ಮಧ್ಯರಾತ್ರಿ 2 ಗಂಟೆಗೆ ಶಾರುಖ್‌ಖಾನ್‌ ಭೇಟಿಯಾಗಿ ಕಿಸ್‌ ಮಾಡಿದ ಪ್ಯಾನ್‌..!

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರು ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅವರ ಮುಂಬರುವ ಚಿತ್ರ ಪಠಾನ್‌ನೊಂದಿಗೆ ಮತ್ತೊಮ್ಮೆ ಆನ್-ಸ್ಕ್ರೀನ್ ಮ್ಯಾಜಿಕ್ ಮಾಡಲು ಸಿದ್ಧರಾಗಿದ್ದಾರೆ. ಶಾರುಖ್ ಖಾನ್ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಫ್ಯಾನ್‌ಗಳಿಂದ ಕಿಂಗ್‌ ಖಾನ್‌ ಅಂತ ಶಾರುಖ್‌ ಕರೆಸಿಕೊಳ್ಳುತ್ತಾರೆ. ಇದೀಗ ಬಾದ್‌ ಶಾಗೆ ಪ್ಯಾನ್‌ ಒಬ್ಬ ಕಿಸ್‌ ಮಾಡಿರುವ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

Written by - Krishna N K | Last Updated : Jan 13, 2023, 08:31 PM IST
  • ಶಾರುಖ್ ಖಾನ್ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ.
  • ಫ್ಯಾನ್‌ಗಳಿಂದ ಕಿಂಗ್‌ ಖಾನ್‌ ಅಂತ ಶಾರುಖ್‌ ಕರೆಸಿಕೊಳ್ಳುತ್ತಾರೆ.
  • ಮಧ್ಯರಾತ್ರಿ ಬಾದ್‌ ಶಾಗೆ ಪ್ಯಾನ್‌ ಒಬ್ಬ ಕಿಸ್‌ ಮಾಡಿರುವ ಫೋಟೋಸ್‌ ವೈರಲ್‌ ಆಗಿವೆ.
ಮಧ್ಯರಾತ್ರಿ 2 ಗಂಟೆಗೆ ಶಾರುಖ್‌ಖಾನ್‌ ಭೇಟಿಯಾಗಿ ಕಿಸ್‌ ಮಾಡಿದ ಪ್ಯಾನ್‌..! title=

Shah Rukh Khan fans : ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರು ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅವರ ಮುಂಬರುವ ಚಿತ್ರ ಪಠಾನ್‌ನೊಂದಿಗೆ ಮತ್ತೊಮ್ಮೆ ಆನ್-ಸ್ಕ್ರೀನ್ ಮ್ಯಾಜಿಕ್ ಮಾಡಲು ಸಿದ್ಧರಾಗಿದ್ದಾರೆ. ಶಾರುಖ್ ಖಾನ್ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಫ್ಯಾನ್‌ಗಳಿಂದ ಕಿಂಗ್‌ ಖಾನ್‌ ಅಂತ ಶಾರುಖ್‌ ಕರೆಸಿಕೊಳ್ಳುತ್ತಾರೆ. ಇದೀಗ ಬಾದ್‌ ಶಾಗೆ ಪ್ಯಾನ್‌ ಒಬ್ಬ ಕಿಸ್‌ ಮಾಡಿರುವ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಶಾರುಖ್ ಖಾನ್ ನಿನ್ನೆ ರಾತ್ರಿ ದೆಹಲಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದರು. ಆಗ ಅಭಿಮಾನಿಗಳು ಅವರು ತಂಗಿದ್ದ ಹೋಟೆಲ್‌ನಲ್ಲಿ ಭೇಟಿಯಾಗಲು ಸಾಲುಗಟ್ಟಿ ನಿಂತಿದ್ದರು. ಶಾರುಖ್ ಖಾನ್ ತಮ್ಮ ಅಭಿಮಾನಿಗಳನ್ನು ಸ್ವಾಗತಿಸಿದರು ಮತ್ತು ಪ್ರತಿಯೊಬ್ಬರಿಗೂ ಸಮಯ ನೀಡಿದರು. ಅಭಿಮಾನಿಗಳು ಅವರನ್ನು ಅಪ್ಪಿಕೊಂಡು ಸೇಲ್ಫಿ ತೆಗೆದುಕೊಂಡಿದ್ದಾರೆ. ದೆಹಲಿಯಲ್ಲಿ ರಾತ್ರಿ ಎಸ್‌ಆರ್‌ಕೆ ಅವರನ್ನು ಭೇಟಿಯಾದ ಅಭಿಮಾನಿಯೊಬ್ಬರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಆದ್ರೆ ಮ್ಯಾಟರ್‌ ಏನಪ್ಪಾ ಅಂದ್ರೆ, ಶಾರುಕ್‌ ಅವರನ್ನು ಅಭಿಮಾನಿ ಮೀಟ್‌ ಆದ ಸಮಯ ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ.

