Ratan Rajputh : ಛಾಯಾಗ್ರಾಹಕನ ಜೊತೆಗೂ ಕಾಂಪ್ರಮೈಸ್ ಮಾಡಿಕೊಳ್ಬೇಕು..ಸೌತ್ ಸಿನಿದುನಿಯಾದ ಕರಾಳ ಮುಖ ತೆರೆದಿಟ್ಟ ನಟಿ

Ratan Rajputh on Casting Couch : ಹಿಂದಿ ಕಿರುತೆರೆ ನಟಿ ರತನ್ ರಾಜ್‌ಪೂತ್ ಪಿಂಕ್‌ವಿಲ್ಲಾ ಸೌತ್‌ನಲ್ಲಿ ಅವಕಾಶ ಸಿಗಬೇಕು ಅಂದರೆ ಹೀರೊ, ನಿರ್ದೇಶಕ, ನಿರ್ಮಾಪಕ ಮತ್ತು ಛಾಯಾಗ್ರಾಹಕನ ಜೊತೆ ಕಾಂಪ್ರಮೈಸ್ ಆಗಬೇಕು ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

Written by - Savita M B | Last Updated : Jul 23, 2023, 02:15 PM IST
  • ಲವೊಮ್ಮೆ ಪ್ರತಿಭೆ ಇದ್ದರೂ ಚಿತ್ರರಂಗದಲ್ಲಿ ಅವಕಾಶ ಸಿಗುವುದು ಕಷ್ಟ.
  • ಬಾಲಿವುಡ್ ಮಾತ್ರವಲ್ಲ ಸೌತ್ ಸಿನಿದುನಿಯಾದಲ್ಲೂ ಕಾಸ್ಟಿಂಗ್ ಕೌಚ್ ಸಂಸ್ಕೃತಿ ಇದೆ
  • ಕಾಂಪ್ರಮೈಸ್ ಮಾಡಿಕೊಳ್ಳುವಂತೆ ಕೇಳುತ್ತಾರೆ ಎನ್ನುವ ಆರೋಪವನ್ನು ಸಾಕಷ್ಟು ನಟ ನಟಿಯರು ಮಾಡುತ್ತಿರುತ್ತಾರೆ.
Ratan Rajputh : ಛಾಯಾಗ್ರಾಹಕನ ಜೊತೆಗೂ ಕಾಂಪ್ರಮೈಸ್ ಮಾಡಿಕೊಳ್ಬೇಕು..ಸೌತ್ ಸಿನಿದುನಿಯಾದ ಕರಾಳ ಮುಖ ತೆರೆದಿಟ್ಟ ನಟಿ  title=

Ratan Raajputh on South film Industry : ಕೆಲವೊಮ್ಮೆ ಪ್ರತಿಭೆ ಇದ್ದರೂ ಚಿತ್ರರಂಗದಲ್ಲಿ ಅವಕಾಶ ಸಿಗುವುದು ಕಷ್ಟ. ಬಾಲಿವುಡ್ ಮಾತ್ರವಲ್ಲ ಸೌತ್ ಸಿನಿದುನಿಯಾದಲ್ಲೂ ಕಾಸ್ಟಿಂಗ್ ಕೌಚ್ ಸಂಸ್ಕೃತಿ ಇದೆ,  ಕಾಂಪ್ರಮೈಸ್ ಮಾಡಿಕೊಳ್ಳುವಂತೆ ಕೇಳುತ್ತಾರೆ ಎನ್ನುವ ಆರೋಪವನ್ನು ಸಾಕಷ್ಟು ನಟ ನಟಿಯರು ಮಾಡುತ್ತಿರುತ್ತಾರೆ. ಸದ್ಯ ಮತ್ತೋಬ್ಬ ನಟಿ ಸೌತ್‌ ಸಿನಿರಂಗದ 
ಕರಾಳ ಮುಖ ಬಿಚ್ಚಿಟ್ಟಿದ್ದಾರೆ. 

ರತನ್ ರಾಜ್‌ಪೂತ್  ಒಂದು ಯೂಟ್ಯೂಬ್‌ ಸಂದರ್ಶನದಲ್ಲಿ ಕಾಸ್ಟಿಂಗ್ ಕೌಚ್ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ನಟಿ ಮುಂಬೈ ಆಡಿಷನ್‌ಗೆ ಹೋದಾಗ ಕೂಲ್ ಡ್ರಿಂಕ್ಸ್‌ನಲ್ಲಿ ಮತ್ತಿನ ಪದಾರ್ಥ ಮಿಕ್ಸ್‌ ಮಾಡಿ ಕೊಟ್ಟಿದ್ದರು. ಅದನ್ನು ಕುಡಿದಾಗ ಆದ ವಿಚಿತ್ರ ಅನುಭವ ನಂತರ ಅವರು ಒಂದು ಅಡ್ರೆಸ್‌ಗೆ ಹೋಗುವಂತೆ ಹೇಳಿದ್ದರು. ಆ ಭಯಾನಕ ಜಾಗ, ಒಬ್ಬ ಯುವತಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು ಅದೆಲ್ಲಾ ನೋಡಿ ಪರಿಸ್ಥಿತಿ ತಿಳಿದುಕೊಂಡು ಅಲ್ಲಿಂದ ಹೇಗೋ ತಪ್ಪಿಸಿಕೊಂಡೆ ಎಂದು ರತನ್ ಹೇಳಿದ್ದಾರೆ.

