾಗಿಟ್ಟುಕೊಂಡು ತಯಾರಾಗುತ್ತಿರುವ ಈ ಚಿತ್ರದಲ್ಲಿ ಸುಧಾರಾಣಿ, ಮಧುಬಾಲ, ಹಿತಾ ಚಂದ್ರಶೇಖರ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

Trending News