ರಣಬೀರ್-ಆಲಿಯಾ ಮದುವೆ ದಿನಾಂಕ ಮುಂದೂಡಿಕೆ: ಕಾರಣ ಇಲ್ಲಿದೆ

ಈ ಹಿಂದೆ ಲಭಿಸಿದ್ದ ಮಾಹಿತಿ ಪ್ರಕಾರ ಏ.13 ಹಾಗೂ 14ರಂದು ಮದುವೆ ನಡೆಯುತ್ತಿಲ್ಲ. ಹೀಗೆಂದು ಆಲಿಯಾ ಅವರ ಸಹೋದರ ರಾಹುಲ್​ ಭಟ್​ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. 

Written by - Bhavishya Shetty | Last Updated : Apr 12, 2022, 01:59 PM IST
  • ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ಮದುವೆ ಮುಂದೂಡಿಕೆ
  • ಭದ್ರತೆಯ ಕಾಳಜಿಯಿಂದ ಈ ಮದುವೆ ಮುಂದೂಡಲಾಗಿದೆ
  • ಆಲಿಯಾ ಸಹೋದರ ರಾಹುಲ್​ ಭಟ್​ ಹೇಳಿಕೆ
ರಣಬೀರ್-ಆಲಿಯಾ ಮದುವೆ ದಿನಾಂಕ ಮುಂದೂಡಿಕೆ: ಕಾರಣ ಇಲ್ಲಿದೆ title=
Alia Bhat

ಬೆಂಗಳೂರು: ಬಾಲಿವುಡ್‌ ಕ್ಯೂಟ್‌ ಕಪಲ್‌ ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ಮದುವೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ ಎಂದು ಅಭಿಮಾನಿಗಳು ಕಾಯುತ್ತಿರುವಾಗ ವಿವಾಹ ದಿನವನ್ನು ಮುಂದೂಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. 

ಇದನ್ನು ಓದಿ: ಪಿಎನ್‌ಬಿ ವಂಚನೆ ಪ್ರಕರಣ: ಗಡಿಪಾರಾಗಿದ್ದ ನೀರವ್‌ ಆಪ್ತ ಸುಭಾಷ್‌ ಬಂಧನ

ಈ ಹಿಂದೆ ಲಭಿಸಿದ್ದ ಮಾಹಿತಿ ಪ್ರಕಾರ ಏ.13 ಹಾಗೂ 14ರಂದು ಮದುವೆ ನಡೆಯುತ್ತಿಲ್ಲ. ಹೀಗೆಂದು ಆಲಿಯಾ ಅವರ ಸಹೋದರ ರಾಹುಲ್​ ಭಟ್​ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಮದುವೆ ದಿನಾಂಕದ ಮಾಹಿತಿ ಮಾಧ್ಯಮಗಳಲ್ಲಿ ಸೋರಿಕೆಯಾಗುತ್ತಿದ್ದಂತೆ, ಈ ತಾರಾ ಜೋಡಿ ತಮ್ಮ ಮದುವೆ ದಿನಾಂಕವನ್ನು ಬದಲಾಯಿಸಿದೆ ಎಂದು ಮಾಹಿತಿ ನೀಡಿದ್ದಾರೆ. 

ಭದ್ರತೆಯ ಕಾಳಜಿಯಿಂದ ಈ ಮದುವೆ ಮುಂದೂಡಲಾಗಿದೆ. ಆಲಿಯಾ ಮತ್ತು ರಣಬೀರ್ ಮದುವೆ ಹಾಗೂ ಇತರ ಹಬ್ಬಗಳಿಗಾಗಿ ಏಪ್ರಿಲ್ 14 ದಿನಾಂಕವನ್ನು ನಿಗದಿ ಮಾಡಿದ್ದರು ಎಂಬುದನ್ನು ರಾಹುಲ್ ಖಚಿತಪಡಿಸಿದ್ದಾರೆ. ರಣಬೀರ್-ಆಲಿಯಾ ವಿವಾಹವು ಏಪ್ರಿಲ್ 20ಕ್ಕೆ ನಡೆಯುವ ಸಾಧ್ಯತೆ ಇದೆ ಎಂದು ಸುಳಿವು ನೀಡಿದ್ದಾರೆ.

ಇದನ್ನು ಓದಿ: ಮೊದಲ ಭಾಷಣದಲ್ಲೇ ಕಾಶ್ಮೀರ ವಿಚಾರ ಪ್ರಸ್ತಾಪ: ಪಾಕ್‌ ನೂತನ ಪಿಎಂಗೆ ಮೋದಿ ತಿರುಗೇಟು

ರಣಬೀರ್ ಮತ್ತು ಆಲಿಯಾ ಮದುವೆ ಅವರ ಪೂರ್ವಜರ ಮನೆಯಲ್ಲಿ 4 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ತಿಳಿದುಬಂದಿತ್ತು. ಈ ಹಿಂದೆ ನಿಗದಿಯಾದ ದಿನಾಂಕದಲ್ಲಿ ಏಪ್ರಿಲ್ 13 ರಿಂದ ಮೆಹೆಂದಿ ಸಮಾರಂಭ, ಮರುದಿನ ಸಂಗೀತ್‌,  ಆ ಬಳಿಕ ಏಪ್ರಿಲ್ 15 ರಂದು ಮದುವೆ ಹಾಗೂ 16ರಂದು ಔತಣಕೂಟ ನಡೆಯಲಿದೆ ಎಂಬ ಮಾಹಿತಿ ಹರಿದಾಡುತ್ತಿತ್ತು. ಇದೀಗ ರಾಹುಲ್ ಮಾಧ್ಯಮಗಳಿಗೆ ನೀಡಿದ ಮಾಹಿತಿಯ ಪ್ರಕಾರ ಮದುವೆ ದಿನಾಂಕದೊಂದಿಗೆ ಮದುವೆ ಮುಂಚಿನ ಕಾರ್ಯಕ್ರಮಗಳಲ್ಲೂ ಬದಲಾವಣೆಯಾಗಲಿದೆ. ಸದ್ಯದಲ್ಲೇ ಮದುವೆ ದಿನಾಂಕ ಪ್ರಕಟಿಸಲಿದ್ದಾರೆ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ..

Trending News