ಇದನ್ನೂ ಓದಿ: ಚಿರಂಜೀವಿ ಮೆಗಾ ಆಕ್ಟ್‌, ರವಿತೇಜ ಮಾಸ್‌ ಡೈಲಾಗ್‌.. ʼವಾಲ್ಟೇರ್‌ ವೀರಯ್ಯʼ ಸೂಪರ್‌..!?

ಹೌದು, ಸೋಷಿಯಲ್‌ ಮೀಡಿಯಾದಲ್ಲಿ ಶಾರುಖ್‌ ಮೀಟ್‌ ಮಾಡಿರುವ ಫೋಟೋಗಳನ್ನು ಹಂಚಿಕೊಂಡಿರುವ ಪ್ಯಾನ್ ಒಬ್ಬರು, 'ನಮಗಾಗಿ (ಮಧ್ಯರಾತ್ರಿ 2 ಗಂಟೆಗೆ) ನಿಮ್ಮ ಸಮಯವನ್ನು ಮೀಸಲಿಟ್ಟಿದ್ದಕ್ಕಾಗಿ ಧನ್ಯವಾದಗಳು. ನಿಮ್ಮಂತೆ ಬೇರೆ ಯಾವ ಸೂಪರ್‌ಸ್ಟಾರ್ ತಮ್ಮ ಅಭಿಮಾನಿಗಳಿಗಾಗಿ ಈ ರೀತಿ ಸಮಯ ನೀಡಲ್ಲ. ನಿಮ್ಮ ಹೋಟೆಲ್ ಕೋಣೆಯೊಳಗೆ ನಮ್ಮನ್ನು ಕರೆದು ನಮಗೆ ಪೂರ್ಣ ಸಮಯ ನೀಡಿದ್ದೀರಿ. ನಿಮ್ಮ ಆಶೀರ್ವಾದಕ್ಕೆ ಧನ್ಯವಾದಗಳು. ತಡರಾತ್ರಿಯಲ್ಲಿ ನಿಮಗೆ ತೊಂದರೆ ಕೊಟ್ಟಿದ್ದಕ್ಕೆ ಕ್ಷಮಿಸಿ. ಲವ್‌ ಯೂ ಅಂತ ಶೀರ್ಷಿಕೆ ಬರೆದುಕೊಂಡಿದ್ದಾರೆ.

ಸ್ನ್ಯಾಪ್‌ಗಳಲ್ಲಿ, ನಟ ಶಾರುಖ್ ಖಾನ್ ಅವರಿಗೆ ರಾತ್ರಿ ಭೇಟಿಯಾದ ಅಭಿಮಾನಿ ಕೆನ್ನೆಗೆ ಮುತ್ತು ಕೊಡುತ್ತಿರುವುದನ್ನು ಕಾಣಬಹುದು. ಮತ್ತೊಂದು ಚಿತ್ರದಲ್ಲಿ ಶಾರುಖ್ ಖಾನ್ ಅವರು ತಮ್ಮ ಇನ್ನೊಬ್ಬ ಅಭಿಮಾನಿಯನ್ನು ಅಪ್ಪಿಕೊಂಡಾಗ ಎಲ್ಲರೂ ನಗುತ್ತಿದ್ದಾರೆ. ಇನ್ನೊಂದು ಪೋಸ್ಟ್‌ನಲ್ಲಿ ಜತಿನ್ ಗುಪ್ತಾ ಎಂಬುವರು ಶಾರುಖ್ ಖಾನ್ ಅವರ ಹಸ್ತಾಕ್ಷರವನ್ನು ಹೊಂದಿದ್ದ ಪಠಾಣ್ ಪೋಸ್ಟರ್‌ನ್ನು ಹಂಚಿಕೊಂಡಿದ್ದಾರೆ. ತಮ್ಮನ್ನು ನೋಡಲು ಮಧ್ಯರಾತ್ರಿ ಬಂದ ಅಭಿಮಾನಿಗಳಿಗೆ ನಿರಾಸೆ ಮೂಡಿಸದ ನಟನ ವ್ಯಕ್ತಿತ್ವಕ್ಕೆ ಪ್ಯಾನ್ಸ್‌ ಫಿದಾ ಆಗಿದ್ದಾರೆ. ಅಲ್ಲದೆ, ಬಾಲಿವುಡ್‌ನ ನಿಜವಾದ ಕಿಂಗ್ ಎನ್ನುವುದನ್ನು ಮತ್ತೇ ಸಾಬೀತುಪಡಿಸಿದ್ದಾರೆ ಎಂದು ಕಾಮೆಂಟ್‌ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News