Sameer Wankhede ಮದುವೆ ಮಾಡಿಸಿದ ಮೌಲಾನಾ ಗಂಭೀರ ಹೇಳಿಕೆ, 15 ವರ್ಷಗಳ ಹಿಂದೆ ನಡೆದಿದ್ದೇನು?

Sameer Wankhede Marriage Controversy - ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB)ಯ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ (Sameer Wankhede) ಮತ್ತು ಶಬಾನಾ ಖುರೇಷಿ (Shabana Qureshi) ಇಬ್ಬರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರಾದ ಕಾರಣ ಇಬ್ಬರ ವಿವಾಹ ನಡೆದಿದೆ ಎಂಬ ಗಂಭೀರ ಹೇಳಿಕೆ ನೀಡಿದ್ದಾರೆ. 

Written by - Nitin Tabib | Last Updated : Oct 27, 2021, 05:33 PM IST
  • ಸಮೀರ್ ತಮ್ಮ ಮೊದಲ ವಿವಾಹದ ವೇಳೆ ಸಮೀರ್ ದಾವುದ್ ವಾಂಖೆಡೆ ಆಗಿದ್ದರು.
  • ಅವರು ಡಾ. ಶಬಾನಾ ಕುರೇಶಿ ಜೊತೆಗೆ ವಿವಾಹವಾಗಿದ್ದರು.
  • ಸಮೀರ್ ವಾಂಖೆಡೆ ವಿವಾಹ ನೆರವೇರಿಸಿ ಕೊಟ್ಟ ಮೌಲಾನಾ ಮುಝಮ್ಮಿಲ್ ಅಹ್ಮದ್ ಹೇಳಿಕೆ.
Sameer Wankhede ಮದುವೆ ಮಾಡಿಸಿದ ಮೌಲಾನಾ ಗಂಭೀರ ಹೇಳಿಕೆ, 15 ವರ್ಷಗಳ ಹಿಂದೆ ನಡೆದಿದ್ದೇನು? title=
Sameer Wankhede Marriage Controversy (File Photo)

ನವದೆಹಲಿ: Sameer Wankhede Marriage Controversy - ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB)ಯ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಬಗ್ಗೆ ದಿನನಿತ್ಯ ಹೊಸ ಹೊಸ ಮಾಹಿತಿಗಳು ಹೊರಬೀಳುತ್ತಿದ್ದು, ಇದೀಗ ಅವರ ಧರ್ಮದ ಬಗ್ಗೆ ದೊಡ್ಡ ಮಾಹಿತಿಯೊಂದು ಬಹಿರಂಗಪಡಿಸಲಾಗಿದೆ. ಸಮೀರ್ ವಾಂಖೆಡೆ ಮತ್ತು ಶಬಾನಾ ಖುರೇಷಿ ಇಬ್ಬರೂ ಮುಸ್ಲಿಮರಾಗಿದ್ದು, ಅದೇ ಕಾರಣದಿಂದ ಅವರು ವಿವಾಹವಾದರು ಎಂದು ಮೌಲಾನಾವೋಬ್ಬರು ಹೇಳಿಕೆ ನೀಡಿದ್ದಾರೆ. 

ಸಮೀರ್ ಹಿಂದೂ ಆಗಿರುವ ಮಾಹಿತಿ ತಪ್ಪು: ಮೌಲಾನಾ 
ಸಮೀರ್ ವಾಂಖೆಡೆ ಒಂದು ವೇಳೆ ತಾವು ಹಿಂದೂ ಎಂದು ಹೇಳಿಕೊಂಡಿದ್ದರೆ, ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಮೌಲಾನಾ ಮುಝಮ್ಮಿಲ್ ಅಹ್ಮದ್ ಹೇಳಿದ್ದಾರೆ. ಏಕೆಂದರೆ ಮದುವೆಯ ಸಮಯದಲ್ಲಿ ಅವರು ಮುಸ್ಲಿಮರಾಗಿದ್ದರು ಮತ್ತು ಅವರ ತಂದೆಯೂ ಮುಸ್ಲಿಂ ಆಗಿದ್ದರು. ಸಮೀರ್ ಮತ್ತು ಶಬಾನಾ ಇಬ್ಬರೂ ಮುಸ್ಲಿಮರಾಗಿದ್ದು, ಅದೇ ಕಾರಣದಿಂದ ಅವರ ಮದುವೆ ನೆರವೇರಿಸಲಾಗಿದೆ ಮತ್ತು ಕಾರ್ಯಕ್ರಮದಲ್ಲಿ ಸಾವಿರ-ಎರಡು ಸಾವಿರ ಜನರು ಸೇರಿದ್ದರು ಎಂದು ಮೌಲಾನಾ ಹೇಳಿದ್ದಾರೆ. 

