ಆಲಿಯಾ ಭಟ್ & ರಣಬೀರ್ ಕಪೂರ್ ಮದುವೆಗೆ ಮುಹೂರ್ತ ಫಿಕ್ಸ್‌..! ಮದುವೆ ಯಾವಾಗ ಗೊತ್ತಾ..?

Written by - Malathesha M | Edited by - Manjunath Naragund | Last Updated : Apr 8, 2022, 08:06 PM IST
  • ಆ ಬಳಿಕ ಏ.15ರಂದು ಅದ್ಧೂರಿಯಾಗಿ ಮದುವೆ ನಡೆಯಲಿದ್ದು, ಏ.16ರಂದು ಸಂಜೆಗೆ ಔತಣಕೂಟ ಏರ್ಪಡಿಸಿದ್ದಾರೆ ಆಲಿಯಾ ಮತ್ತು ರಣಬೀರ್ ಕಪೂರ್.
ಆಲಿಯಾ ಭಟ್ & ರಣಬೀರ್ ಕಪೂರ್ ಮದುವೆಗೆ ಮುಹೂರ್ತ ಫಿಕ್ಸ್‌..! ಮದುವೆ ಯಾವಾಗ ಗೊತ್ತಾ..? title=
file photo

ಅದು ಬಾಲಿವುಡ್‌ನ ಕ್ಯೂಟ್‌ ಜೋಡಿ. ಆ ಕ್ಯೂಟ್‌ ಜೋಡಿ ಲವ್ವಲ್ಲಿ ಬಿದ್ದ ವಿಚಾರ ಇಡೀ ಜಗತ್ತಿಗೇ ಗೊತ್ತು. ಆದ್ರೆ ಅವರ ಮದುವೆ ಯಾವಾಗಪ್ಪಾ ಅಂತಾ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ರು. ಇದೀಗ ಅಭಿಮಾನಿಗಳ ಆ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಆ ಜೋಡಿ ಉತ್ತರ ಕೊಟ್ಟಿದ್ದು, ಆಲಿಯಾ ಮತ್ತು ರಣಬೀರ್ ಕಪೂರ್ ಮದುವೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಇದು ಫ್ಯಾನ್ಸ್‌ ಸಂಭ್ರಮವನ್ನ ದುಪ್ಪಟ್ಟು ಮಾಡಿದ್ದು, ಬ್ಯಾಚ್ಯುಲರ್‌ ಪಾರ್ಟಿಗೂ ರಣಬೀರ್ ಕಪೂರ್ ಸಿದ್ಧತೆ ಮಾಡಿಕೊಂಡಿದ್ದಾರೆ.

ಬಾಲಿವುಡ್‌ನ ಗಲ್ಲಿ ಗಲ್ಲಿಯಲ್ಲೂ ಆಲಿಯಾ ಮತ್ತು ರಣಬೀರ್ ಕಪೂರ್ ಮದುವೆ ಮಾತು ಜೋರಾಗಿ ಹಬ್ಬಿದೆ.ಯಾವಾಗ ಈ ಜೋಡಿ ಮದುವೆ ಆಗುತ್ತೆ ಅಂತಾ ತಲೆ ಕೆಡಿಸಿಕೊಂಡಿದ್ದ ಅಭಿಮಾನಿಗಳಿಗೆ ಬಿಗ್‌ ಅಪ್‌ಡೇಟ್‌ ಸಿಕ್ಕಿದ್ದು, ಆಲಿಯಾ ಮತ್ತು ರಣಬೀರ್ ಕಪೂರ್ ಮದುವೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಈ ಬಗ್ಗೆ ಡೀಟೇಲ್ಸ್‌ ತಿಳಿಯಲು ಮುಂದೆ ಓದಿ.

ಏ.15ಕ್ಕೆ ಮದುವೆ..!

ಅಂದಹಾಗೆ ಏ.13ರಂದು ಆಲಿಯಾ ಮತ್ತು ರಣಬೀರ್ ಕಪೂರ್ ಮದುವೆಯ ಮೆಹಂದಿ ಶಾಸ್ತ್ರ ನಡೆಯಲಿದೆ. ಇನ್ನು ಏ.14ರಂದು ಹಳದಿ ಹಾಗೂ ಮ್ಯೂಸಿಕ್‌ ಪ್ರೋಗ್ರಾಂ ನಡೆಯಲಿದೆ. ಆ ಬಳಿಕ ಏ.15ರಂದು ಅದ್ಧೂರಿಯಾಗಿ ಮದುವೆ ನಡೆಯಲಿದ್ದು, ಏ.16ರಂದು ಸಂಜೆಗೆ ಔತಣಕೂಟ ಏರ್ಪಡಿಸಿದ್ದಾರೆ ಆಲಿಯಾ ಮತ್ತು ರಣಬೀರ್ ಕಪೂರ್.

