Rashmika Mandanna : ರಶ್ಮಿಕಾ ಮಂದಣ್ಣ - ವಿಜಯ್‌ ದೇವರಕೊಂಡ ಮದುವೆಯಾಗಲಿದ್ದಾರಾ!?

Rashmika Mandanna - Vijay Deverakonda : ನ್ಯಾಷನಲ್‌ ಕ್ರಷ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ‌ ಸಂಬಂಧದ ಬಗ್ಗೆ ಹಲವು ವದಂತಿಗಳು ಕೇಳಿ ಬರುತ್ತಿವೆ. ಆದರೆ  ಇಬ್ಬರೂ ಈ ಬಗ್ಗೆ ಒಪ್ಪಿಕೊಂಡಿಲ್ಲ. ಇಂತಹ ವದಂತಿಗಳನ್ನು ಯಾವಾಗಲೂ ತಳ್ಳಿ ಹಾಕುತ್ತಲೇ ಬಂದಿದ್ದಾರೆ. ಇಬ್ಬರೂ ತುಂಬಾ ಆತ್ಮೀಯ ಸ್ನೇಹಿತರು ಎಂದು ಹೇಳಿಕೊಂಡಿದ್ದರೂ ಸಹ, ಅವರ ಅಭಿಮಾನಿಗಳು ಅವರನ್ನು ಸಂಭಾವ್ಯ ಜೋಡಿಯಾಗಿಯೇ ಕಾಣುತ್ತಾರೆ. 

Written by - Chetana Devarmani | Last Updated : Nov 22, 2022, 05:18 PM IST
  • ನ್ಯಾಷನಲ್‌ ಕ್ರಷ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ‌
  • ಸಂಬಂಧದ ಬಗ್ಗೆ ಹಲವು ವದಂತಿಗಳು ಕೇಳಿ ಬರುತ್ತಿವೆ
  • ರಶ್ಮಿಕಾ ಮಂದಣ್ಣ - ವಿಜಯ್‌ ದೇವರಕೊಂಡ ಮದುವೆಯಾಗಲಿದ್ದಾರಾ!?
Rashmika Mandanna : ರಶ್ಮಿಕಾ ಮಂದಣ್ಣ - ವಿಜಯ್‌ ದೇವರಕೊಂಡ ಮದುವೆಯಾಗಲಿದ್ದಾರಾ!?  title=
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ‌

Rashmika Mandanna - Vijay Deverakonda : ನ್ಯಾಷನಲ್‌ ಕ್ರಷ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ‌ ಸಂಬಂಧದ ಬಗ್ಗೆ ಹಲವು ವದಂತಿಗಳು ಕೇಳಿ ಬರುತ್ತಿವೆ. ಆದರೆ  ಇಬ್ಬರೂ ಈ ಬಗ್ಗೆ ಒಪ್ಪಿಕೊಂಡಿಲ್ಲ. ಇಂತಹ ವದಂತಿಗಳನ್ನು ಯಾವಾಗಲೂ ತಳ್ಳಿ ಹಾಕುತ್ತಲೇ ಬಂದಿದ್ದಾರೆ. ಇಬ್ಬರೂ ತುಂಬಾ ಆತ್ಮೀಯ ಸ್ನೇಹಿತರು ಎಂದು ಹೇಳಿಕೊಂಡಿದ್ದರೂ ಸಹ, ಅವರ ಅಭಿಮಾನಿಗಳು ಅವರನ್ನು ಸಂಭಾವ್ಯ ಜೋಡಿಯಾಗಿಯೇ ಕಾಣುತ್ತಾರೆ. ಇದೀಗ ರಶ್ಮಿಕಾ ಮತ್ತು ವಿಜಯ್‌ ಅವರ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದೆ. ರಶ್ಮಿಕಾ ಮತ್ತು ವಿಜಯ್ ವಧು-ವರರಾಗಿರುವ ಈ ಫೋಟೋ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.  

ಇದನ್ನೂ ಓದಿ :  ಜರ್ಮನಿಯ ಮ್ಯೂನಿಕ್‌ನಲ್ಲಿ ಕನ್ನಡ ರಾಜ್ಯೋತ್ಸವ.. ಅಪ್ಪುಗೆ ವಿಶೇಷ ನಮನ

ವಿಜಯ್ ದೇವರಕೊಂಡ ಡೈಹಾರ್ಡ್ ಫ್ಯಾನ್ ಎಂಬ ಹೆಸರಿನ ಅಭಿಮಾನಿಗಳ ಪುಟವು ತನ್ನ ಪೇಜ್‌ನಲ್ಲಿ ಈ ವೈರಲ್ ಚಿತ್ರವನ್ನು ಹಂಚಿಕೊಂಡಿದೆ. ಇಬ್ಬರೂ ವಧು - ವರರಂತೆ ಅಲಂಕರಿಸಿಕೊಂಡು ನಿಂತ ಫೋಟೋ ಇದಾಗಿದೆ. ಸಂಪೂರ್ಣ ಬಿಳಿ ಬಣ್ಣದ ಶೇರ್ವಾನಿಯಲ್ಲಿ ವಿಜಯ್ ಸುಂದರವಾಗಿ ಕಾಣುತ್ತಿದ್ದಾರೆ. ಗೋಲ್ಡನ್‌ ಬಣ್ಣದ ಲೆಹೆಂಗಾದಲ್ಲಿ ರಶ್ಮಿಕಾ ಕ್ಯೂಟ್‌ ಆಗಿ ಕಾಣುತ್ತಿದ್ದಾರೆ. ಆದರೆ ಇದು ಎಡಿಟ್‌ ಮಾಡಲಾಗದ ಫೋಟೋ. ಗ್ರಾಫಿಕ್ಸ್‌ ಬಳಸಿಕೊಂಡು ರಶ್ಮಿಕಾ ಮತ್ತು ವಿಜಯ್‌ ಅವರನ್ನು ವಧು - ವರರಂತೆ ಎಡಿಟ್‌ ಮಾಲಾಗಿದೆ.  

Rashmika Mandanna - Vijay Deverakonda

ಗೀತಾ ಗೋವಿಂದಂ (2018), ಚಲೋ (2018) ಮತ್ತು ಡಿಯರ್ ಕಾಮ್ರೇಡ್ (2019) ಚಿತ್ರಗಳಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸಿದ್ದಾರೆ. ಈ ಜೋಡಿಯು ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇತ್ತೀಚಿನ ವರದಿಗಳ ಪ್ರಕಾರ ಕೆಲ ದಿನಗಳ ಹಿಂದೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ಮಾಲ್ಡೀವ್ಸ್‌ಗೆ ತೆರಳಿದ್ದರು. 

ಇದನ್ನೂ ಓದಿ : ಈ ನಗರದ ಡೀಲಕ್ಸ್ ಹೋಟೆಲ್‌ಗಳಲ್ಲಿ ಬ್ಲೂಫಿಲಂ ತೆಗೆಯುತ್ತಿದ್ದ ರಾಜ್‌ ಕುಂದ್ರಾ.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News