Suhana Khan : ಬಿಕಿನಿ ತೊಟ್ಟು ಬ್ಯಾಕ್‌ ತೋರಿಸಿದ್ರಾ ʼಶಾರುಖ್‌ ಪುತ್ರಿʼ...! ಫೋಟೋ ʼಅಸಲಿ ಸತ್ಯʼ ಬಯಲು

Suhana khan bold pic : ಬಾಲಿವುಡ್‌ ನಟ ಶಾರುಖ್‌ ಖಾನ್‌ ಮಗಳು ಸುಹಾನಾ ಖಾನ್‌ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ವೈರಲ್‌ ಚಿತ್ರದಲ್ಲಿ ಸುಹಾನಾ ವೈಟ್‌ ಬಣ್ಣದ ಬಿಕಿನಿ ತೊಟ್ಟು ಬೆನ್ನು ತೋರಿಸಿ ಕುಳಿತಿದ್ದಾರೆ. ಆದ್ರೆ, ನಿಜವಾಗ್ಲೂ ಈ ಫೋಟೋದಲ್ಲಿ ಇರುವುದು ಸ್ಟಾರ್‌ ಕಿಡ್‌ ಸುಹಾನಾನಾ..? ಎಂಬ ಸಂಶಯ ಮೂಡುವಂತೆ ಮಾಡಿದೆ.. ಈ ಕುರಿತು ಪ್ಯಾಕ್ಟ್‌ ಚೆಕ್‌ ಇಲ್ಲಿದೆ ನೋಡಿ..

Written by - Krishna N K | Last Updated : Apr 28, 2023, 05:15 PM IST
  • ನಟ ಶಾರುಖ್‌ ಖಾನ್‌ ಪುತ್ರಿ ಸುಹಾನಾ ಖಾನ್‌ ಫೋಟೋ ವೈರಲ್‌.
  • ವೈಟ್‌ ಬಿಕಿನಿಯಲ್ಲಿ ಬೀಚ್‌ ಬಳಿ ಕುಳಿತು ಕ್ಯಾಮರಾಗೆ ಪೋಸ್‌ ಕೊಟ್ಟ ಚೆಲುವೆ.
  • ವೈರಲ್‌ ಚಿತ್ರದಲ್ಲಿರುವುದು ಸುಹಾನ್‌ ಅಲ್ಲ ಎಂದ ಬಾದ್‌ ಶಾ ಪ್ಯಾನ್ಸ್‌.. ಪ್ಯಾಕ್ಟ್‌ ಚೆಕ್‌ ಇಲ್ಲಿದೆ ನೋಡಿ..
Suhana Khan : ಬಿಕಿನಿ ತೊಟ್ಟು ಬ್ಯಾಕ್‌ ತೋರಿಸಿದ್ರಾ ʼಶಾರುಖ್‌ ಪುತ್ರಿʼ...! ಫೋಟೋ ʼಅಸಲಿ ಸತ್ಯʼ ಬಯಲು title=

Suhana khan bikini : ಬಿಟೌನ್‌ ಸ್ಟಾರ್‌ ಕಿಡ್‌ ಸುಹಾನಾ ಖಾನ್ ಯಾವುದೇ ಹಿಟ್‌ ಸಿನಿಮಾ ಮಾಡಿಲ್ಲವಾದ್ರೂ ಸಹ ಫ್ಯಾನ್ಸ್‌ಗಳಿಗೇನು ಕಮ್ಮಿ ಇಲ್ಲ. ಬಾಲಿವುಡ್ ಬಾದ್‌ ಶಾ ಪುತ್ರಿಯ ಸೌಂದರ್ಯಕ್ಕೆ ಅಪಾರ ಅಭಿಮಾನಿ ಬಳಗ ಇದೆ. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಸುಂದರಿ ಆಗಾಗ ಹಾಟ್‌ ಫೋಟೋಸ್‌ ಮೂಲಕ ಟ್ರೆಂಡಿಂಗ್‌ನಲ್ಲಿರುತ್ತಾರೆ. ಸದ್ಯ ಸುಹಾನಾ ಬಿಕಿನಿ ಫೋಟೋ ಒಂದು ವೈರಲ್‌ ಆಗಿದ್ದು, ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್‌ ಮಾಡುತ್ತಿದೆ.

ಹೌದು.. ಬೀಚ್‌ ನೋಡುತ್ತ ಬ್ಯಾಕ್‌ ತೋರಿಸಿಕೊಂಡು ಸುಹಾನಾ ಕಟ್ಟೆಯ ಮೇಲೆ ಕುಳಿತಿರುವ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ರಜೆಯ ಮಜಾ ಮಾಡಲು ಬೀಚ್ ಹೋದಾಗ ತೆಗೆದ ಚಿತ್ರ ಇದು ಅಂತ ನೆಟ್ಟಿಗರು ಹೇಳುತ್ತಿದ್ದಾರೆ. ಅದ್ರೆ, ಸುಹಾನಾ ಪ್ಯಾನ್ಸ್‌ ಮಾತ್ರ ಇದು ಫೇಕ್‌ ಫೋಟೋ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ರೆ, ನಿಜವಾಗ್ಲೂ ಈಗ ವೈರಲ್‌ ಆಗಿರುವ ಫೋಟೋದಲ್ಲಿರುವುದು ಸುಹಾನಾ ಖಾನ್‌ ಅವರಾ ಅಥವಾ ಬೆರೆಯವರಾ..? ಎನ್ನುವುದನ್ನ ನಾವು ಹೇಳ್ತೀವಿ ಕೇಳಿ..