ಇದನ್ನು ಓದಿ: ಬಾಂಡ್ ರವಿ' ಸಾಥ್ ಕೊಟ್ಟ ಪೊಗರು ಪೋರ-ಯಂಗ್ ಟೈಗರ್... ಪ್ರಮೋದ್ ಬೆನ್ನು ತಟ್ಟಿದ ಧ್ರುವ-ವಿನೋದ್

ಪ್ರೀತಿ ಹುಟ್ಟಿದ್ದು ಎಲ್ಲಿ..?

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಒಟ್ಟಾಗಿ ‘ಬ್ರಹ್ಮಾಸ್ತ್ರ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಸೆಟ್ನಲ್ಲಿ ಇಬ್ಬರಿಗೂ ಪ್ರೀತಿ ಮೂಡಿದೆ ಎನ್ನಲಾಗಿತ್ತು. ಬಳಿಕ ಇಬ್ಬರೂ ತಮ್ಮ ಪ್ರೀತಿಯ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು. ಇಬ್ಬರೂ ಮದುವೆ ಆಗೋದು ಪಕ್ಕಾ ಆಗಿತ್ತು. ಆದರೆ ಮದುವೆ ದಿನಾಂಕ ಮಾತ್ರ ಫೈನಲ್‌ ಆಗಿರಲಿಲ್ಲ. ಇದೀಗ ಏಪ್ರಿಲ್‌ 2ನೇ ವಾರದಲ್ಲಿ ಇಬ್ಬರೂ ಸಪ್ತಪದಿ ತುಳಿದು, ಹೊಸ ಬದುಕಿಗೆ ಕಾಲು ಇಡೋದು ಪಕ್ಕಾ ಆಗಿದೆ.

ಫ್ಯಾನ್ಸ್‌ ಖುಷ್..!

ಇದರ ಜೊತೆಗೆ ಬ್ಯಾಚುಲರ್ಸ್‌ ಪಾರ್ಟಿಗೂ ರಣಬೀರ್ ಕಪೂರ್ ಪ್ಲ್ಯಾನ್‌ ಮಾಡಿದ್ದು, ಆಲಿಯಾ ಮನೆ ಕಡೆಯೂ ಸಂಭ್ರಮದ ತಯಾರಿ ಸಾಗಿದೆ. ಇದು ಅಭಿಮಾನಿಗಳಲ್ಲೂ ಸಂಭ್ರಮ ಹೆಚ್ಚಾಗುವಂತೆ ಮಾಡಿದ್ದು, ತಮ್ಮ ನೆಚ್ಚಿನ ನಟ ಹಾಗೂ ನಟಿಯ ಮದುವೆ ಸಮಾರಂಭ ಕಣ್ತುಂಬಿಕೊಳ್ಳಲು ಕಾಯ್ತಾ ಇದ್ದಾರೆ. ಆದಷ್ಟು ಬೇಗ ಆ ಘಳಿಗೆ ಬರಲಿದೆ.

ಇದನ್ನೂ ಓದಿ: Career: ಅಮೃತ್ ಮುನ್ನಡೆ ಯೋಜನೆಯಡಿ ಉಚಿತ ಕೋರ್ಸ್ : ಅರ್ಜಿ ಆಹ್ವಾನ

ಒಟ್ಟಾರೆ ಹೇಳೋದಾದ್ರೆ ಬಾಲಿವುಡ್‌ನ ಕ್ಯೂಟ್‌ ಕಪಲ್ಸ್‌ ಹೊಸ ಜೀವನ ಆರಂಭಿಸಲಿದ್ದಾರೆ.ಆಲಿಯಾ ಹಾಗೂ ರಣಬೀರ್ ಕಪೂರ್ ಮದುವೆಗೆ ದೊಡ್ಡ ದೊಡ್ಡ ಸ್ಟಾರ್‌ಗಳೇ ಸಾಕ್ಷಿಯಾಗಲಿದ್ದಾರೆ.ಬಾಲಿವುಡ್‌ ಸ್ಟಾರ್‌ ನಟ, ನಟಿಯರು ರಣಬೀರ್ ಕಪೂರ್ ಮದುವೆ ಆಗಮಿಸಲಿದ್ದು, ಅತಿಥಿಗಳ ಲಿಸ್ಟ್‌ ಕೂಡ ಸಿದ್ಧವಾಗುತ್ತಿದೆಯಂತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News