Ranbir Alia Wedding: ನಾಳೆಯೇ ನಡೆಯಲಿದೆ ರಣಬೀರ್ ಕಪೂರ್-ಆಲಿಯಾ ಭಟ್ ಮದುವೆ!

ರಣಬೀರ್ ಕಪೂರ್-ಆಲಿಯಾ ಭಟ್ ಮದುವೆ: ನಟ ರಣಬೀರ್ ಕಪೂರ್ ಅವರ ತಾಯಿ ನೀತು ಕಪೂರ್ ಅವರು ವಿಡಿಯೋ ಮೂಲಕ ತಮ್ಮ ಪುತ್ರನ ಮದುವೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ.  

Written by - Puttaraj K Alur | Last Updated : Apr 13, 2022, 08:59 PM IST
  • ಗುರುವಾರ ನಡೆಯಲಿದೆ ಬಾಲಿವುಡ್ ಸ್ಟಾರ್ ಜೋಡಿಯ ಮದುವೆ
  • ಮದುವೆ ಸಂಭ್ರಮದಲ್ಲಿರುವ ರಣಬೀರ್ ಕಪೂರ್-ಆಲಿಯಾ ಭಟ್
  • ಸೊಸೆ ಆಲಿಯಾಳ ಬಗ್ಗೆ ಮೆಚ್ಚುಗೆಯ ಮಾತನಾಡಿದ ನೀತು ಕಪೂರ್
Ranbir Alia Wedding: ನಾಳೆಯೇ ನಡೆಯಲಿದೆ ರಣಬೀರ್ ಕಪೂರ್-ಆಲಿಯಾ ಭಟ್ ಮದುವೆ! title=
ರಣಬೀರ್ ಕಪೂರ್-ಆಲಿಯಾ ಭಟ್ ಮದುವೆ

ನವದೆಹಲಿ: ಕಳೆದ ಹಲವು ದಿನಗಳಿಂದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಸುದ್ದಿಗಳು ಬರುತ್ತಿವೆ. ಆದರೆ ಇದುವರೆಗೂ ಈ ಮದುವೆ ಬಗ್ಗೆ ಯಾರೂ ಅಧಿಕೃತವಾಗಿ ಘೋಷಣೆ ಮಾಡಿರಲಿಲ್ಲ. ಆದರೆ, ಇದೀಗ ವರನ ತಾಯಿ ಮತ್ತು ನಟಿ ನೀತು ಕಪೂರ್ ಈ ಮದುವೆಯ ಸುದ್ದಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತ ಮಾಹಿತಿ ನೀಡಿದ್ದಾರೆ. ಮದುವೆ ಬಗ್ಗೆ ಮಾತನಾಡಿರುವ ನೀತು ಕಪೂರ್ ಅವರ ವಿಡಿಯೋ ವೈರಲ್ ಆಗಿದೆ.

ಪುತ್ರನ ಮದುವೆ ಸಂಭ್ರಮದಲ್ಲಿ ನೀತು ಕಪೂರ್  

 
 
 
 

 
 
 
 
 
 
 
 
 
 
 

A post shared by Viral Bhayani (@viralbhayani)

ವಾಸ್ತವವಾಗಿ ಸೆಲೆಬ್ರಿಟಿ ಫೋಟೋಗ್ರಾಫರ್ ವೈರಲ್ ಭಯಾನಿ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ನೀತು ಕಪೂರ್ ಮತ್ತು ಅವರ ಮಗಳು ರಿದ್ಧಿಮಾ ಕಪೂರ್ ಒಟ್ಟಿಗೆ ಸಂತಸದಲ್ಲಿರುವುದು ಕಂಡುಬಂದಿದೆ. ಇಬ್ಬರನ್ನೂ ಸುದ್ದಿಮಾಧ್ಯಮದವರು ಸುತ್ತುವರೆದು ರಣಬೀರ್ ಮತ್ತು ಆಲಿಯಾ ಮದುವೆ ಬಗ್ಗೆ ಪ್ರಶ್ನಿಸಿದ್ದಾರೆ. ಮದುವೆ ಯಾವಾಗ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ನೀತು ಕಪೂರ್ ನಾಳೆ ಅಂದರೆ ಗುರುವಾರ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ವಿವಾಹ ನಡೆಯಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: #BeastDisaster:ಬೀಸ್ಟ್ ಸಿನಿಮಾ ನೋಡಿ ಡಿಸಾಸ್ಟರ್ ಎಂದ ಫ್ಯಾನ್ಸ್!

ಆಲಿಯಾಳನ್ನು ಹೊಗಳಿದ ಅತ್ತಿಗೆ!

ಆಲಿಯಾ ಹೇಗಿದ್ದಾರೆಂಬ ಮಾಧ‍್ಯಮದವರ ಪ್ರಶ್ನೆಗೆ ಉತ್ತರಿಸಿರುವ ತಾಯಿ ಮತ್ತು ಮಗಳು ಸೊಸೆ ಸೂಪರ್ ಅಂತಾ ಹೇಳಿದ್ದಾರೆ. ರಣಬೀರ್ ಸಹೋದರಿ ಮಾತನಾಡಿ ಆಲಿಯಾ ಗೊಂಬೆಯಂತೆ ಮುದ್ದಾಗಿದ್ದಾಳೆಂದು ಖುಷಿ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ನೀತು ಕಪೂರ್ ಮಾತನಾಡಿ, ‘ನನ್ನ ಸೊಸೆ ಬಗ್ಗೆ ಏನು ಹೇಳಲಿ..? ಆಕೆ ನನ್ನ ಸೊಸೆಯಾಗುತ್ತಿರುವುದು ನಮ್ಮ ಖುಷಿ ಇಮ್ಮಡಿಯಾಗಿದೆ’ ಎಂದು ಹೇಳಿದ್ದಾರೆ.

ಮದುವೆಯಲ್ಲಿ ಸಂಗೀತ ಕಾರ್ಯಕ್ರಮ ಇರುವುದಿಲ್ಲ

ಮೂಲಗಳ ಪ್ರಕಾರ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಯಲ್ಲಿ ಸಂಗೀತ ಕಾರ್ಯಕ್ರಮ ಇರುವುದಿಲ್ಲವೆಂದು ತಿಳಿಸಿವೆ. ಸ್ಟಾರ್ ಜೋಡಿಯ ಮದುವೆಯಲ್ಲಿ ಯಾವುದೇ ಅದ್ಧೂರಿ ಸಮಾರಂಭ ಇರುವುದಿಲ್ಲ. ಮೆಹಂದಿ ಸಮಾರಂಭದಲ್ಲಿ ನೃತ್ಯ ಪ್ರದರ್ಶನವಿರುತ್ತದೆ. ಆದರೆ, ಮದುವೆ ಯಾವುದೇ ರೀತಿ ಗ್ರ್ಯಾಂಡ್ ಆಗಿ ನಡೆಯುವುದಿಲ್ಲ, ಸಂಗೀತ ಸಮಾರಂಭವೂ ಇರುವುದಿಲ್ಲವೆಂದು ತಿಳಿದುಬಂದಿದೆ.

ಇದನ್ನೂ ಓದಿ: ನಾಳೆಯಿಂದ ವಿಶ್ವದಾದ್ಯಂತ 10,000 ಕ್ಕೂ ಅಧಿಕ ಪರದೆಗಳಲ್ಲಿ ರಾಕಿ ಭಾಯ್ ಗ್ರ್ಯಾಂಡ್ ಎಂಟ್ರಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News