Actress Kushboo Sundar: ಫಲಿಸದ ಪ್ರಾರ್ಥನೆ; ಖ್ಯಾತ ಹಿರಿಯ ನಟಿ ಖುಷ್ಬೂ ಸಹೋದರ ನಿಧನ

Kushboo Brother Abdulla khan died: ‘ಅಣ್ಣ ಹೇಳಿದ ಹಾಗೆ ಬದುಕಿನ ಪಯಣವನ್ನು ದೇವರು ನಿರ್ಧರಿಸುತ್ತಾನೆ. ನಾನು ಆತನೊಂದಿಗೆ ಶಾಶ್ವತವಾಗಿ ಸಂತೋಷವಾಗಿರಲು ಬಯಸುತ್ತೇನೆ’ ಎಂದು ನಟಿ ಖುಷ್ಬೂ ದುಃಖ ವ್ಯಕ್ತಪಡಿಸಿದ್ದಾರೆ.

Written by - Puttaraj K Alur | Last Updated : Dec 18, 2022, 10:10 AM IST
  • ಖ್ಯಾತ ಹಿರಿಯ ನಟಿ ಮತ್ತು ಬಿಜೆಪಿ ನಾಯಕಿ ಖುಷ್ಬೂ ಸಹೋದರ ನಿಧನ
  • ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಬ್ದುಲ್ಲಾ ಖಾನ್ ನಿಧನ
  • ಸಹೋದರನ ನಿಧನಕ್ಕೆ ಪೋಸ್ಟ್ ಹಂಚಿಕೊಂಡು ದುಃಖ ವ್ಯಕ್ತಪಡಿಸಿದ ನಟಿ
Actress Kushboo Sundar: ಫಲಿಸದ ಪ್ರಾರ್ಥನೆ; ಖ್ಯಾತ ಹಿರಿಯ ನಟಿ ಖುಷ್ಬೂ ಸಹೋದರ ನಿಧನ title=
ನಟಿ ಖುಷ್ಬೂ ಸಹೋದರ ನಿಧನ

ನವದೆಹಲಿ: ಖ್ಯಾತ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಅವರ ಸಹೋದರ ಅಬ್ದುಲ್ಲಾ ಖಾನ್ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಖುಷ್ಬೂ ಸಹೋದರ ಶನಿವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದರಿಂದ ನಟಿಯ ಕುಟುಂಬ ಶೋಕದಲ್ಲಿ ಮುಳುಗಿದೆ.

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟಿ ಖುಷ್ಬೂ, ‘ನಿಮ್ಮ ಪ್ರೀತಿಪಾತ್ರರು ನಿಮ್ಮೊಂದಿಗೆ ಶಾಶ್ವತವಾಗಿ ಇರಬೇಕೆಂದು ನೀವು ಬಯಸುತ್ತೀರಿ, ಆದರೆ ಅವರಿಗೆ ವಿದಾಯ ಹೇಳುವ ಸಮಯ ಬರುತ್ತದೆ. ಪ್ರೀತಿಯ ಅಣ್ಣನ ಯಾತ್ರೆ ಇಂದಿಗೆ ಮುಗಿಯಿತು. ಆದರೆ ಅವರ ಪ್ರೀತಿ ಮತ್ತು ಮಾರ್ಗದರ್ಶನ ಸದಾ ನನ್ನೊಂದಿಗಿರುತ್ತದೆ. ನನ್ನ ಸಹೋದರನಿಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: IMDb Top 10 Indian Movies: ಐಎಂಡಿಬಿ ಟಾಪ್​ 10 ಚಿತ್ರಗಳಲ್ಲಿ ಕನ್ನಡ ಸಿನಿಮಾಗಳದ್ದೇ ಮೇಲುಗೈ

‘ಅಣ್ಣ ಹೇಳಿದ ಹಾಗೆ ಬದುಕಿನ ಪಯಣವನ್ನು ದೇವರು ನಿರ್ಧರಿಸುತ್ತಾನೆ. ನಾನು ಆತನೊಂದಿಗೆ ಶಾಶ್ವತವಾಗಿ ಸಂತೋಷವಾಗಿರಲು ಬಯಸುತ್ತೇನೆ’ ಎಂದು ನಟಿ ಖುಷ್ಬೂ ದುಃಖ ವ್ಯಕ್ತಪಡಿಸಿದ್ದಾರೆ. ಪ್ರೀತಿಯ ಅಣ್ಣನಿಗೆ ವಿದಾಯ ಹೇಳುವ ಸಮಯ ಬಂದಿದೆ ಎಂದು ಸಹೋದರನೊಂದಿಗೆ ಇರುವ ಫೋಟೋವನ್ನು ನಟಿ ಖುಷ್ಬೂ ಹಂಚಿಕೊಂಡಿದ್ದಾರೆ.

ಅಭಿಮಾನಿಗಳಿಗೆ ಮನವಿ ಮಾಡಿದ್ದ ಖುಷ್ಬೂ

ತಮ್ಮ ಸಹೋದರನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ವೇಳೆ ಬಹುಭಾಷಾ ನಟಿ ಖುಷ್ಬೂ ಅವರು ಅಣ್ಣನ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.

ಇದನ್ನೂ ಓದಿ: ವಿಭಿನ್ನ ರೀತಿಯ ಪ್ರಚಾರ ತಂತ್ರದ ಮೂಲಕ ಗಮನ ಸೆಳೆಯುತ್ತಿದೆ ‘ಥಗ್ಸ್ ಆಫ್ ರಾಮಘಡ’...!

‘ವೈಯಕ್ತಿಕ ಬದುಕಿನಲ್ಲಿ ಸಂಕಷ್ಟದಲ್ಲಿದ್ದೇನೆ. ನನ್ನ ದೊಡ್ಡ ಅಣ್ಣ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಕಳೆದ 4 ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಣ್ಣನಿಗೆ ನಿಮ್ಮ ಪ್ರಾರ್ಥನೆಯ ಅಗತ್ಯವಿದೆ’ ಎಂದು ಅಂತಾ ನಟಿ ದುಃಖ ವ್ಯಕ್ತಪಡಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News