ರಾಕಿಂಗ್ ಸ್ಟಾರ್ ಯಶ್ ಹೇಳಿರೋ ಸ್ಫೂರ್ತಿ ತುಂಬುವ ವಿಶೇಷ ವ್ಯಕ್ತಿ ಯಾರು?

ಹೆಮ್ಮೆಯ ಕನ್ನಡಿಗ ವೇದಿಕೆಯಲ್ಲಿ ರಾಕಿಂಗ್ ಸ್ಟಾರ್ Yash ಅವರು ಸ್ಫೂರ್ತಿ ತುಂಬೋ ಒಬ್ಬ ವಿಶೇಷ ವ್ಯಕ್ತಿ ಬಗ್ಗೆ ಮಾತಾಡಿದ್ದಾರೆ.

Divyashree K Divyashree K | Updated: Mar 14, 2018 , 03:21 PM IST
ರಾಕಿಂಗ್ ಸ್ಟಾರ್ ಯಶ್ ಹೇಳಿರೋ ಸ್ಫೂರ್ತಿ ತುಂಬುವ ವಿಶೇಷ ವ್ಯಕ್ತಿ ಯಾರು?

ಬೆಂಗಳೂರು : ಜೀ ಕನ್ನಡ ವಾಹಿನಿ ಏರ್ಪಡಿಸಿದ್ದ ಹೆಮ್ಮೆಯ ಕನ್ನಡಿಗ 2018 ಕಾರ್ಯಕ್ರಮ ಇದೇ ಮಾ.17 ಮತ್ತು 18ರಂದು ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. 

ಮಾರ್ಚ್ 3 ರಂದು ನಡೆದ ಈ ಕಾರ್ಯಕ್ರಮದಲ್ಲಿ ಕಲೆ, ಸಾಹಿತ್ಯ, ಪತ್ರಿಕೋದ್ಯಮ, ನೃತ್ಯ, ನಿರ್ದೇಶಕ, ಅತ್ಯುತ್ತಮ ಸಂಗೀತ ಹೀಗೆ ಒಟ್ಟು 22 ಪ್ರಶಸ್ತಿಗಳನ್ನು ಸಾಧಕರಿಗೆ ನೀಡಿ ಗೌರವಿಸಲಾಗಿದೆ. ಅವರಲ್ಲಿ ಕವಿ ನಿಸಾರ್‌ ಅಹಮದ್‌, ಪತ್ರಕರ್ತ ವಿಶ್ವೇಶ್ವರ ಭಟ್‌, ಸಾಲು ಮರದ ತಿಮ್ಮಕ್ಕ, ಐಪಿಎಸ್‌ ಮಾಡಿದ ಮೊದಲ ಕನ್ನಡತಿ ಖ್ಯಾತಿಯ ರೂಪಾ ಮುದ್ಗಲ್‌, ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌, ಪುನೀತ್‌ ರಾಜ್‌ ಕುಮಾರ್‌, ರಶ್ಮಿಕಾ ಮಂದಣ್ಣ, ಕ್ರೇಜಿ ಸ್ಟಾರ್‌ ರವಿಚಂದ್ರನ್‌, ನಟ ರಮೇಶ್‌ ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. 

ಹಾಗೇ ಈ ಕಾರ್ಯಕ್ರಮದಲ್ಲಿ ದುನಿಯಾ ವಿಜಯ್, ರಂಗಾಯಣ ರಘು, ಸಾನ್ವಿ ಶ್ರೀವಾಸ್ತವ, ರೋರಿಂಗ್ ಸ್ಟಾರ್ ಶ್ರಿಮುರಳಿ, ಅನುಶ್ರೀ ಸೇರಿದಂತೆ ಹಲವರು ನೃತ್ಯ ಪ್ರದರ್ಶನ ನೀಡಿ ಇಡೀ ಕಾರ್ಯಕ್ರಮಕ್ಕೆ ರಂಗು ನೀಡಿದ್ದಾರೆ.

ಆದರೆ, ಹೆಮ್ಮೆಯ ಕನ್ನಡಿಗ ವೇದಿಕೆಯಲ್ಲಿ ರಾಕಿಂಗ್ ಸ್ಟಾರ್ Yash ಅವರು ಸ್ಫೂರ್ತಿ ತುಂಬುವ ಒಬ್ಬ ವಿಶೇಷ ವ್ಯಕ್ತಿ ಬಗ್ಗೆ ಮಾತಾಡಿದ್ದಾರೆ ಅಂತ ಜೀ ವಾಹಿನಿ ಹೇಳ್ತಿದೆ. 

ಅದು ಯಾರು ಅನ್ನೋದು ಮಾತ್ರ ಇದುವರೆಗೂ ಬಹಿರಂಗವಾಗಿಲ್ಲ. ನಿಮಗೂ ಕೂಡ ಆ ವ್ಯಕ್ತಿ ಯಾರು ಅಂತ ತಿಳ್ಕೊಳೋ ಕುತೂಹಲ ಹೆಚ್ಚಾಗಿದೆಯಾ? ಹಾಗಿದ್ರೆ ಜೀ ವಾಹಿನಿಯಲ್ಲಿ ಇದೇ ಮಾರ್ಚ್ 17 ಮತ್ತು 18ರಂದು ರಾತ್ರಿ 7.30ಕ್ಕೆ ಪ್ರಸಾರವಾಗುವ 'ಹೆಮ್ಮೆಯ ಕನ್ನಡಿಗ 2018' ಕಾರ್ಯಕ್ರಮವನ್ನು ತಪ್ಪದೇ ವೀಕ್ಷಿಸಿ. Don't mis it...