ಸಮೀರ್ ಮುಸ್ಲಿಂ ಆಗಿರದೆ ಇದ್ದರೆ, ಅವರ ನಿಕಾಹ್ ನೆರವೇರುತ್ತಿರಲಿಲ್ಲ ಎಂದ ಮೌಲಾನಾ
ಸಮೀರ್ ವಾಂಖೆಡೆ ಅವರು ಮುಸ್ಲಿಂ ಆಗಿಲ್ಲದಿದ್ದರೆ ಅವರ ನಿಕಾಹ ನೆರವೆರುತ್ತಿರಲಿಲ್ಲ ಎಂದು ಮೌಲಾನಾ ಮುಝಮ್ಮಿಲ್ ಅಹ್ಮದ್ ಹೇಳಿದ್ದಾರೆ. ಏಕೆಂದರೆ ಅದು ಶರಿಯಾಕಾನೂನಿನ ಪ್ರಕಾರ ಅದು ಸರಿಯಲ್ಲ ಹಾಗೂ ಯಾವುದೇ ಕಾಜಿ ಶರಿಯಾ ವಿರುದ್ಧವಾಗಿ ನಿಕಾಹ್ ನೆರವೇರಿಸುವುದಿಲ್ಲ ಎಂದು ಹೇಳಿದ್ದಾರೆ. ಇವತ್ತು ಅವರು ಏನೇ ಹೇಳಿದರೂ ಕೂಡ ಮದುವೆಯ ಸಮಯದಲ್ಲಿ ಅವರು ಮುಸಲ್ಮಾನರಾಗಿದ್ದರು ಎಂದು ಮೌಲಾನಾ ಹೇಳಿದ್ದಾರೆ.

ನಿಕಾಹನಾಮಾ ಹಂಚಿಕೊಂಡ ಎನ್.ಸಿ.ಪಿ ಮುಖಂಡ ನವಾಬ್ ಮಲಿಕ್
ಇದಕ್ಕೂ ಮೊದಲು, ಎನ್‌ಸಿಪಿ ಮುಖಂಡ ನವಾಬ್ ಮಲಿಕ್ ಸಮೀರ್ ವಾಂಖೆಡೆ ಅವರ ಮೊದಲ ಮದುವೆಯ ಫೋಟೋ ಮತ್ತು ನಿಕಾಹ್ನಾಮವನ್ನು ಹಂಚಿಕೊಂಡಿದ್ದಾರೆ. ನವಾಬ್ ಮಲಿಕ್ ಟ್ವೀಟ್ ನಲ್ಲಿ, 'ಸಮೀರ್ ದಾವೂದ್ ವಾಂಖೆಡೆ ಮತ್ತು ಶಬಾನಾ ಖುರೇಷಿ ನಡುವೆ ಡಿಸೆಂಬರ್ 7, 2006 ರ ಗುರುವಾರ ರಾತ್ರಿ 8 ಗಂಟೆಗೆ ವಿವಾಹ ನಡೆಯಿತು. ಈ ಮದುವೆ ಮುಂಬೈನ ಅಂಧೇರಿ (ಪಶ್ಚಿಮ)ದ ಲೋಖಂಡವಾಲಾ ಕಾಂಪ್ಲೆಕ್ಸ್‌ನಲ್ಲಿ ನಡೆದಿದೆ. ಎರಡನೇ ಟ್ವೀಟ್‌ನಲ್ಲಿ, 'ಮದುವೆಯಲ್ಲಿ 33 ಸಾವಿರ ರೂಪಾಯಿಗಳನ್ನು ಮೆಹರ್ ಆಗಿ ಪಾವತಿಸಲಾಗಿದೆ. ಇದರಲ್ಲಿ ಸಾಕ್ಷಿ ಸಂಖ್ಯೆ 2 ಅಜೀಜ್ ಖಾನ್, ಅವರು ಸಮೀರ್ ದಾವೂದ್ ವಾಂಖೆಡೆ ಅವರ ಹಿರಿಯ ಸಹೋದರಿ ಯಾಸ್ಮಿನ್ ದಾವೂದ್ ವಾಂಖೆಡೆ ಅವರ ಪತಿ ಎಂದು ಹೇಳಿದ್ದಾರೆ. 

