'777 ಚಾರ್ಲಿ' ಜೊತೆ ಮತ್ತೆ ಬೈಕ್‌ ಏರಿದ ರಕ್ಷಿತ್‌ ಶೆಟ್ಟಿ..! '777 ಚಾರ್ಲಿ' ಪಾರ್ಟ್‌-2 ಪಕ್ಕಾ..?

Written by - Malathesha M | Edited by - Manjunath Naragund | Last Updated : Jul 27, 2022, 08:17 PM IST
  • ಅರೆರೆ ಏನದು ಸಿಹಿ ಸುದ್ದಿ ಅಂದ್ರಾ..?
  • ಅಷ್ಟಕ್ಕೂ '777 ಚಾರ್ಲಿ' ಜೊತೆ ಮತ್ತೆ ಬೈಕ್‌ ಏರಿದ್ದಾರೆ ಸಿಂಪಲ್‌ ಸ್ಟಾರ್ ನಟ ರಕ್ಷಿತ್‌ ಶೆಟ್ಟಿ.
'777 ಚಾರ್ಲಿ' ಜೊತೆ ಮತ್ತೆ ಬೈಕ್‌ ಏರಿದ ರಕ್ಷಿತ್‌ ಶೆಟ್ಟಿ..! '777 ಚಾರ್ಲಿ' ಪಾರ್ಟ್‌-2 ಪಕ್ಕಾ..? title=
file photo

ಕನ್ನಡ ಸಿನಿಮಾರಂಗದ ಮಟ್ಟಿಗೆ '777 ಚಾರ್ಲಿ' ಎಂದೂ ಮರೆಯಲಾಗದ ಚಿತ್ರ. ಅದ್ರಲ್ಲೂ ಕೆಜಿಎಫ್‌ ಚಾಪ್ಟರ್ 2 ನಂತ್ರ ರಿಲೀಸ್‌ ಆಗಿ ಭರ್ಜರಿ ಯಶಸ್ಸು ಸಾಧಿಸಿದ ಈ ಸಿನಿಮಾ ಜಗತ್ತಿನಾದ್ಯಂತ ಮೋಡಿ ಮಾಡಿತ್ತು. ಉತ್ತರ ಭಾರತ ಸೇರಿದಂತೆ ಜಗತ್ತಿನ ಮೂಲೆ ಮೂಲೆಯಲ್ಲೂ ಈ ಸಿನಿಮಾ ನೋಡಿದವರು '777 ಚಾರ್ಲಿ' ಪಾರ್ಟ್‌-2 ನೋಡಲು ಕಾದು ಕುಳಿತಿದ್ದಾರೆ. ಈ ಹೊತ್ತಲ್ಲೇ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.

ಅರೆರೆ ಏನದು ಸಿಹಿ ಸುದ್ದಿ ಅಂದ್ರಾ..? ಅಷ್ಟಕ್ಕೂ '777 ಚಾರ್ಲಿ' ಜೊತೆ ಮತ್ತೆ ಬೈಕ್‌ ಏರಿದ್ದಾರೆ ಸಿಂಪಲ್‌ ಸ್ಟಾರ್ ನಟ ರಕ್ಷಿತ್‌ ಶೆಟ್ಟಿ. ಯಾಕಪ್ಪಾ ರಕ್ಷಿತ್‌ ಮತ್ತೆ  '777 ಚಾರ್ಲಿ' ಜೊತೆ ಮತ್ತೆ ಬೈಕ್‌ ಏರಿದ್ದು ಅಂದ್ರೆ, ಸದ್ಯದಲ್ಲೇ ಒಟಿಟಿಯಲ್ಲಿ '777 ಚಾರ್ಲಿ' ರಿಲೀಸ್‌ ಆಗುತ್ತಿದೆ. ಹೀಗಾಗಿ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿತು. ಈ ವೇಳೆ ನಟ ರಕ್ಷಿತ್ ಶೆಟ್ಟಿ ಶ್ವಾನದ ಜತೆ ಬೈಕ್ ಏರಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ಚಾರ್ಲಿಗೂ ಪುಟಾಣಿ ಹೆಲ್ಮೆಟ್ ಹಾಕಿದ್ದು ವಿಶೇಷವಾಗಿ ಕಂಡುಬಂದಿದೆ.

ಇದನ್ನೂ ಓದಿ: Box Office Analysis: ಹೈ ಬಜೆಟ್ ಆಕ್ಷನ್ ಅಡ್ವೆಂಚರ್ ಸಿನಿಮಾ ವಿಕ್ರಾಂತ್ ರೋಣ

ಪಾರ್ಟ್‌-2‌ ಯಾವಾಗ..?

ಮತ್ತೊಂದ್ಕಡೆ '777 ಚಾರ್ಲಿ' ಪಾರ್ಟ್‌-2‌ ಯಾವಾಗ ಅಂತಾ ಕೋಟಿ ಕೋಟಿ ಅಭಿಮಾನಿಗಳು‌ ಕಾಯುತ್ತಿದ್ದಾರೆ. ಆದರೆ '777 ಚಾರ್ಲಿ' ಪಾರ್ಟ್‌-2‌ ಸದ್ಯಕ್ಕೆ ಸಿದ್ಧವಾಗುವ ಸಾಧ್ಯತೆಗಳು ತುಂಬಾ ಕಡಿಮೆ. ಯಾಕಂದ್ರೆ ಸಿಂಪಲ್‌ ಸ್ಟಾರ್ ರಕ್ಷಿತ್‌ ಶೆಟ್ಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಮುಂದಿನ ದಿನಗಳಲ್ಲಿ '777 ಚಾರ್ಲಿ' ಪಾರ್ಟ್‌-2‌  ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಆದರೆ ಈವರೆಗೂ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ.

