Singer Mangli: "ನನ್ನ ಮೇಲೆ ಯಾವುದೇ ದಾಳಿ ನಡೆದಿಲ್ಲ.." ಮಂಗ್ಲಿ ಬಿಚ್ಚಿಟ್ರು ಅಸಲಿ ವಿಚಾರ.!

Singer Mangli Car Attacked In Bellary : ಸಿಂಗರ್‌ ಮಂಗ್ಲಿ ದಾಳಿಯ ಸುದ್ದಿಯನ್ನು ನಿರಾಕರಿಸಿದ್ದಾರೆ. ಅವರು ಕನ್ನಡ ಜನರಿಂದ ಹೆಚ್ಚಿನ ಬೆಂಬಲವನ್ನು ಪಡೆದಿರುವ ಬಗ್ಗೆ ಹೇಳಿಕೊಂಡಿದ್ದಾರೆ.  

Written by - Chetana Devarmani | Last Updated : Jan 23, 2023, 10:05 AM IST
  • ಬಳ್ಳಾರಿಯಲ್ಲಿ ಮಂಗ್ಲಿ ಕಾರಿನ ಮೇಲೆ ಕಲ್ಲು ತೂರಾಟ ವಿಚಾರ
  • "ನನ್ನ ಮೇಲೆ ಯಾವುದೇ ದಾಳಿ ನಡೆದಿಲ್ಲ"
  • ದಾಳಿಯ ಸುದ್ದಿಯನ್ನು ನಿರಾಕರಿಸಿದ ಮಂಗ್ಲಿ
Singer Mangli: "ನನ್ನ ಮೇಲೆ ಯಾವುದೇ ದಾಳಿ ನಡೆದಿಲ್ಲ.." ಮಂಗ್ಲಿ ಬಿಚ್ಚಿಟ್ರು ಅಸಲಿ ವಿಚಾರ.! title=
Singer Mangli

Stones attack on Singer Mangli car : ಗಾಯಕಿ ಮಂಗ್ಲಿ ಅವರು ನಿನ್ನೆ (ಶನಿವಾರ) ಕರ್ನಾಟಕದ ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದರು. ಆದಾಗ್ಯೂ, ಕೆಲವು ಯುವಕರು ಈವೆಂಟ್ ನಂತರ ಮಂಗ್ಲಿಯನ್ನು ನೋಡಲು ಮೇಕ್ಅಪ್ ಟೆಂಟ್‌ಗೆ ಹೋಗಿದ್ದಾರೆ ಮತ್ತು ಕೆಲವರು ಕಾರಿನ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಈ ಬಗ್ಗೆ ಸಿಂಗರ್‌ ಮಂಗ್ಲಿ ಪ್ರತಿಕ್ರಿಯಿಸಿದ್ದಾರೆ. ದಾಳಿಯ ಸುದ್ದಿಯನ್ನು ನಿರಾಕರಿಸಿದ್ದಾರೆ. ಅವರು ಕನ್ನಡ ಜನರಿಂದ ಹೆಚ್ಚಿನ ಬೆಂಬಲವನ್ನು ಪಡೆದಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಮಂಗ್ಲಿ ಮೇಲಿನ ದಾಳಿಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದು ದುಷ್ಕೃತ್ಯ ಮತ್ತು ಇದು ಸುಳ್ಳು ಸುದ್ದಿ ಎಂದು ಮಂಗ್ಲಿ ಪ್ರತಿಪಾದಿಸಿದ್ದಾರೆ.  

ಇದನ್ನೂ ಓದಿ : ಗಾಯಕಿ ಮಂಗ್ಲಿ ಕಾರ್‌ ಮೇಲೆ ಕಲ್ಲು ಎಸೆತಕ್ಕೆ ಕಾರಣವಾಯ್ತಾ ʼಕನ್ನಡʼದ ಬಗ್ಗೆ ಅಸಡ್ಡೆ..!

ಕೆಲವು ಸಾಮಾಜಿಕ ಮಾಧ್ಯಮ ಗುಂಪುಗಳು ನಿನ್ನೆ ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನನ್ನ ಮೇಲೆ ಹಲ್ಲೆ ನಡೆದಿದೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಈ ಸುಳ್ಳು ಸುದ್ದಿಯನ್ನು ನಾನು ಸಂಪೂರ್ಣವಾಗಿ ಖಂಡಿಸುತ್ತೇನೆ. ಫೋಟೋಗಳು ಮತ್ತು ವಿಡಿಯೋಗಳಲ್ಲಿ ನೀವು ನೋಡುವಂತೆ, ಈವೆಂಟ್ ದೊಡ್ಡ ಯಶಸ್ಸನ್ನು ಕಂಡಿತು ಮತ್ತು ಅತ್ಯುತ್ತಮ ಘಟನೆಗಳಲ್ಲಿ ಒಂದಾಗಿದೆ. ಕನ್ನಡ ಜನರು ನನಗೆ ಪ್ರೀತಿ ಮತ್ತು ಬೆಂಬಲ ನೀಡಿದರು ಎಂದು ಮಂಗ್ಲಿ ಸ್ಪಷ್ಟಪಡಿಸಿದ್ದಾರೆ.  

ತೆಲುಗಿನಲ್ಲಿ ತಮ್ಮ ಕಂಠಸಿರಿಯ ಮೂಲಕ ಖ್ಯಾತರಾಗಿರುವ ಮಂಗ್ಲಿ, ಇತರ ಭಾಷೆಗಳಲ್ಲಿ ತನ್ನ ಗಾಯನದೊಂದಿಗೆ ಜನಪ್ರಿಯತೆಯನ್ನು ಗಳಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ, ಶನಿವಾರ ರಾತ್ರಿ ಬಳ್ಳಾರಿಯಲ್ಲಿ ನಡೆದ ಪುರಸಭೆಯ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಂಗ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ವೇದಿಕೆಯಲ್ಲಿ ಹಾಡುವುದನ್ನು ಕಾಣಬಹುದು. ಅವರ ಪರ್ಫಾಮೆನ್ಸ್‌ ಮುಗಿದ ಮೇಲೆ ಯುವಕರು ವೇದಿಕೆಯ ಹಿಂಭಾಗದಲ್ಲಿರುವ ಟೆಂಟ್‌ಗೆ ಮಂಗ್ಲಿ ಅವರನ್ನು ನೋಡಲು ಪ್ರವೇಶಿಸಿದ್ದಾರೆ. ಅಲ್ಲದೇ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ಹೇಲುವ ವರದಿಗಳು ಎಲ್ಲೆಡೆ ಹರಿದಾಡುತ್ತಿವೆ. ಈ ಮಧ್ಯೆ ಮಂಗ್ಲಿ ಅವರ ಈ ಪ್ರತಿಕ್ರಿಯೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. 

ಇದನ್ನೂ ಓದಿ : Kangana Ranaut: "ಎಮರ್ಜೆನ್ಸಿ ಸಿನಿಮಾಗಾಗಿ ನನ್ನೆಲ್ಲ ಆಸ್ತಿ ಅಡವಿಟ್ಟಿರುವೆ" - ಕಂಗನಾ ರಣಾವತ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News