ಇದನ್ನೂ ಓದಿ-ದೃಶ್ಯಕ್ಕಾಗಿ ಆಮಿರ್ ಖಾನ್‌ ಜೊತೆ 47 ಬಾರಿ ಲಿಪ್ ಕಿಸ್ ಮಾಡಿದ್ದ ಕರಿಷ್ಮಾ ಕಪೂರ್..ಏನದು ಸನ್ನಿವೇಶ?

ಸೌತ್‌ ಸಿನಿಮಾಗಳಲ್ಲಿ ಅವಕಾಶ ಸಿಗಬೇಕು ಎಂದರೇ  ಹೀರೊ, ನಿರ್ದೇಶಕ, ನಿರ್ಮಾಪಕ ಮತ್ತು ಛಾಯಾಗ್ರಾಹಕನ ಜೊತೆಗೂ ಕಾಂಪ್ರಮೈಸ್ ಮಾಡಿಕೊಳ್ಳಬೇಕು ಅನ್ನೊ ಶಾಕಿಂಗ್‌ ಹೇಳಿಕೆಯನ್ನು ನೀಡಿದ ನಟಿ ಸೌತ್‌ನಲ್ಲಿ ನನಗೆ ತುಂಬಾ ಆಫರ್‌ಗಳು ಬಂದವು, ಆದರೆ ನಾನು ರಿಜೆಕ್ಟ್‌ ಮಾಡಿದ್ದೇನೆ ಎಂದಿದ್ದಾರೆ.

"ಒಂದು ದಿನ ನನಗೆ ಒಬ್ಬರು ಕಾಲ್‌ ಮಾಡಿ ಅವಕಾಶವಿದೆ ಬನ್ನಿ ಎಂದು ಕರೆದರು. ನಂತರ ನೀವು ಸ್ವಲ್ಪ ತೆಳ್ಳಗಿದ್ದೀರಾ, ಪಾತ್ರಕ್ಕಾಗಿ ಕೊಂಚ ತೂಕ ಹೆಚ್ಚಿಸಿಕೊಳ್ಳುಬೇಕು ಎಂದರು. ಅವರು ಹೇಳಿದ್ದಕ್ಕೆ ನಾನು ಒಪ್ಪಿಕೊಂಡೆ. ನಂತರ ಅವನು ಇಲ್ಲಿನ ರೀತಿ, ನಿಯಮಗಳು ಮತ್ತು ಷರತ್ತುಗಳು ನಿಮಗೆ ಗೊತ್ತು ಅಲ್ಲವೇ ಎಂದು ಕೇಳಿ..ನಾನು ಇಲ್ಲ ಏನದು ಎಂದು ಕೇಳಿದೆ.. ಹೀರೊ, ನಿರ್ದೇಶಕ, ನಿರ್ಮಾಪಕ ಹಾಗೂ ಛಾಯಾಗ್ರಾಹಕ ಯಾರು ಕೇಳಿದರೂ ನೋ ಎನ್ನುವಂತಿಲ್ಲ ಎಂದು ಪರೋಕ್ಷವಾಗಿ ಹೇಳಿದ".

"ನೀವು ಏನು ಹೇಳುತ್ತಿದ್ದೀರಾ..? ನನಗೆ ಅರ್ಥವಾಗಲಿಲ್ಲ. ಬಿಡಿಸಿ ಹೇಳಿ ಎಂದೆ. ಅದಕ್ಕೆ ಆತ ನಿಮಗೆ ಗೊತ್ತಿರುವುದೇ ಎಲ್ಲ..ಅವರೆಲ್ಲರ ಜೊತೆ ನೀವು ಕಾಂಪ್ರಮೈಸ್ ಆಗಬೇಕಾಗುತ್ತದೆ ಎಂದು ಹೇಳಿದ. ಅಷ್ಟೇ ನಾನು ಆ ಕೂಡಲೇ ಆಫರ್ ರಿಜೆಕ್ಟ್ ಮಾಡಿದೆ. ಇದರ ನಂತರ ನನಗೆ ಸೌತ್‌ನಿಂದ ಯಾವುದೇ ಆಫರ್‌ ಬಂದಿಲ್ಲ" ಎಂದು ತಮ್ಮ ಕಹಿ ಅನುಭವವನ್ನು ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ-ನನಗೆ ʼNon Identiticalʼ ಅವಳಿ ಮಕ್ಕಳು ಹುಟ್ಟುತ್ತಾರೆ..ನನಗಿರುವ ಆ ಸಮಸ್ಯೆಯೇ ಇದಕ್ಕೆ ಕಾರಣ ಎಂದ ಉಪ್ಪಿ ಸಿನಿಮಾ ನಟಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News