ಇದನ್ನೂ ಓದಿ-Shah Rukh And Gauri Love Story : ಗೌರಿ ಸಹೋದರನಿಗೆ ಶಾರುಖ್ ಖಾನ್ ಇಷ್ಟವಾಗಿರಲಿಲ್ಲ ಅದಕ್ಕೆ ಗನ್ ತೋರಿಸಿ ಬೆದರಿಕೆ ಹಾಕಿದ್ದ

ಸಮೀರ್ ವಾಂಖೆಡೆ ಮೊದಲ ಮದುವೆಯ ಫೋಟೋ ಹಂಚಿಕೆ!
ಇದರ ಜೊತೆಗೆಯೇ ನವಾಬ್ ಮಲಿಕ್ ತನ್ನ ಮೂರನೇ ಟ್ವೀಟ್ ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ ಹಾಗೂ ಅದು ಸಮೀರ್ ವಾಂಖೆಡೆ ಹಾಗೂ ಶಬಾನಾ ಖುರೇಷಿ ಮದುವೆಯ ಫೋಟೋ ಎಂದು ಹೇಳಿದ್ದಾರೆ. ಈ ಫೋಟೋಗೆ ಅವರು "ಮುದ್ದಾದ ಜೋಡಿ ಸಮೀರ್ ದಾವುದ್ ವಾಂಖೆಡೆ ಹಾಗೂ ಡಾ. ಶಬಾನಾ ಕುರೇಶಿ' ಎಂದು ಬರೆದಿದ್ದಾರೆ. ಇದಲ್ಲದೆ ಮ್ಯಾರೇಜ್ ಸರ್ಟಿಫಿಕೆಟ್ ಅನ್ನು ಹಂಚಿಕೊಂಡ ನವಾಬ್ ಮಲಿಕ್ 'ಇದು ಡಾ ಶಬಾನಾ ಕುರೇಶಿ ಹಾಗೂ ಸಮೀರ್ ವಾಂಖೆಡೆ ಅವರ ನಿಕಾಹನಾಮಾ' ಎಂದು ಹೇಳಿದ್ದಾರೆ 

ಇದನ್ನೂ ಓದಿ-Rishab Shetty : ದುನಿಯಾ ವಿಜಯ್‌ 'ಸಲಗ' ಹಾಡಿ ಹೊಗಳಿದ ರಿಷಭ್ ಶಟ್ಟಿ!

ಶಬಾನಾ ಕುರೇಶಿ ಜೊತೆಗಿನ ವಿವಾಹದ ಸಂಗತಿ ಸಮೀರ್ ವಾಂಖೆಡೆ ಒಪ್ಪಿಕೊಂಡಿದ್ದಾರೆ
ಇದಕ್ಕೂ ಮೊದಲು ಸಮೀರ್ ವಾಂಖೆಡೆ ಶಬಾನಾ ಕುರೇಶಿ ಜೊತೆಗೆ ವಿವಾಹ ಮಾಡಿಕೊಂಡ ಸಂಗತಿಯನ್ನು ಒಪ್ಪಿಕೊಂಡಿದ್ದರು. ಬಳಿಕ 2016ರಲ್ಲಿ ಅವರು ಪರಸ್ಪರ ಒಪ್ಪಿಗೆಯಿಂದ ತಲಾಕ್ ಬದೆದಿರುವುದಾಗಿ ಹೇಳಿದ್ದರು. ನಂತರ 2017ರಲ್ಲಿ ಅವರು ಕ್ರಾಂತಿ ರೆಡೆಕರ್ ಜೊತೆಗೆ ವಿವಾಹವಾಗಿದ್ದಾರೆ. 

ಇದನ್ನೂ ಓದಿ-Sameer Wankhede ಹಾಗೂ Shah Rukh Khan ಈ ಮೊದಲೂ ಕೂಡ ಮುಖಮುಖಿಯಾಗಿದ್ದಾರೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News