ಇದನ್ನೂ ಓದಿ: Alia Bhatt: ಗಂಗೂಬಾಯಿ ಆಲಿಯಾ ಭಟ್‌‌ಗೆ ಒಲಿದ  ಫಿಲ್ಮ್‌ಫೇರ್ ಪ್ರಶಸ್ತಿ

ಹಲವಾರು ಮಾಧ್ಯಮಗಳಲ್ಲಿ ಸುಹಾನಾ ರಜೆಯಲ್ಲಿದ್ದಾರೆ, ಬಿಕಿನಿ ತೊಟ್ಟು ಬೀಚ್‌ನಲ್ಲಿ ಮಸ್ತ್‌ ಮಜಾ ಮಾಡುತ್ತಿದ್ದಾರೆ ಅಂತ ಒಂದು ಫೋಟೋ ಹಂಚಿಕೊಂಡಿದ್ದಾರೆ. ಅದ್ರೆ, ನಿಜವಾಗ್ಲೂ ಆ ಫೋಟೋದಲ್ಲಿ ಇರೋದು ಸಹಾನಾನಾ ಎಂಬುವುದು ಎಲ್ಲರ ಡೌಟ್‌.. ಯಸ್‌ ನಿಮ್ಮ ಅನುಮಾನ ಸರಿಯಾಗಿದೆ. ಆ ವೈರಲ್‌ ಚಿತ್ರದಲ್ಲಿರುವುದು ಬಾಲಿವುಡ್‌ ನಟ ಶಾರುಖ್‌ ಖಾನ್‌ ಮತ್ತು ಗೌರಿ ಖಾನ್‌ ಪುತ್ರಿ ಸುಹಾನಾ ಖಾನ್‌ ಆಲ್ಲ..

ಯೆಸ್‌... ನೀವು ಕೇಳಿದ್ದರು ನಿಜ. ಸುಹಾನಾ ಫೋಟೋ ಅಂತ ಹೇಳಲಾಗುತ್ತಿರುವ ಚಿತ್ರದಲ್ಲಿ ಇರುವುದು ಸೌತ್‌ ಸಿನಿರಂಗದ ಸ್ಟಾರ್‌ ನಟಿ ಸಾನ್ವಿ ಶ್ರೀವಾತ್ಸವ್, ಇತ್ತೀಚಿಗೆ ಬಿಕಿನಿಯಲ್ಲಿ ಮಿಂಚಿದ್ದ ಸಾನ್ವಿ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಅವುಗಳ ಪೈಕಿ ಸಮುದ್ರ ನೋಡುತ್ತ ಬೆನ್ನು ತೋರಿಸಿ ಕುಳಿತಿದ್ದ ಚೆಲುವೆಯ ಫೋಟೋ ನೋಡಿ ಎಲ್ಲರೂ ಸುಹಾನಾ ಅಂತ ತಿಳಿದಿದ್ದರು. ಅದ್ರೆ ಇದೀಗ ಪ್ಯಾಕ್ಟ್‌ ಚೆಕ್‌ ಮಾಡಿದಾಗ ಈ ಸುದ್ದಿ ಬಯಲಾಗಿದೆ. 

ಇದನ್ನೂ ಓದಿ: Rashmika Mandanna: ಪ್ರತಿ ಸಿನಿಮಾಗೆ ರಶ್ಮಿಕಾ ಮಂದಣ್ಣ ಪಡೆಯೋ ಸಂಭಾವನೆ ಎಷ್ಟು ಗೊತ್ತಾ?

ಇನ್ನು ಖಾನ್‌ ಪುತ್ರಿ ಜೋಯಾ ಅಖ್ತರ್ ಅವರ ನಿರ್ದೇಶನದ ದಿ ಆರ್ಚೀಸ್‌ ಸಿನಿಮಾದೊಂದಿಗೆ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದೆ. ಈಗಾಗಲೇ ತನ್ನ ಅಪರೂಪದ ಸೌಂದರ್ಯದಿಂದಲೇ ಫೇಮ್‌ ಗಿಟ್ಟಿಸಿಕೊಂಡಿರುವ ಚೆಲುವೆ ನಟನೆಯಲ್ಲಿ ಯಾವ ರೀತಿಯ ಪ್ರಭಾವ ಬೀರುತ್ತಾರೆ ಎನ್ನುವುದನ್ನು ಕಾಯ್ದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News