 ₹200 ಕೋಟಿ ಕ್ಲಬ್..?
'ಕೆಜಿಎಫ್‌-2' ಬಳಿಕ ಸ್ಯಾಂಡಲ್‌ವುಡ್‌ನ ಮತ್ತೊಂದು ಚಿತ್ರ ಜಗತ್ತಿನಾದ್ಯಂತ ಅಬ್ಬರದ ಪ್ರದರ್ಶನ ಕಾಣುತ್ತಿದ್ದು, ರಕ್ಷಿತ್‌ ಶೆಟ್ಟಿ ನಟನೆಯ '777 ಚಾರ್ಲಿ' ಇದೀಗ ₹150 ಕೋಟಿ ಕ್ಲಬ್‌ ಸೇರಿದೆ. ಈ ಮೂಲಕ ಮತ್ತೊಂದು ಕನ್ನಡ ಸಿನಿಮಾ ₹200 ಕೋಟಿ ಕ್ಲಬ್‌ ಸೇರಲು ದಾಪುಗಾಲು ಇಡುತ್ತಿದೆ. ರಕ್ಷಿತ್‌ & ಟೀಂ ವರ್ಲ್ಡ್ ಬಾಕ್ಸ್‌ ಆಫಿಸ್‌ನಲ್ಲಿ ಹೊಸ ರೆಕಾರ್ಡ್‌ ಕ್ರಿಯೇಟ್‌ ಮಾಡಿದ್ದಾರೆ.

 ಸೋಲು-ಗೆಲುವು
'ಸಿಂಪಲ್ಲಾಗಿ ಒಂದು ಲವ್ ಸ್ಟೋರಿ' ಸಿನಿಮಾ ಹಿಟ್‌ ಆದ ಬಳಿಕ ರಕ್ಷಿತ್‌ ಶೆಟ್ಟಿ ಹಿಂದಿರುಗಿ ನೋಡಲೇ ಇಲ್ಲ. ಆದರೆ 'ಅವನೇ ಶ್ರೀಮನ್ನಾರಾಯಣ' ಸೋಲಿನ ಬಳಿಕ ರಕ್ಷಿತ್ ಗೆಲುವಿನ ನಿರೀಕ್ಷೆಯಲ್ಲಿದ್ದರು. '777 ಚಾರ್ಲಿ' ಶೂಟಿಂಗ್‌ ಶುರು ಆದಾಗಿನಿಂದಲೂ ದೊಡ್ಡ ಸದ್ದು ಮಾಡುತ್ತಿತ್ತು. '777 ಚಾರ್ಲಿ' ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿತ್ತು. ಇದೀಗ ಆ ಕುತೂಹಲವೇ  ಸಿನಿಮಾಗೆ ದೊಡ್ಡ ಗೆಲುವು ತಂದುಕೊಟ್ಟಿದೆ.

ಇದನ್ನೂ ಓದಿ: Box Office Analysis: ಹೈ ಬಜೆಟ್ ಆಕ್ಷನ್ ಅಡ್ವೆಂಚರ್ ಸಿನಿಮಾ ವಿಕ್ರಾಂತ್ ರೋಣ

ಇದನ್ನೂ ಓದಿ: 

ಒಟ್ಟಾರೆ ಹೇಳುವುದಾದರೆ '777 ಚಾರ್ಲಿ' ಕನ್ನಡ ಸಿನಿಮಾ ಜಗತ್ತಿನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಹಾಗೇ '777 ಚಾರ್ಲಿ' ಪಾರ್ಟ್‌ 2 ಯಾವಾಗ ಬರುತ್ತೆ ಅಂತಾ ಅಭಿಮಾನಿಗಳು ಕಾಯುತ್ತಿದ್ದಾರೆ. ಯಾಕಂದ್ರೆ '777 ಚಾರ್ಲಿ' ಕ್ಲೈಮ್ಯಾಕ್ಸ್‌ ಅಂತಹ ದೊಡ್ಡ ಹಿಂಟ್‌ ಕೊಟ್ಟಿದ್ದು, '777 ಚಾರ್ಲಿ' ಪಾರ್ಟ್‌ 1 ನೋಡಿ ಇಷ್ಟಪಟ್ಟಿರುವ ಕೋಟಿ ಕೋಟಿ ಭಾರತೀಯರು ಇದೀಗ ಪಾರ್ಟ್‌ 2 ಬೇಕು ಅಂತಿದ್ದಾರೆ. ಆದರೆ ಈವರೆಗೂ '777 ಚಾರ್ಲಿ' ಚಿತ್ರತಂಡ ಈ ಕುರಿತು ಅಧಿಕೃತ ಮಾಹಿತಿ ನೀಡಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News